ಸಂಸತ್ತಲ್ಲೇ ಬಟ್ಟೆ ಬಿಚ್ಚಿ ಎಸೆದು ಸಂಸದ ಪ್ರತಿಭಟನೆ! ಇಲ್ನೋಡಿ ಫೋಟೋಸ್
ಸಂಸತ್ತಿನಲ್ಲಿಯೇ ಬಟ್ಟೆ ಬಿಚ್ಚಿದ ಸಂಸದ | ಖಾಸಗೀಕರಣದ ವಿರುದ್ಧ ವಿನೂತನ ಪ್ರತಿಭಟನೆ | ಬಟ್ಟೆ ಬಿಚ್ಚಿ ಹಾಕಿ ನಿಂತು ಮತನಾಡಿದ ಸಂಸದ

ಸರ್ಕಾರದ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸಲು ಪ್ರತಿಪಕ್ಷ ವಿಭಿನ್ನ ರೀತಿ ಪ್ರತಿಭಟನೆ ಮಾಡ್ತಾರೆ. ಆದರೆ, ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಲು ಸಂಸದರೊಬ್ಬರು ಬಟ್ಟೆಗಳನ್ನು ಬಿಚ್ಚಿ ಬಿಸಾಡಿ ಬರಿಮೈಯಲ್ಲೇ ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆ ಮೆಕ್ಸಿಕೋ ಸಂಸತ್ ಕಲಾಪದಲ್ಲಿ ನಡೆದಿದೆ.

ನಾನು ಬರಿ ಮೈಯಲ್ಲಿರುವುದನ್ನು ಕಂಡು ನಿಮಗೆ ನಾಚಿಕೆಯಾಗಿರಬಹುದು. ಆದರೆ ಹಸಿವು, ನಿರುದ್ಯೋಗ, ಹತಾಶೆ ಮತ್ತು ಬೆತ್ತಲಾದ ಜನರ ಬಗ್ಗೆ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಸಂಸದ ಆ್ಯಂಟಾನಿಯೋ ಗಾರ್ಸಿಯಾ ಪ್ರಶ್ನಿಸಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದೆ.

ಇಂಧನ ಇಲಾಖೆಯನ್ನು ಖಾಸಗೀಕರಣಗೊಳಿಸುವ ಮಹತ್ತರವಾದ ಮಸೂದೆಗೆ ಮತ ಹಾಕುವ ವಿಚಾರ ಮೆಕ್ಸಿಕೋದಲ್ಲಿ ಸದ್ಯ ಚರ್ಚೆಯಲ್ಲಿದೆ.

ಇಂಧನ ಉದ್ಯಮವನ್ನು ಖಾಸಗೀಕರಣಗೊಳಿಸುವ ಮಸೂದೆಯಲ್ಲಿ ಮತ ಹಾಕುವ ಎಡಪಂಥೀಯ ಡೆಮಾಕ್ರಟಿಕ್ ರೆವಲ್ಯೂಷನ್ ಪಾರ್ಟಿಯ ಕಾಂಗ್ರೆಸ್ಸಿಗರ ವಿರೋಧ, ನಿರಂತರ ಚರ್ಚೆಗಳು ಸದ್ಯ ಸುದ್ದಿಯಾಗಿವೆ.

ಇದನ್ನು ಐತಿಹಾಸಿಕ ಮತವೆಂದೇ ಹೇಳಲಾಗುತ್ತಿದ್ದು, ಇದೀಗ ಹೂಡಿಕೆದಾರರಿಗೆ ಇಂಧನ ಕ್ಷೇತ್ರದಲ್ಲೂ ಅವಕಾಶ ನೀಡಲು ಚಿಂತಿಸಲಾಗಿದೆ. ಎಡಪಂಥೀಯ ಡೆಮಾಕ್ರಟಿಕ್ ರೆವಲ್ಯೂಷನ್ ಪಾರ್ಟಿಯ ಸಂಸದ ಅಂಟೊನಿಯೋ ಗಾರ್ಸಿಯಾ ಕೊನೆಜೊ ಬಟ್ಟೆ ಬಿಚ್ಚಿದ್ದಾರೆ.

ಮತದಾನ ನಡೆದರೂ ಮಾತೃಭೂಮಿ ಮಾರಾಟಕ್ಕಿಲ್ಲ ಎಂದು ಪಕ್ಷದ ಸದಸ್ಯರು ಘೋಷಣೆ ಕೂಗಿದ್ದಾರೆ. ಸಂಸದ ಬಟ್ಟೆ ಬಿಚ್ಚುತ್ತಿದ್ದಂತೆ ಸಂಸತ್ತಿನ ಚಿತ್ರಣವೇ ಒಮ್ಮೆಗೆ ಬದಲಾಗಿದೆ.

ಮಧ್ಯವಯಸ್ಕ ಸಂಸದ ಎಲ್ಲ ಬಟ್ಟೆ ಬಿಚ್ಚಿ ಡಯಾಸ್‌ನಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಟೆಲಿಕಮ್ಯುನಿಕೇಷನ್ ಕೂಡಾ ಖಾಸಗೀಕರಣಗೊಳಿಸಿದ್ದಕ್ಕೆ ಸಂಸದ ಆರೋಪಿಸಿದ್ದಾರೆ.

ಇಷ್ಟೆಲ್ಲ ಮಾಡಿದರೂ ಸಂಸದನ ಯಾವುದೇ ಕಸರತ್ತು ವರ್ಕೌಟ್ ಆಗಿಲ್ಲ. ಇಂಧನ ಕೈಗಾರಿಕೆ ಆರಂಭಿಸುವ ಪ್ರಸ್ತಾಪ ಸ್ಪಷ್ಟವಾಗಿದೆ. ಇದೀಗ 31 ರಾಜ್ಯಗಳಲ್ಲಿ 17 ರಾಜ್ಯಗಳ ಅನುಮೋದನೆ ಸಿಗಬೇಕಿದೆ.