ಹಾಸನ [ಅ.08]: ಮತ್ತೆ ಮಲೆನಾಡು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದು,  ಕೆರೆ ಏರಿ ಒಡೆದು ಅಪಾರ ಪ್ರಮಾಣದ 
ಬೆಳೆ ನಷ್ಟವಾಗಿದೆ.

ಸಕಲೇಶಪುರ ತಾಲೂಕಿನ ಅವರೇಕಾಡು ಗ್ರಾಮದಲ್ಲೆ ಕೆರೆ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಜೋರು ಮಳೆಗೆ ತುಂಬಿ‌ದ್ದ ಕೆರೆ ಕೆರೆ ಏರಿ ಒಡೆದಿದ್ದು, ಸಕಲೇಶಪುರದಿಂದ ಕೆರೆಕೋಡಿ, ಹುರುಡಿ,
ಬಾಚನಹಳ್ಳಿ ಗ್ರಾಮಗಳಿಗೆ ಸಂಪರ್ಕದ ರಸ್ತೆ ಕಡಿತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆರೆ ಒಡೆದ ಪರಿಣಾಮ  ಒಟ್ಟು ಐದು ಎಕರೆ ಜಮೀನು ಸಂಪೂರ್ಣ ನೀರಿನಿಂದಾವೃತವಾಗಿದ್ದು, ಅಡಿಕೆ ಮತ್ತು ಕಾಫಿ ಬೆಳೆ ನಷ್ಟವಾಗಿದೆ. 

ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುವಂತೆ ಜನರು ಆಗ್ರಹಿಸುತ್ತಿದ್ದಾರೆ.