ಹಾಸನ [ಅ.20]: ಶೀಘ್ರದಲ್ಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಹುಣಸೂರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. 

ಹಾಸನಕ್ಕೆ ಭೇಟಿ ನೀಡಿ ಅಧಿದೇವತೆ ಹಾಸನಾಂಬೆ ದರ್ಶನ ಪಡೆದ ವಿಶ್ವನಾಥ್ ಕಷೇತ್ರದ ಮತದಾರರು ದಯಮಾಡಿ ಓಟ್ ನೀಡಿ ಎಂದು ಈ ವೇಳೆ ಮನವಿ ಮಾಡಿದರು. 

ಹಾಸನಾಂಬೆ ತಾಯಿ ಯಾವ ಕಡೆ ಆಶೀರ್ವಾದ ಮಾಡುತ್ತಾಳೋ ನೋಡೋಣ. ನನ್ನ ಕ್ಷೇತ್ರದಲ್ಲಿ ಬೇರೆಯವರು ನಿಲ್ಲುತ್ತಾರೆ ಎನ್ನುವುದು ಕಟ್ಟುಕಥೆ ಎಂದು ವಿಶ್ವನಾಥ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಣಸೂರು ನಾನು ಗೆದ್ದು ರಾಜೀನಾಮೆ ಕೊಟ್ಟ ಕ್ಷೇತ್ರ. ಹುಣಸೂರಲ್ಲಿ ನಾನೇ, ಇನ್ಯಾರು ಇಲ್ಲ ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಹೇಳಿದರು.