- Home
- News
- World News
- ತ್ರಿಮೂರ್ತಿಗಳ ತಾಕತ್ತಿಗೆ ಬೆಪ್ಪಾದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್; ಅಮೆರಿಕಾಗೆ 'ಶಕ್ತಿ' ಸಂದೇಶ ರವಾನೆ
ತ್ರಿಮೂರ್ತಿಗಳ ತಾಕತ್ತಿಗೆ ಬೆಪ್ಪಾದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್; ಅಮೆರಿಕಾಗೆ 'ಶಕ್ತಿ' ಸಂದೇಶ ರವಾನೆ
ಕ್ಸಿ ಜಿನ್‌ಪಿಂಗ್, ಪುಟಿನ್ ಮತ್ತು ಕಿಮ್ ಜಾಂಗ್ ಉನ್ ಚೀನಾದ ವಿಕ್ಟರಿ ಡೇ ಪರೇಡ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಅಮೆರಿಕಕ್ಕೆ ಶಕ್ತಿ ಪ್ರದರ್ಶನದ ಸಂದೇಶವನ್ನು ರವಾನಿಸಿದೆ. ಮೋದಿ, ಪುಟಿನ್ ಮತ್ತು ಜಿನ್‌ಪಿಂಗ್ ಒಟ್ಟಾಗಿ ಕಾಣಿಸಿಕೊಂಡ ನಂತರ ಈ ತ್ರಿಮೂರ್ತಿಗಳ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ.

ಬೀಜಿಂಗ್: ಇತ್ತೀಚಿಗೆ ಶಾಂಘೈ ಸಹಕಾರ ಶೃಂಗದ ವೇಳೆ ಭಾರತದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಕಾಣಿಸಿಕೊಂಡು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂದೇಶ ರವಾನಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇದೀಗ ಪುಟಿನ್ ಮತ್ತು ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೂ ಅದೇ ರೀತಿಯ ಫೋಟೋಶೂಟ್ ಮೂಲಕ ಅಮೆರಿಕಕ್ಕೆ ತಮ್ಮ ಶಕ್ತಿಯ ಸಂದೇಶ ರವಾನಿಸಿದ್ದಾರೆ.
ಚೀನಾದ ವಿಕ್ಟರಿ ಡೇ ಪರೇಡ್‌ನಲ್ಲಿ ಭಾಗಿಯಾಗಲು ಆಗಮಿಸಿರುವ ರಷ್ಯಾ, ಕೊರಿಯಾದ ನಾಯಕರ ಜೊತೆಗೆ ಜಿನ್‌ಪಿಂಗ್ ಅತ್ಯಂತ ಆಪ್ತವಾಗಿ ಕಾಣಿಸಿಕೊಂಡು ತಮ್ಮ ರಾಜತಾಂತ್ರಿಕತೆ ಶಕ್ತಿಯ ಪರಿಚಯ ಮಾಡಿಕೊಟ್ಟಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವಿನ ಆಪ್ತತೆ, ರಷ್ಯಾ ಅಧ್ಯಕ್ಷ ಪುಟಿನ್ ಸ್ವತಃ ತಮ್ಮ ಕಾರಲ್ಲೇ ಮೋದಿಯನ್ನು ಕೂರಿಸಿ ರಹಸ್ಯ ಸಭೆ ನಡೆಸಿದ್ದು, ಮೂವರೂ ನಾಯಕರು ಒಂದೇ ಫೋಟೋದಲ್ಲಿ ಆತ್ಮೀಯತೆಯಿಂದ ಮಾತನಾಡಿದ್ದು, ಅಮೆರಿಕದ ಬೆದರಿಸುವ ತೆರಿಗೆ ನೀತಿಯ ಬಗ್ಗೆ ಸ್ವತಃ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಕಟುನುಡಿಗಳ ಗುರಿ ನೇರವಾಗಿ ವಾಷಿಂಗ್ಟನ್‌ನತ್ತ ನೆಟ್ಟಿದ್ದು ಕಂಡುಬಂತು.
ಶಾಂಘೈ ಸಹಕಾರ ಶೃಂಗದ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಗಮನ ಹರಿಸದ ಅಮೆರಿಕದ ಪ್ರತಿಷ್ಠಿತ ಮಾಧ್ಯಮಗಳು ಕೂಡಾ ‘ಈ ಮೂವರು ನಾಯಕರ ಮಹಾಸಂಗಮವು ಟ್ರಂಪ್‌ರನ್ನೇ ಉದ್ದೇಶಿಸಿತ್ತು’ ಎಂದು ವಿಶ್ಲೇಷಿಸುವ ಮೂಲಕ ತ್ರಿವಳಿ ನಾಯಕರ ಒಗ್ಗಟ್ಟು ಫಲ ಕೊಟ್ಟಿದೆ ಎಂದು ವಿಶ್ಲೇಷಿಸಿವೆ.