ಸತ್ತಿಲ್ಲ ಕಿಮ್ ಜಾಂಗ್ ಉನ್: ಆ ಒಂದು 'ಭಯ'ದಿಂದ ಕೋಟೆಯೊಳಗೆ ಅಡಗಿದ್ದಾರೆ!
ಕಳೆದೊಂದು ವಾರದಿಂದ ಕಿಮ್ ಆರೋಗ್ಯ ಹದಗೆಟ್ಟಿದೆ, ಅವರು ಸತ್ತಿದ್ದಾರೆಂಬ ವದಂತಿ ಭಾರೀ ಸದ್ದು ಮಾಡಿದೆ. ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದೇ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿತ್ತು. ಆದರೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆ. ಆದರೆ ಅವರಿಗೆ ಕಾಡುತ್ತಿರುವ ಆ ಒಂದು ಭಯದಿಂದ ಬಚ್ಚಿಟ್ಟುಕೊಂಡಿದ್ದಾರೆಂಬುವುದನ್ನು ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಖಚಿತಪಡಿಸಿದೆ. ಅಷ್ಟಕ್ಕೂ ಇಡೀ ವಿಶ್ವವನ್ನೇ ಭಯ ಬೀಳಿಸಿದ್ದ ಸರ್ವಾಧಿಕಾರಿಯನ್ನು ಕಾಡುತ್ತಿರುವ ಆ ಆತಂಕ ಯಾವುದು? ಇಲ್ಲಿದೆ ವಿವರ

ಸರ್ವಾಧಿಕಾರಿ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೃದಯಕ್ಕೆ ಸಂಬಂಧಿಸಿದ ಸರ್ಜರಿ ನಡೆಸಿದ್ದು, ಅದು ಯಶಸ್ವಿಯಾಗದೆ ಅವರು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಹೀಗಿರುವಾಗ ಇನ್ನು ಕೆಲ ಮಾಧ್ಯಮಗಳು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದವು. ಚೀನಾ ಮಾಧ್ಯಮಗಳಂತೂ ಕಿಮ್‌ಗೆ ಕೊರೋನಾ ಸೋಂಕು ತಗುಲಿದೆ ಎಂದಿದ್ದವು. ಅಲ್ಲದೇ ಚೀನಾದ ವೈದ್ಯರ ಒಂದು ತಂಡವೂ ಉತ್ತರ ಕೊರಿಯಾಗೆ ತೆರಳಿತ್ತು.

ಕಿಮ್ ಅಧಿಕ ಪ್ರಮಾಣದಲ್ಲಿ ಧೂಮಪಾನ ಹಾಗೂ ಮದ್ಯ ಸೇವಿಸುತ್ತಾರೆ. ಹೀಗಾಗೇ ಅವರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಹೃದಯ ಸಂಬಂಧಿ ಕಾಯಿಲೆ ಕೂಡಾ ಇದೆ.

ಇದಕ್ಕೆಲ್ಲಾ ಕಾರಣವಾಗಿದ್ದು, ಏಪ್ರಿಲ್ 15ರಂದು ಉತ್ತರ ಕೊರಿಯಾದಲ್ಲಿ ಆಚರಿಸಲಾಗುವ ತನ್ನ ಅಜ್ಜನ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಕಿಮ್ ಭಾಗಿಯಾಗದಿರುವುದು.

ಹೀಗಿರುವಾಗ ಕಿಮ್ 10 ವರ್ಷದ ಮಗ ಅಥವಾ ಅವರ ಕಿರಿಯ ತಂಗಿ ಯೋ ಜೋಂಗ್ ಉತ್ತರ ಕೊರಿಯಾದ ಮುಂದಿನ ಸರ್ವಾಧಿಕಾರಿಯಾಗಬಹುದೆಂದು ಅಂದಾಜಿಸಲಾಯಿತು.

ಆದರೆ ಅಷ್ಟರಲ್ಲೇ ಇದರ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ತನ್ನ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು, ಕಿಮ್‌ಗೇನೂ ಆಗಿಲ್ಲ ಎಂಬ ಸ್ಪಷ್ಟನೆ ನೀಡಿತ್ತು

ಅಷ್ಟರಲ್ಲಿ ಅಮೆರಿಕ ಕೂಡಾ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಉತ್ತರ ಕೊರಿಯಾದಲ್ಲಿ ಗೂಢಾಚಾರಿಕೆ ನಡೆಸಲು 5 ವಿಮಾನಗಳನ್ನು ಕಳುಹಿಸಿತ್ತು. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ದಕ್ಷಿಣ ಕೊರಿಯಾಗೆ ಕಿಮ್ ಎಲ್ಲಿದ್ದಾರೆಂಬ ಸರಿಯಾದ ಲೊಕೇಷನ್ ಸಿಕ್ಕಿದ್ದು, ಇದನ್ನು ಹಂಚಿಕೊಳ್ಳಲು ನಿರಾಕರಿಸಿದೆ.

ಆದರೆ ಇಡೀ ವಿಶ್ವಕ್ಕೇ ನಡುಕ ಹುಟ್ಟಿಸಿದ್ದ, ಹುಚ್ಚು ದೊರೆ ಕಿಮ್, ಕೊರನಾ ಸೋಂಕು ತಗುಲಬಹುದೆಂಬ ಭಯದಿಂದ ತನ್ನ ಕೋಟೆಯೊಳಗೆ ಅಡಗಿದ್ದಾರೆಂದಿದ್ದಾರೆ.

ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೊರೋನಾ ವೈರಸ್, ಕಿಮ್‌ರನ್ನೂ ಭಯಭೀತರನ್ನಾಗಿಸಿದೆ ಎಂಬುವುದು ಸದ್ಯಕ್ಕೆ ಕಂಡು ಬಂದಿರುವ ಸತ್ಯ.