ಗರ್ಭದಲ್ಲಿರುವ ಶಿಶು ಮೇಲೆ ಹೀಗೆ ಅಟ್ಯಾಕ್ ಮಾಡುತ್ತೆ ಕೊರೋನಾ!
ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ವೈರಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇದರೊಂದಿಗೆ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗ ಗರ್ಭಿಣಿ ಮಹಿಳೆಯರಿಗೂ ಕೊರೋನಾ ವೈರಸ್ ಸೋಂಕು ತಗುಲಿರುವ ವರದಿಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ ಗರ್ಭದಲ್ಲಿರುವ ಶಿಶುವಿಗೂ ಕೊರೋನಾ ತಗುಲಿದ ಸುದ್ದಿಯೂ ಕೇಳಿ ಬಂದಿದೆ. ಇದರಿಂದಾಗಿ ಒಂದೋ ಮಗುವಿನ ತೂಕ ಕಡಿಮೆ ಇರುತ್ತದೆ ಇಲ್ಲವೇ ಯಾವುದಾದರೂ ಅಂಗ ಡ್ಯಾಮೇಜ್ ಆಗುತ್ತದೆ. ಹಾಗಾದ್ರೆ ಕೊರೋನಾ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಮೇಲೆ ಹೇಗೆ ಅಟ್ಯಾಕ್ ಮಾಡುತ್ತದೆ ಎಂದು ತಿಳಿಯುವ ನಿಟ್ಟಿನಲ್ಲಿ ವಿಜ್ಞಾನಿಗಳು 16 ಗರ್ಭಿಣಿ ಮಹಿಳೆಯರ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಬಂದ ವರದಿ ಹೀಗಿದೆ.
ಇಲಿಯೋನಿಸ್‌ನ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು 16 ಗರ್ಭಿಣಿ ಮಹಿಳೆಯರ ಮೇಲೆ ಕೊರೋನಾ ವೈರಸ್ ಸಂಬಂಧ ಅಧ್ಯಯನ ನಡೆಸಿದ್ದಾರೆ. ಈ ಎಲ್ಲಾ ಮಹಿಳೆಯರು ಕೊರೋನಾ ಸೋಂಕಿತರಾಗಿದ್ದರು.
ಈ ಅಧ್ಯಯನದಲ್ಲಿ 16 ಗರ್ಭಿಣಿಯರ ದೇಹದೊಳಗೆ ಸೇರಿಕೊಂಡಿದ್ದ ಕೊರೋನಾ ವೈರಸ್ ಹೇಗೆ ನಿಧಾನವಾಗಿ ರಕ್ತವನ್ನು ಗಟ್ಟಿಗೊಳಿಸಿರುವುದನ್ನು ಕಂಡುಕೊಳ್ಳಲಾಯಿತು. ಇದರಿಂದ ಕೆಲ ಅಂಗಗಳು ಡ್ಯಾಮೇಜ್ ಆಗಿದ್ದವು.
ಕೊರೋನಾ ವೈರಸ್ ತಾಯಿ ಹಾಗು ಶಿಶುವಿನ ನಡುವೆ ವೈಟಲ್ ವಿಟಮಿನ್ ಶೇಖರಿಸುವ ಪ್ಲಾಸೆಂಟಾ ಮೇಲೆ ಮೊದಲು ದಾಳಿ ಮಾಡುತ್ತದೆ. ಇದರಿಂದಾಗಿ ಮಗು ಜನಿಸುವಾಗ ಶಕ್ತಿಹೀನವಾಗಿರುತ್ತದೆ ಎಲ್ಲವೇ ಸಾಯುತ್ತದೆ.
ಅಧ್ಯಯನದ ವೇಳೆ 16 ಗರ್ಭಿಣಿಯರಿಗೆ ನೀಡಲಾದ ಹೆರಿಗೆ ದಿನಾಂಕದಂದೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಿರುವಾಗ ಓರ್ವ ಮಹಿಳೆಯ ಮಗು ಗರ್ಭದಲ್ಲೇ ಸಾವನ್ನಪ್ಪಿದೆ. ಆದರೆ ಈ ಮಗು ಸಾವನ್ನಪ್ಪಿದ್ದು ಕೊರೋನಾದಿಂದಾಗಿಯೋ ಅಥವಾ ಬೇರೆ ಕಾರಣದಿಂದಲೋ ಎಂಬುವುದನ್ನು ವಿಜ್ಞಾನಿಗಳು ದೃಢಪಟಿಸಿಲ್ಲ
ಈ ಅಧ್ಯಯನದಲ್ಲಿ ಕೊರೋನಾ ವೈರಸ್ ಗರ್ಭನಾಳದ ಮೇಲೆ ದಾಳಿ ಮಾಡುತ್ತದೆ. ಈ ಮೂಲಕ ಹುಟ್ಟುವ ಮಗು ಹಾಗೂ ತಾಯಿ ನಡುವಿನ ರಕ್ತದ ಚಲನೆ ನಿಲ್ಲುವಂತೆ ಮಾಡುತ್ತದೆ ಎಂಬುವುದು ಅಧ್ಯಯನದಲ್ಲಿ ಬಯಲಾಗಿದೆ.
ಈ ಅಧ್ಯಯನದಲ್ಲಿ ಪಾಲ್ಗೊಂಡ 16 ಮಹಿಳೆಯರ ಗರ್ಭನಾಳ ಡ್ಯಾಮೇಜ್ ಆಗಿತ್ತು. ಅವರೆಲ್ಲರ ವೈಟಲ್ ಆರ್ಗನ್ಸ್ ಹಾಳಾಗಿತ್ತು. ಹೀಗಾಗಿ ಹೊಟ್ಟೆಯಲ್ಲಿದ್ದ ಮಗುವಿಗೆ ಆಮ್ಲಜನಕ ಹಾಗೂ ಪೋಷಕಾಶಂಗಳು ತಲುಪಿಲ್ಲ.
ಪ್ಲಾಸೆಂಟಾದಲ್ಲಿ ರಕ್ತ ಕಡಿಮೆಯಾದ ಪರಿಣಾಮ ಗರ್ಭದಲ್ಲಿರುವ ಶಿಶುವಿನ ಮೇಲೆ ಹಲವು ರೀತಿಯ ಪರಿಣಾಮ ಬಿದ್ದಿದೆ. ಒಂದೆಡೆ ತೂಕ ಕಡಿಮೆಯಾದರೆ, ಮತ್ತೊಂದೆಡೆ ಗರ್ಭದಲ್ಲೇ ಶಿಶುವಿನ ಕೆಲ ಅಂಗಗಳು ಡ್ಯಾಮೇಜ್ ಆಗಿವೆ.
ಇನ್ನು ಕೆಲ ಮಕ್ಕಳು ಆಮ್ಲಜನಕ ಪೂರೈಕೆ ಕಡಿಮೆಯಾಗುವುದರಿಂದ ಗರ್ಭದಲ್ಲೇ ಸಾವನ್ನಪ್ಪುತ್ತವೆ.
ಒಟ್ಟಾರೆಯಾಗಿ ಈ ಅಧ್ಯಯನದಲ್ಲಿ ಗರ್ಭಿಣಿ ಮಹಿಳೆಯರು ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದು ಕೇವಲ ಮಗುವಿನ ಮೇಲೆ ಮಾತ್ರವಲ್ಲ ತಾಯಿ ಮೇಲೂ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ತಿಳಿದು ಬಂದಿದೆ.