ಅಮೆರಿಕಾ ಸೆನೆಟ್‌ನಲ್ಲಿ ನಮೋ ಜಪ: 79 ಬಾರಿ ಚಪ್ಪಾಳೆ, 15 ಬಾರಿ ಎದ್ದು ನಿಂತು ಗೌರವ
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದ ಸೆನೆಟ್‌ನಲ್ಲಿ ಮಾಡಿದ ಭಾಷಣ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯ್ತು ಭಾಷಣದ ಮಧ್ಯೆ ಮಧ್ಯೆ 79ಕ್ಕೂ ಹೆಚ್ಚು ಬಾರಿ ಸಂಸತ್ ಸದಸ್ಯರು ಚಪ್ಪಾಳೆ ತಟ್ಟಿದರು, 15ಕ್ಕೂ ಹೆಚ್ಚು ಬಾರಿ ಎದ್ದು ನಿಂತು ಗೌರವ ಸೂಚಿಸಿದರು ಜೊತೆಗೆ ಮೋದಿ ಮೋದಿ ಎಂಬ ಘೋಷಣೆ ಸದನದಲ್ಲಿ ಅನುರಣಿಸಿತು. ಇದಾದ ನಂತರ ಮೋದಿಯವರ ಆಟೋಗ್ರಾಫ್ ಪಡೆಯಲು ಉಭಯ ಪಕ್ಷಗಳ ಸಂಸತ್ ಸದದ್ಯರು ಮುಗಿಬಿದ್ದರು, ಜೊತೆಗೆ ಮೋದಿ ಜೊತೆ ಸೆಲ್ಫಿಗಾಗಿ ಸಂಸದರು, ಸಭಾಧ್ಯಕ್ಷರು ಯತ್ನಿಸಿದ್ದು ವಿಶೇಷವಾಗಿತ್ತು...
PM Modi US visit
ಭಾಷಣದ ವೇಳೆ ಮೋದಿ ದೇಶದ ಪ್ರಜಾಸತಾತ್ಮಕ ಮೌಲ್ಯಗಳು, ಭಾರತ-ಅಮೆರಿಕದ ಸಂಬಂಧದ ಬಗ್ಗೆ ಮಾತನಾಡುವಾಗ ಅಮೆರಿಕದ ಸಂಸತ್ ಸದಸ್ಯರು ಮೋದಿ-ಮೋದಿ ಎಂದು ಹರ್ಷೋದ್ಘಾರ ಮಾಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
PM Modi US visit
ಪ್ರಧಾನಿ ಉಗ್ರವಾದ, ಭಾರತದಲ್ಲಿ ಮುಸ್ಲಿಮರ ಪ್ರಜಾಸತ್ತಾತ್ಮಕ ಹಕ್ಕುಗಳು, ಟ್ರೇಡ್ ಯೂನಿಯನ್, ಭಾರತದಲ್ಲಿನ ರಾಜಕೀಯ ಪಕ್ಷಗಳು ಮತ್ತು ಭಾಷೆಗಳ ಬಗ್ಗೆ ಮಾತನಾಡಿದರು.
PM Modi US visit
ಭಾರತದಲ್ಲಿ ನಾನು ಸಾವಿರಾರು ಭಾಷಣ ಮಾಡಿರಬಹುದು. ಆದರೆ, ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲಿಯೇ ಇಡೀ ಸದನದಲ್ಲಿ ಕರತಾಡನ ಮೊಳಗಿತು.
PM Modi US visit
ಪ್ರಧಾನಿ ಭಾಷಣವನ್ನು ಮೆಚ್ಚಿ ಅನೇಕ ಗಣ್ಯರು ಸೋಶಿಯಲಾ ಮೀಡಿಯಾಗಳಲ್ಲಿ ಟ್ವಿಟ್ ಮಾಡಿದ್ದಾರೆ. ನಾನು ಕಾಂಗ್ರೆಸ್ ಸದನದಲ್ಲಿ ಭಾರತದ ಪ್ರಧಾನಮಂತ್ರಿಯವರು ಮಾಡಿದ ಜಂಟಿ ಭಾಷಣದಲ್ಲಿ ಭಾಗವಹಿಸಿದ್ದೆ. ಜಾಗತಿಕವಾಗಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ಮತ್ತು ನಮ್ಮ ಆರ್ಥಿಕತೆಯನ್ನು ಬೆಳೆಸಲು ಯುಎಸ್-ಭಾರತ ಪಾಲುದಾರಿಕೆ ನಿರ್ಣಾಯಕವಾಗಿದೆ ಎಂದು ಸಂಸತ್ ಸದಸ್ಯ ಕ್ರೇಗ್ ಸ್ಟಾಂಟನ್ ಟ್ವೀಟ್ ಮಾಡಿದ್ದಾರೆ.
PM Modi US visit
ಪ್ರಧಾನಿ ಮೋದಿಯವರ ಭೇಟಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಮಹತ್ವದ ಅವಕಾಶವಾಗಿದೆ. ಅಮೆರಿಕ ಮತ್ತು ಭಾರತದ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆ ಎರಡರಲ್ಲೂ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಆಳಗೊಳಿಸಲು ಇದಕ್ಕಿಂತ ಮಹತ್ವದ ಸಮಯ ಬೇರೆ ಇರಲಿಲ್ಲ ಎಂದು ಸಂಸದ ಮಾರ್ಕ್ ವಾರ್ನರ್ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
PM Modi US visit
ಸಂಸದ ಕೊಲೀನ್ ಆಲ್ರೆಡ್ ಅವರು ತಮ್ಮ ಪೋಸ್ಟ್‌ನಲ್ಲಿ, ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪ್ರಜಾಪ್ರಭುತ್ವಗಳು ಕೈಜೋಡಿಸಬೇಕು ಎಂದಿದ್ದಾರೆ.
PM Modi US visit
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಆರ್ಥಿಕ ಮತ್ತು ಅಧಿಕೃತ ಸಹಕಾರವು ಬಲಗೊಳ್ಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಕೊಲೀನ್ ಆಲ್ರೆಡ್ ಬರೆದುಕೊಂಡಿದ್ದಾರೆ.
PM Modi US visit
ಮಾತುಕತೆಗಳ ಮೂಲಕ ಬೇಳೆಕಾಳುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ನನ್ನ ಬೇಡಿಕೆಯ ವರ್ಷಗಳ ನಂತರ, ಭಾರತವು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ: ಸ್ಟೀವ್ ಡೈನ್ಸ್
PM Modi US visit
ರೈತರಿಗೆ ಮತ್ತು ನಮ್ಮ ಮಿತ್ರ ರಾಷ್ಟ್ರವಾದ ಭಾರತದೊಂದಿಗೆ ಅಮೆರಿಕದ ಸಂಬಂಧಕ್ಕೆ ಇದು ಉತ್ತಮ ಸುದ್ದಿ ಎಂದು ಸಂಸದ ಸ್ಟೀವ್ ಡೈನ್ಸ್ ಪೋಸ್ಟ್ ಮಾಡಿದ್ದಾರೆ.