ಉಕ್ರೇನ್ ಯುದ್ಧದ ನಡುವೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ, ರಷ್ಯಾಧ್ಯಕ್ಷನ ಆ ಕನಸೂ ನುಚ್ಚುನೂರು!
ಉಕ್ರೇನ್‌ನಲ್ಲಿ ರಷ್ಯಾದ ದಾಳಿ ಮುಂದುವರಿದಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಪುಟಿನ್ ಅವರ ಹಿರಿಯ ಪುತ್ರಿ ಡಾ.ಮರಿಯಾ ವೊರೊಂಟ್ಸೊವಾ (36) ಅವರ ವಿವಾಹ ಮುರಿದುಬಿದ್ದಿದೆ. ಮಾರಿಯಾ ವೊರೊಂಟ್ಸೊವಾ ತನ್ನ ಡಚ್ ಉದ್ಯಮಿ ಪತಿಯಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಕೆಜಿಬಿ ಗೂಢಚಾರರಾಗಿದ್ದಾಗ ಡಾ.ಮಾರಿಯಾ ಜನಿಸಿದ್ದರು.
ಡಾ.ಮಾರಿಯಾ ವೊರೊಂಟ್ಸೊವಾ ಕನಸು ನುಚ್ಚುನೂರು
ಉಕ್ರೇನ್ ಯುದ್ಧದಿಂದಾಗಿ ರಷ್ಯಾದಲ್ಲಿ ಅತಿ ಶ್ರೀಮಂತ ವಿದೇಶಿಯರಿಗಾಗಿ ಗಣ್ಯ ವೈದ್ಯಕೀಯ ಕೇಂದ್ರವನ್ನು ತೆರೆಯುವ ಪುಟಿನ್ ಪುತ್ರಿ ಡಾ.ಮಾರಿಯಾ ವೊರೊಂಟ್ಸೊವಾ ಅವರ ಕನಸು ಕೂಡ ಮದುವೆ ಮುರಿದುಬೀಳುವ ಮೂಲಕ ನುಚ್ಚು ನೂರಾಗಿದೆ. ಮಾರಿಯಾ ಮಕ್ಕಳಲ್ಲಿ ಅಪರೂಪದ ಆನುವಂಶಿಕ ಕಾಯಿಲೆಗಳಲ್ಲಿ ಪರಿಣಿತ ವೈದ್ಯರಾಗಿದ್ದಾರೆ.
ಯುದ್ಧ ಪ್ರಾರಂಭವಾದಾಗಲೇ ಬಿರುಗಾಳಿ
ಪುಟಿನ್ ಅವರ ಹಿರಿಯ ಮಗಳ ಗಂಡನ ಹೆಸರು ಜೋರಿಟ್ ಫಾಸೆನ್. ಇಬ್ಬರಿಗೂ ಮಕ್ಕಳಿದ್ದಾರೆ. ಪತಿ ಮತ್ತು ಹೆಂಡತಿ ಯಾವಾಗ ಬೇರ್ಪಟ್ಟರು ಎಂದು ವರದಿಗಳು ಹೇಳದಿದ್ದರೂ, ಅವರು ಯುದ್ಧದ ಪ್ರಾರಂಭದಲ್ಲಿ ಬೇರ್ಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.
ರಷ್ಯಾದಲ್ಲಿ ಕಾರ್ಯನಿರ್ವಹಿಸಿದ್ದ ಪುಟಿನ್ ಅಳಿಯ
ಅವರ ಮಕ್ಕಳ ವಿವರಗಳು ಸಾರ್ವಜನಿಕವಾಗಿಲ್ಲ. ಫಾಸೆನ್ ರಷ್ಯಾದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಅವರ ತಂದೆ ಡಚ್ ಸಶಸ್ತ್ರ ಪಡೆಗಳಲ್ಲಿ ಕರ್ನಲ್ ಆಗಿದ್ದರು.
ಪುಟಿನ್ ಮಗಳ ಮತ್ತೊಂದು ಕನಸೂ ಭಗ್ನ
ಪುಟಿನ್ ಅವರ ಮಗಳು ಯುರೋಪಿನ ರೋಗಿಗಳನ್ನು ಮತ್ತು ಗಲ್ಫ್ ದೇಶಗಳ ಶ್ರೀಮಂತ ಶೇಖ್‌ಗಳನ್ನು ಚಿಕಿತ್ಸೆಗಾಗಿ ರಷ್ಯಾಕ್ಕೆ ಆಕರ್ಷಿಸುವ ಯೋಜನೆಯನ್ನು ಹೊಂದಿದ್ದರು. ಉಕ್ರೇನ್ ಮೇಲಿನ ದಾಳಿಯ ನಂತರ, ಯುರೋಪ್ ಮತ್ತು ಶೇಖ್ ಜನರು ಹೇಗೆ ಬರುತ್ತಾರೆ ಎಂದು ವರದಿಯಲ್ಲಿ ಪ್ರಶ್ನಿಸಲಾಗುತ್ತಿದೆ.
ಮಗಳ ಬಾಳಿಗೆ ಕೊಳ್ಳಿ ಇಟ್ಟ ಪುಟಿನ್ ನಿರ್ಧಾರ
ಉಕ್ರೇನ್ ಮೇಲೆ ದಾಳಿ ಮಾಡುವ ಪುಟಿನ್ ನಿರ್ಧಾರವು ತನ್ನ ಮಗಳ ಕುಟುಂಬವನ್ನು ಧ್ವಂಸಗೊಳಿಸಿದೆ ಎಂದು ರಷ್ಯಾದ ತನಿಖಾ ಪತ್ರಕರ್ತ ಸೆರ್ಗೆಯ್ ಕನೆವ್ ಬಹಿರಂಗಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಂದ ರಷ್ಯಾದ ಮೇಲೆ ವ್ಯಾಪಕ ನಿರ್ಬಂಧಗಳನ್ನು ವಿಧಿಸಲಾಗಿದೆ.