ಹಾಸನ (ಅ.19): ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿ ದರ್ಶನೋತ್ಸವ  ಮುಂದುವರಿದಿದ್ದು, ಸಹಸ್ರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿ ದರ್ಶನ ಪಡೆದು ಪುನೀತರಾದರು. 

ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರು ಮತ್ತು ಬಡವರ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಎಂದು ದೇವಿ ದರ್ಶನ ಪಡೆದ ನಂತರ  ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೇ, ರಾಜ್ಯದಲ್ಲಿ ನೆರೆಪೀಡಿತ ಜನರು ಸಂಕಷ್ಟದಲ್ಲಿದ್ದು, ಅವರ ಸಮಸ್ಯೆಯನ್ನು ದೂರ ಮಾಡಲಿ. ಜನರಿಗೆ ಸಂತಸದ ದಿನಗಳು ಬರಲಿ ಎಂದು ಸಹ ದೇವರಲ್ಲಿ ಬೇಡಿ ಕೊಂಡಿದ್ದೇನೆ ಎಂದು ಹೇಳಿದರು.

ಜಿಪಂ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ರಾಜ್ಯದ ಎಲ್ಲ ಜನತೆಗೂ ಒಳಿತುಂಟು ಮಾಡಲಿ ಎಂದು ದೇವಿಯಲ್ಲಿ ಬೇಡಿಕೊಂಡಿರುವುದಾಗಿ ಹೇಳಿದರು.