ಮತ್ತೊಂದು ಲೋಕವನ್ನು ಪತ್ತೆ ಹಚ್ಚಿದ ವ್ಯಕ್ತಿ, ಫೋಟೋ ನೋಡಿ ಬೆಚ್ಚಿ ಬಿದ್ದ ಜನ!
ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಇಂತಹುದ್ದೊಂದು ಕಣ್ಣಿಗೆ ಕಾಣದ ವೈರಸ್ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಎಲ್ಲಾ ವಿಚಾರಗಳಲ್ಲೂ ಒಂದು ರೀತಿಯ ವಿರಾಮ ಹಾಕುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪ್ರತಿಯೊಬ್ಬರೂ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮನೆಯೊಳಗೇ ಕೈದಿಗಳಂತೆ ಉಳಿದುಕೊಂಡಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತಾನು ಅಚಾನಕ್ಕಾಗಿ ನಡೆಸಿರುವ ಶೋಧ ಕಾರ್ಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿವೆ. 700 ಅಡಿ ಆಳದಲ್ಲಿ ಇಂತಹುದ್ದೊಂದು ಲೋಕವಿದೆ ಎಂದು ಯಾರು ಕೂಡಾ ಕಲ್ಪಿಸಿರಲಿಲ್ಲ.
ಈ ಮತ್ತೊಂದು ಲೋಕ ಅಮೆರಿಕದ ನ್ಯೂ ಮೆಕ್ಸಿಕೋದ ಕಕರ್ಲ್ಸ್‌ಬಾದ್ ಕವರ್ನ್ಸ್ ನ್ಯಾಷನಲ್ ಪಾರ್ಕ್‌ನಲ್ಲಿ ಕಂಡು ಬಂದಿದೆ.
ಇಲ್ಲಿ ಗುಹೆಯೊಳಗೆ ಇಂತಹುದ್ದೊಂದು ಲೋಕ ನೋಡಲು ಸಿಗಬಹುದೆಂದು ಯಾರೂ ಊಹಿಸಿರಲಿಲ್ಲ. 700 ಅಡಿ ಆಳದಲ್ಲಿ ಗುಹೆಯೊಳಗೆ ಈ ವ್ಯಕ್ತಿಗೆ ವಿಚಿತ್ರ ದೃಶ್ಯ ನೋಡಲು ಸಿಕ್ಕಿದೆ.
ಈ ಗುಹೆ ನಡುವೆ ನೀಲಿ ಬಣ್ಣದ ಒಂದು ಕೆರೆ ಇದೆ. ಇದನ್ನು ನೋಡಿ ಎಲ್ಲರೂ ಅಚ್ಚರಿಗೀಡಾಗಿದ್ದಾರೆ. ಭೂಮಿಯೊಳಗೆ ಇಷ್ಟು ಆಳದಲ್ಲಿ ಇಂತಹ ದೃಶ್ಯ ಕಂಡು ಬರಬಹುದೆಂದ ಯಾರೂ ಊಹಿಸಿರಲಿಲ್ಲ.
ಸದ್ಯ ಜನರು ಇದಕ್ಕೆ ವರ್ಜಿನ್ ಕೇವ್ ಪ್ಯಾಸೇಜ್ ಎಂದು ನಾಮಕರಣ ಮಾಡಿದ್ದಾರೆ.
ಇಲ್ಲಿ ಈವರೆಗೆ ಯಾರೂ ಹೋಗಿಲ್ಲ. ಹೀಗಿರುವಾಗ ಈ ಗುಹೆಯೊಳಗೆ ಎಕ್ಸ್‌ಪ್ಲೋರರ್ ಒಬ್ಬರು ಹೋಗಿ ಫೋಟೋ ಕ್ಲಿಕ್ಕಿಸಿದ್ದಾರೆ.
ಈ ಫೋಟೋಗಳನ್ನು ನೋಡಿದರೆ ಇದು ಬೇರಾವುದೋ ಗ್ರಹದ ಭಾಗವೆಂಬಂತೆ ಅನಿಸುತ್ತದೆ.
ಇನ್ನು ಈ ಗುಹೆಯನ್ನು 2009ರಲ್ಲಿ ಪತ್ತೆ ಹಚ್ಚಲಾಗಿತ್ತು. ಆದರೆ ಫೋಟೋಗಳನ್ನು ಶೇರ್ ಮಾಡಿದ್ದು ಮಾತ್ರ ಈಗ. ಈ ಗುಹೆಯೊಳಗೆ ಈವರೆಗೂ ಬೆಳಕು ಹರಿದಿಲ್ಲ.
ಈ ಗುಹೆಯೊಳಗೆ ಕೇವಲ ಹುಳ ಹಾಗೂ ಸತ್ತ ಬಾವಲಿಗಳು ಪತ್ತೆಯಾಗಿವೆ.
ಸದ್ಯ ಈ ಗುಹೆ ಕುರಿತು ಅಧ್ಯಯನ ನಡೆಯಲಿದೆ. ಇನ್ನು ಈ ಪ್ರದೇಶದಲ್ಲಿ ಜನರ ಓಡಾಟವಿದ್ದರೂ ಈ ಗುಹೆ ಯಾಕೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.