Asianet Suvarna News Asianet Suvarna News

'ಹೆಣ್ಣು, ಗಂಡಿಗೆ ಆಸ್ತಿಯಲ್ಲಿ ಸಮಾನ ಹಕ್ಕು'

ಹಿಂದೂ ಸೆಕ್ಷನ್‌ ಆಕ್ಟ್ ಕಾಯ್ದೆ ಅನ್ವಯ ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಬೇಧವಿಲ್ಲ. ಎಲ್ಲಾರಿಗೂ ಕೂಡ ಸಮಾನ ಹಕ್ಕುಗಳು ಸಿಗುತ್ತಿದೆ. ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೆ ಕಾನೂನುಗಳು ಇದ್ದರೂ ಸಹಾ ಅವರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಸಾಧ್ಯವಾಗದೇ ಇನ್ನು ಮುಂದುವರೆದಿದೆ ಎಂದು ನ್ಯಾಯಾಧೀಶ ಬಸವರಾಜು ಹೇಳಿದರು.

Daughter Also Have Equal Property Right in Family
Author
Bengaluru, First Published Oct 12, 2019, 9:24 AM IST

 ಹಾಸನ [ಅ.12]:  ಯಾವಾಗಲು ನಿಮ್ಮ ಬುದ್ಧಿ ಮತ್ತೊಬ್ಬರಿಗೆ ಕೊಡಲು ಅವಕಾಶ ನೀಡದೆ ನಿಮ್ಮ ಕೈಲೆ ಇರಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ಕೆ. ಬಸವರಾಜು ಹೇಳಿದರು.

ನಗರದ ಕೇಂದ್ರ ಗ್ರಂಥಾಲಯ ಬಳಿ ಇರುವ ವಾಣಿ ವಿಲಾಸ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಾಸನಾಂಬ ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿಮಿತ್ತ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಮೊಬೈಲ್‌ ಬಳಕೆ, ಅದರಲ್ಲೂ ಮುಖ್ಯವಾಗಿ ಆನ್‌ಲೈನ್‌ ಬಳಕೆಯಿಂದ ತುಂಬ ತೊಂದರೆಯಾಗುತ್ತಿದ್ದು, ಮೊಬೈಲ್‌ ಬಳಕೆ ಮಾಡುವುದಕ್ಕೆ ಯಾವ ಅಭ್ಯಂತರವಿಲ್ಲ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅವಶ್ಯಕವಾದನ್ನು ಮಾತ್ರ ಉಪಯೋಗಿಸಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂದು ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ವರದಕ್ಷಿಣೆ ಎಂಬುದು ಇತ್ತು. ಇಂದು ವಧು ದಕ್ಷಿಣೆ ಇದೆ. ಅಂತರ್‌ ಜಾತಿ ವಿವಾಹ ಬರುತ್ತಿದೆ. ಹೆಣ್ಣು ಮಕ್ಕಳಿಗೆ ಮುಂದೆ ಉಜ್ವಲ ಭವಿಷ್ಯವಿದ್ದು, ಉತ್ತಮ ಕಾನೂನು ಕೂಡ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರಲಾಗಿದೆ. ಯಾವಾಗಲು ನಮ್ಮ ಬುದ್ಧಿ ನಮ್ಮ ಕೈಲಿ ಇರಬೇಕು. ಮನೆಯಲ್ಲಿ ತಂದೆ-ತಾಯಿಗೆ ಗೌರವ ಗುರು-ಹಿರಿಯರಿಗೆ ಗೌರವ ಕೊಟ್ಟವರ ಮುಂದಿನ ಭವಿಷ್ಯ ಅತ್ಯುತ್ತಮವಾಗಿರುತ್ತದೆ ಎಂದರು.

ಆಸ್ತಿಯಲ್ಲಿ ಸಮಾನ ಪಾಲು

ಸ್ವಾತಂತ್ರ್ಯ ಬಂದು ಇಷ್ಟುವರ್ಷಗಳು ಕಳೆದ ಮೇಲೆ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಒದಗಿಸುತ್ತಿದೆ. ಹಿಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಸಮಪಾಲು ಇರಲಿಲ್ಲ. ಅವರಿಗೆ ತಂದೆ ಪಾಲಿನಲ್ಲಿ ಮಾತ್ರ ಆಸ್ತಿ ಸಿಗುತಿತ್ತು. ಗಂಡು ಮಕ್ಕಳಿಗೆ ಸಿಗುವ ಪಾಲು ಹೆಣ್ಣು ಮಕ್ಕಳಿಗೆ ಇರಲಿಲ್ಲ. ಇತ್ತೀಚಿನ ಹಿಂದೂ ಸೆಕ್ಷನ್‌ ಆಕ್ಟ್ ಕಾಯ್ದೆ ಅನ್ವಯ ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಬೇಧವಿಲ್ಲ. ಎಲ್ಲಾರಿಗೂ ಕೂಡ ಸಮಾನ ಹಕ್ಕುಗಳು ಸಿಗುತ್ತಿದೆ. ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೆ ಕಾನೂನುಗಳು ಇದ್ದರೂ ಸಹಾ ಅವರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಸಾಧ್ಯವಾಗದೇ ಇನ್ನು ಮುಂದುವರೆದಿದೆ. ನಮ್ಮ ಭಾರತ ದೇಶದ ಬಹುತೇಕ ಕಾನೂನುಗಳು ಹೆಣ್ಣು ಮಕ್ಕಳ ಪರವಾಗಿಯೇ ಇದ್ದರೂ ಸಹ ಅಪರಾಧಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಸರಿಯಾಗಿ ಕಾನೂನುಗಳನ್ನು ಪಾಲನೆ ಮಾಡದಿರುವುದು ಇದಕ್ಕೆ ಮುಖ್ಯ ಕಾರಣ. ಅನೇಕ ಕಾನೂನುಗಳು ಇದ್ದರೂ ಸಮರ್ಪಕವಾಗಿ ಪಾಲನೆ ಮಾಡುವಲ್ಲಿ ವಿಫಲರಾಗಿದ್ದೇವೆ ಎಂದು ನ್ಯಾಯಾಧೀಶ ಸಿ.ಕೆ. ಬಸವರಾಜು ಆತಂಕ ವ್ಯಕ್ತಪಡಿಸಿದರು.

Follow Us:
Download App:
  • android
  • ios