ಹಾಸನ [ಅ.18] : ಮಾಜಿ ಸಚಿವ ರಾಜೀನಾಮೆ ಹಳೆ ವಿಚಾರ. ಅವರನ್ನು ಎಚ್.ಡಿ ದೇವೇಗೌಡ, ಕುಮಾರಣ್ಣ, ರೇವಣ್ಣ ಮನ ಒಲಿಸಿದ್ದಾರೆ ಎಂದು ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. 

ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನದ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ ವಿಶ್ವನಾಥ್- ಸಾರಾ ಮಹೇಶ್ ಆಣೆ ಪ್ರಮಾಣ ಅವರಿಬ್ಬರ ವೈಯಕ್ತಿಕ ವಿಚಾರ. ಅದರ ಬಗ್ಗೆ ಅವತ ಬಳಿಯ ಕೇಳಬೇಕು ಎಂದರು. 

ಹಾಸನಾಂಬೆಯ ಬಳಿ ರಾಜ್ಯದ ನೆರೆ ಪೀಡಿತ ಜನರಿಗೆ ಸಂತಸದ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಹಾಸನಾಂಬ ಉತ್ಸವದ ಆಹ್ವಾನ ಪತ್ರಿಯಲ್ಲಿ ಸಂಸದರ ಹೆಸರು ಹಾಕದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಪ್ರಜ್ವಲ್,  ಈ ನಡೆ ಬೇಸರ ತರಿಸಿತ್ತು.  ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ನಾನೇ ಮಾತನಾಡಿದ್ದೆ. ದ್ವೇಷದ ನಡೆ ಎಂದಿಗೂ ನಡೆಯಬಾರದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದೇ ಇರಲಿ ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ಹೇಳಿಕೆ ನೀಡಿದರು. 

ಹಾಸನಾಂಬ ದೇವಿ ಉತ್ಸವ ಅಕ್ಟೋಬರ್ 17 ರಿಂದ ಆರಂಭವಾಗಿದ್ದು, ಒಟ್ಟು 11 ದಿನಗಳ ಕಾಲ ನಡೆಯಲಿದೆ.