- Home
- News
- World News
- ವಿಶ್ವದ ಅತಿ ಎತ್ತರದ ನೀರು ಎಮ್ಮೆ ದಾಖಲೆ ಬರೆದ ‘ಕಿಂಗ್ ಕಾಂಗ್’... ಇದರ ಹೈಟ್ ಕೇಳಿದ್ರೆ ಶಾಕ್ ಆಗ್ತೀರಿ!
ವಿಶ್ವದ ಅತಿ ಎತ್ತರದ ನೀರು ಎಮ್ಮೆ ದಾಖಲೆ ಬರೆದ ‘ಕಿಂಗ್ ಕಾಂಗ್’... ಇದರ ಹೈಟ್ ಕೇಳಿದ್ರೆ ಶಾಕ್ ಆಗ್ತೀರಿ!
ಥೈಲ್ಯಾಂಡ್ನ ಕಿಂಗ್ ಕಾಂಗ್ ಎಂಬ ಭವ್ಯವಾದ ನೀರಿನ ಎಮ್ಮೆ ವಿಶ್ವದ ಅತಿ ಎತ್ತರದ ಜೀವಂತ ನೀರಿನ ಎಮ್ಮೆ ಎಂಬ ದಾಖಲೆಯನ್ನು ಹೊಂದಿದೆ. ಈ ಎಮ್ಮೆಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

ಥೈಲ್ಯಾಂಡ್ ನಲ್ಲಿರುವ ಭವ್ಯವಾದ ಕಿಂಗ್ ಕಾಂಗ್ ಎಂಬ ನೀರಿನ ಎಮ್ಮೆ ವಿಶ್ವದ ಅತಿ ಎತ್ತರದ ಜೀವಂತ ನೀರಿನ ಎಮ್ಮೆ ಎಂಬ ದಾಖಲೆಯನ್ನು ಬರೆದಿದೆ. ಈ ಎಮ್ಮೆಯ ಎತ್ತರ, ಅದೇನು ತಿನ್ನುತ್ತೇ? ಎಷ್ಟು ತಿನ್ನುತ್ತೆ ಎನ್ನುವ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಬರೋಬ್ಬರಿ 185 ಸೆಂ.ಮೀ (6 ಅಡಿ 0.8 ಇಂಚು) ಅಳತೆ ಹೊಂದಿರುವ ಕಿಂಗ್ ಕಾಂಗ್ ಸರಾಸರಿ ನೀರಿನ ಎಮ್ಮೆಗಿಂತ 50 ಸೆಂ.ಮೀ ಎತ್ತರವಾಗಿದೆ, ಇದು ಅವನನ್ನು ನಿಜವಾದ ದೈತ್ಯನನ್ನಾಗಿ ಮಾಡುತ್ತದೆ. ಎಮ್ಮೆಗಳಲ್ಲಿ ದೈತ್ಯವಾದ ಎಮ್ಮೆ ಕಿಂಗ್ ಕಾಂಗ್ ಎನ್ನುವ ದಾಖಲೆ ಕೂಡ ಇದು ಬರೆದಿದೆ.
ಏಪ್ರಿಲ್ 1, 2021 ರಂದು ಕಿಂಗ್ ಕಾಂಗ್ ಜನಿಸಿದ್ದು, ಅಂದೇ ಈ ಎಮ್ಮೆಯ ಅಸಾಧಾರಣ ಎತ್ತರವನ್ನು ಗಮನಿಸಿದ ಫಾರ್ಮ್ ಮಾಲೀಕ ಸುಚಾರ್ಟ್ ಬೂಂಚರೋಯೆನ್, ಜನಪ್ರಿಯ ಸಿನಿಮಾವಾದ ಕಿಂಗ್ ಕಾಂಗ್ ಹೆಸರನ್ನೇ ಈ ದೈತ್ಯ ಎಮ್ಮೆಗೆ ಇರಿಸಿದ್ದರು.
ಈ ಎಮ್ಮೆ ಬೃಹತ್ ಗಾತ್ರ ಹೊಂದಿದ್ದರೂ ಸಹ, ಕಿಂಗ್ ಕಾಂಗ್ ಸ್ನೇಹಪರ ಮತ್ತು ಜನರೊಂದಿಗೆ ಹೊಂದಿಕೊಳ್ಳುವ ಮುದ್ದಾದ ಎಮ್ಮೆಯಾಗಿದ್ದು, ಈ ಮುದ್ದಾದ ದೈತ್ಯ ಎಮ್ಮೆ ಕೊಳದಲ್ಲಿ ಹಾರಾಡುತ್ತಾ ಎಂಜಾಯ್ ಮಾಡುತ್ತೆ, ಬಾಳೆಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತೆ, ಅಷ್ಟೇ ಅಲ್ಲ ತನ್ನ ಕೇರ್ ಟೇಕರ್ ಜೊತೆ ಮಜವಾಗಿ ಆಟವಾಡುತ್ತೆ, ಈ ಕಿಂಗ್ ಕಾಂಗ್.
ಕಿಂಗ್ ಕಾಂಗ್ ಥೈಲ್ಯಾಂಡ್ನ ನಿನ್ಲಾನಿ ಫಾರ್ಮ್ನಲ್ಲಿ ಜನಿಸಿತ್ತು ಅಲ್ಲಿ ಕಿಂಗ್ ಕಾಂಗ್ ತನ್ನ ಪೋಷಕರು, ಇತರ ನೀರಿನ ಎಮ್ಮೆಗಳು ಮತ್ತು ಕುದುರೆಗಳೊಂದಿಗೆ ವಾಸಿಸುತ್ತೆ. ಈ ಎಮ್ಮೆಯ ಕೇರ್ ಟೇಕಾರ್ ಚೆರ್ಪಾಟ್ ವುಟ್ಟಿ ಹೇಳುವಂತೆ ಕಿಂಗ್ ಕಾಂಗ್ ತುಂಬಾನೆ ವಿಧೇಯ ಮತ್ತು ಪ್ರೀತಿಯ ಎಮ್ಮೆಯಂತೆ, ಅದು ಜನರ ಸುತ್ತಲೂ ಓಡಾಡುತ್ತಂತೆ, ಆಟವಾಡುತ್ತೆ, ಒಂದು ದೈತ್ಯವಾದ ನಾಯಿಮರಿ ಅಂತಾನೆ ಹೇಳಬಹುದು.
ಕಿಂಗ್ ಕಾಂಗ್ ನ ದೈನಂದಿನ ದಿನಚರಿ ಬಗ್ಗೆ ಹೇಳೋದಾದರೆ ಬೆಳಿಗ್ಗೆ 6 ಗಂಟೆಗೆ ಕೊಳದಲ್ಲಿ ಆಟದ ಸಮಯದೊಂದಿಗೆ ದಿನ ಆರಂಭವಾಗುತ್ತೆ, ನಂತರ ಸ್ನಾನ, ಊಟ ಮತ್ತು ರಾತ್ರಿ ಮಲಗುವ ಮೊದಲು ವಿಶ್ರಾಂತಿ. ಕಿಂಗ್ ಕಾಂಗ್ ದಿನಕ್ಕೆ ಸುಮಾರು 35 ಕೆಜಿ ಆಹಾರವನ್ನು ತಿನ್ನುತ್ತೆ, ಹುಲ್ಲು, ಜೋಳ ಮತ್ತು ಬಾಳೆಹಣ್ಣುಗಳನ್ನು ಹೊಟ್ಟೆ ತುಂಬುವಂತೆ ತಿನ್ನುವ ದೊಡ್ಡ ಹೊಟ್ಟೆಯ ಪ್ರಾಣಿ ಇದು.
ಕಿಂಗ್ ಕಾಂಗ್ ವಿಶ್ವ ದಾಖಲೆ ಮಾಡಿರುವ ಮೊದಲ ನೀರಿನ ಎಮ್ಮೆ ಎಂದು ಅದರ ಕೇರ್ ಟೇಕರ್ ಸಂತಸದಿಂದ ಹೇಳುತ್ತಾರೆ. ಇದು ತಮಗೊಂದು ಹೆಮ್ಮೆಯ ಕ್ಷಣ ಅಂತಾನೂ ಹೇಳುತ್ತಾರೆ. ಈ ಎಮ್ಮೆ ತನ್ನ ಬೃಹತ್ ಗಾತ್ರ, ಪ್ರೀತಿಯ ವ್ಯಕ್ತಿತ್ವ ಮತ್ತು ವಿಶ್ವ ದಾಖಲೆಯೊಂದಿಗೆ ವಿಭಿನ್ನವಾಗಿ ನಿಲ್ಲುತ್ತೆ. ಕಿಂಗ್ ಕಾಂಗ್ ಭೇಟಿ ನೀಡಲು ಬರುವ ಎಲ್ಲರೂ ಸಹ ಅದನ್ನು ತುಂಬಾನೆ ಪ್ರೀತಿಸುತ್ತಾರೆ ಎನ್ನುತ್ತಾರೆ ಕೇರ್ ಟೇಕರ್.