ಸಿದ್ಧಾರ್ಥ ಮದುವೆಯಲ್ಲಿ ವಿಜಯ್ ಮಲ್ಯ, ಲಲಿತ್ ಮೋದಿ; ಫೋಟೋಗಳಲ್ಲಿ ನೋಡಿ
ಮದ್ಯದ ದೊರೆ ಅಂತಾನೇ ಕರೆಸಿಕೊಳ್ಳುತ್ತಿದ್ದ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ಸೆಟಲ್ ಆಗಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮದುವೆಯಾಗಿತ್ತು.
ಇದೀಗ ಮಗ ಸಿದ್ಧಾರ್ಥ್ ಮದುವೆಯಲ್ಲಿ ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಭಾಗಿಯಾಗಿರುವ ಫೋಟೋಗಳು ಹೊರ ಬಂದಿವೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
900 ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಓಡಿ ಹೋಗಿರುವ ವಿಜಯ್ ಮಲ್ಯ ಇಂಗ್ಲೆಂಡ್ ಸೇರಿಕೊಂಡಿದ್ದಾನೆ. ಇದೀಗ ಇಲ್ಲಿಯೇ ನಡೆದ ಮಗನ ಮದುವೆಯಲ್ಲಿ ವಿಜಯ್ ಮಲ್ಯ ಭಾಗಿಯಾದ ಫೋಟೋಗಳು ಹೊರ ಬಂದಿವೆ.
siddharth malya
ಸಿದ್ಧಾರ್ಥ್ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. 2023ರಲ್ಲಿ ಸಿದ್ಧಾರ್ಥ್ ಮತ್ತು ಜಾಸ್ಮೀನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದೂವರೆ ವರ್ಷದ ಬಳಿಕ ಮದುವೆಯಾಗಿದ್ದಾರೆ.
ಸಿದ್ಧಾರ್ಥ್ ಮಲ್ಯ ಮತ್ತು ಜಾಸ್ಮೀನ್ ಮದುವೆಯಲ್ಲಿ ಹಲವು ವಿದೇಶಿ ಗಣ್ಯರು ಭಾಗಿಯಾಗಿದ್ದರು. ಕೇವಲ ಆಪ್ತರಿಗಷ್ಟೇ ಮದುವೆಗೆ ಆಹ್ವಾನ ನೀಡಲಾಗಿತ್ತು. ವಿದೇಶಕ್ಕೆ ತೆರಳಿದಾಗ ಸಿದ್ದಾರ್ಥ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಸಿದ್ದಾರ್ಥ್ ನೆರವಿಗೆ ಜಾಸ್ಮೀನ್ ಬಂದಿದ್ದರು.
2023ರ ಆರಂಭದಲ್ಲಿಯೇ ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಗೆಳತಿ ಜಾಸ್ಮೀನ್ ಮುಂದೆ ಮೊಳಕಾಲೂರಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಪ್ರಪೋಸ್ ಮಾಡಿದ ಫೋಟೋ ಸಹ ವೈರಲ್ ಆಗಿತ್ತು. ಜಾಸ್ಮೀನ್ ಸಹ ಸಿದ್ಧಾರ್ಥ್ ಪ್ರೀತಿಯನ್ನು ಒಪ್ಪಿಕೊಂಡಿದ್ದರು.
ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಜೊತೆ ಸಿದ್ದಾರ್ಥ್ ಮಲ್ಯ ಹೆಸರು ಕೇಳಿ ಬಂದಿತ್ತು. ಐಪಿಎಲ್ ಪಂದ್ಯದ ವೇಳೆ ಇಬ್ಬರು ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಐಪಿಎಲ್ ಪಂದ್ಯ ವೀಕ್ಷಣೆ ವೇಳೆಗೆ ದೀಪಿಕಾಗೆ ಸಿದ್ಧಾರ್ಥ್ ಕಿಸ್ ಮಾಡಿದ್ದರು.
ಕಾಲನಂತರ ದೀಪಿಕಾ ಮತ್ತು ಸಿದ್ಧಾರ್ಥ್ ಬ್ರೇಕಪ್ ಮಾಡಿಕೊಂಡು ಬೇರೆ ಬೇರೆಯಾಗಿದ್ದರು. ಇದೀಗ ಮದುವೆಯಾಗಿರುವ ಸಿದ್ಧಾರ್ಥ್ ಮಲ್ಯ ಪತ್ನಿ ಜಾಸ್ಮೀನ್ ಜೊತೆ ಹನಿಮೂನ್ ಗಾಗಿ ವಿಶೇಷ ಸ್ಥಳಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.