ಕಬ್ಬಿನ ಗದ್ದೆಯಲ್ಲಿ ನಡೆಯುತ್ತಿದ್ದ ಅಕ್ರಮ ಒಂದು ಪತ್ತೆಯಾಗಿದ್ದು ಈ ನಿಟ್ಟಿನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. 

ಹಾಸನ [ಅ.13] : ತಾಲೂಕಿನ ನಿಟ್ಟೂರು ಸಮೀಪದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದನ್ನು ಪತ್ತೆ ಹಚ್ಚಲು ಯಶಸ್ವಿಯಾಗಿರುವ ಜಿಲ್ಲಾ ಅಬಕಾರಿ ಅಧಿಕಾರಿಗಳು ಇಬ್ಬರನ್ನು ಇತ್ತೀಚೆಗೆ ಬಂಧಿಸಿದ್ದಾರೆ.

ಬಂಧಿತರು ಸ್ಥಳೀಯ ನಿವಾಸಿ ನಾಗರಾಜ್‌ ಮತ್ತು ದಾವಣಗೆರೆ ಮೂಲದ ಶೇಖರಪ್ಪ ಎಂದು ತಿಳಿದು ಬಂದಿದೆ.

ಪತ್ತೆಯಾಗಿದ್ದು ಹೇಗೆ? :  ನಿಟ್ಟೂರು ಬಳಿಯ ನಾಗೇನಹಳ್ಳಿ ಭಾಗದಲ್ಲಿ ಕದ್ದು ಮುಚ್ಚಿ ಗಾಂಜಾ ಬೆಳೆಯಲಾಗಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಬಕಾರಿ ಡಿಸಿ ಗೋಪಾಲ ಕೃಷ್ಣಗೌಡ ನಿರ್ದೇಶನದ ಮೇರೆಗೆ ಸಿಬ್ಬಂದಿ ಮಫ್ತಿಯಲ್ಲಿ ಗಸ್ತು ತಿರುಗಿ ಕಳೆದ 10 ದಿನಗಳಿಂದ ತಲಾಶ್‌ ನಡೆಸಿದ್ದರು. ಆದರೂ ಯಾವುದೆ ಸುಳಿವು ಸಿಕ್ಕಿರಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಬ್ಬಿನೊಳಗೆ ಬೆಳೆ : ಬುಧವಾರ ನಾಗೇನಹಳ್ಳಿಯ ಅಶೋಕ್‌ ಎಂಬುವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆದು ಅದರ ಮಧ್ಯೆ ಗಾಂಜಾ ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಡಿಸಿ ನೇತೃತ್ವದ ತಂಡ ಅಕ್ರಮ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. ದಾಳಿ ನಂತರ ಅಶೋಕ್‌ ಎಂಬುವರಿಂದ ಜಮೀನನ್ನು ಗುತ್ತಿಗೆ ಪಡೆದಿದ್ದ ಪ್ರಕಾಶ್‌ ಅಲಿಯಾಸ್‌ ಪಚ್ಚಿ ಅದರೊಳಗೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ.

ಕಡೆಗೂ ಇದನ್ನು ಬಯಲಿಗೆಳೆದ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 60 ಕೆಜಿಯಷ್ಟುಹಸಿ ಗಾಂಜಾ ವಶಪಡಿಸಿಕೊಂಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದ ಗಾಂಜಾ ಅಕ್ರಮ ಎನ್ನಲಾಗಿದೆ. ಪ್ರಕಾಶ್‌ ಅಲಿಯಾದ್‌ ಪಚ್ಚಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ.