ಕಿಮ್ ಜಾಂಗ್ ಕೋಮಾಕ್ಕೆ; ಆಡಳಿತ ಜವಾಬ್ದಾರಿ ಹೊತ್ತ ಲೇಡಿ!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಕೋಮಾಕ್ಕೆ ಜಾರಿದ್ದಾರೆ ಎಂಬ ಸುದ್ದಿ ಮೇಲಿಂದ ಮೇಲೆ ವರದಿಯಾಗುತ್ತಲೇ ಇದೆ. ಹಾಗಾದರೆ ಆಡಳಿತದ ಹೊಣೆಗಾರಿಕೆಯನ್ನು ಯಾರು ನಿಭಾಯಿಸುತ್ತಾರೆ?
ಕಿಮ್ ಜಾಂಗ್ ಕೋಮಾಕ್ಕೆ ಜಾರಿದ್ದು ಅವರ ಸಹೋದರಿ ಕಿಮ್ ಜಾಂಗ್ ಉನ್ ಆಡಳಿತದ ಹೊಣೆಗಾರಿಕೆ ಹೊತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಕೊರಿಯಾದ ಹಿಂದಿನ ಅಧ್ಯಕ್ಷ ಕಿಮ್ ಡೆ ಜುಂಗ್ ಅವರ ಆಪ್ತ ಚಾಶಂಗ್ ಸೊಂಗ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಧಿಕಾರ ಹಂಚಿಕೆಯ ಸಂಪೂರ್ಣ ಸೂತ್ರ ಸಿದ್ಧವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಿಮ್ ಜಾಂಗ್ ಈಗಾಗಲೇ ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಹರಿದಾಡಿವೆ.
ಮೂವತ್ತು ವರ್ಷದ ಆಸುಪಾಸಿನಲ್ಲಿರುವ ಕಿಮ್ ಯೋ ಜಾಂಗ್ ಸಹೋದರಿನೆ ಅತಿ ಆಪ್ತವಾಗಿ ಗುರುತಿಸಿಕೊಂಡವರು.
ಸಾರ್ವಜನಿಕ ಸಭೆ-ಸಮಾರಂಭ ಮತ್ತು ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಸಹೋದರನೊಂದಿಗೆ ಇತ್ತೀಚೆಗೆ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದರು.
ಕಿಮ್ ಜಾಂಗ್ ಆರೋಗ್ಯದ ಬಗ್ಗೆ ವದಂತಿ ಹರಿದಾಡುತ್ತಿರುವುದು ಇದು ಮೊದಲೇನಲ್ಲ. ಸೋಶಿಯಲ್ ಮೀಡಿಯಾ ಸಹ ಈ ಬೆಳವಣಿಗೆಗೆ ವಿಚಿತ್ರವಾಗಿ ಪ್ರತಿಕ್ರಿಯಿಸಿದೆ.