19 ವರ್ಷಕ್ಕೆ ಅತ್ಯಚಾರಕ್ಕೆ ಗುರಿಯಾಗಿ, ಪ್ರೆಗ್ನೆಂಟ್ ಆಗಿದ್ರಂತೆ ಲೇಡಿ ಗಾಗಾ!
ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕಿ ಲೇಡಿ ಗಾಗ ತಮ್ಮ ಜೀವನದ ಕಹಿ ಸತ್ಯವೊಂದನ್ನು ಬಹಿರಂಗಗೊಳಿಸಿದ್ದಾರೆ. ತನ್ನ 19ನೇ ವರ್ಷದಲ್ಲಿ ಅತ್ಯಾಚಾರಕ್ಕೊಳಗಾಗಿ ಅವರು ಗರ್ಭಿಣಿಯಾಗಿದ್ದರು ಎಂದು ರಿವೀಲ್ ಮಾಡಿದ್ದಾರೆ. ವಿವರ ಇಲ್ಲಿದೆ.

ಗ್ರ್ಯಾಮಿ ಆವಾರ್ಡ್‌ನಿಂದ ಹಿಡಿದು ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ 35 ವರ್ಷದ ಲೇಡಿ ಗಾಗಾ ಇತ್ತೀಚೆಗೆ ತಮ್ಮ ಜೀವನಕ್ಕೆ ಸಂಬಂಧಿಸಿದ ಕಟು ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಅಮೆರಿಕನ್ ಟಿವಿಯ ಪ್ರಸಿದ್ಧ ಹೋಸ್ಟ್ ಓಪ್ರಾ ವಿನ್ಫ್ರೇ ಶೋನಲ್ಲಿ ಕಾಣಿಸಿಕೊಂಡಾಗ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು.

ಗಾಗಾ ತನ್ನ 19 ವರ್ಷದಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದರು ಎಂದು ಹೇಳಿ ಕೊಂಡಿದ್ದರು.

ಸಂಗೀತ ನಿರ್ಮಾಪಕ ತನ್ನ ಮೇಲೆ ಅತ್ಯಾಚಾರ ಎಸಗಿದನು ಎಂಬುದನ್ನು ಹೇಳಿಕೊಂಡರು.

'ನನಗೆ 19 ವರ್ಷ ಮತ್ತು ನನ್ನ ಮ್ಯೂಸಿಕ್ ಕೆರಿಯರ್ ಪ್ರಾರಂಭವಾಗಿತ್ತು. ನಿರ್ಮಾಪಕ ನನ್ನ ಬಟ್ಟೆಗಳನ್ನು ತೆಗೆಯುವಂತೆ ಕೇಳಿಕೊಂಡನು. ನಿರಾಕರಿಸಿದಾಗ ಅವನು ನನ್ನ ವೃತ್ತಿ ಜೀವನವನ್ನು ಹಾಳು ಮಾಡುವುದಾಗಿ ಬೆದರಿಸಿದ. ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಇಂದಿಗೂ ನಾನು ನಡುಗುತ್ತಿದ್ದೇನೆ,' ಎಂದು ಅವರು ಹೇಳಿದರು.

'ಅತ್ಯಾಚಾರದ ನಂತರ, ನಾನು ವಾರಗಟ್ಟಲೆ ಅನಾರೋಗ್ಯದಿಂದ ಬಳಲುತ್ತಿದ್ದೆ. ನನಗೆ ಏನೂ ಅರ್ಥವಾಗಲಿಲ್ಲ. ಅವರು ನನ್ನನ್ನು ಗರ್ಭಿಣಿಯಾದ ನಂತರ ಬಿಟ್ಟರು. ನಂತರ ನನ್ನನ್ನು ಹಲವು ತಿಂಗಳು ಸ್ಟುಡಿಯೋದಲ್ಲಿ ಬಂಧಿಸಿಡಲಾಗಿತ್ತು,' ಎಂದು ಮತ್ತಷ್ಟು ಬಹಿರಂಗ ಪಡಿಸಿದ ಸಿಂಗರ್.

'ನಂತರ, ನಾನು ಅನೇಕ ವರ್ಷಗಳ ಕಾಲ ಮಾನಸಿಕ ಅಸ್ವಸ್ಥಳಾಗಿದ್ದೆ. ನನ್ನ ಕೆಲಸದಿಂದಲೂ ವಿರಾಮ ತೆಗೆದುಕೊಂಡೆ. ಆ ಸಮಯದಲ್ಲಿ ಚಿಕಿತ್ಸೆಗೆ ಒಳಾಗದೆ. ಅನೇಕ ಟೆಸ್ಟ್‌ಗಳನ್ನು ಸಹ ಮಾಡಲಾಯಿತು. ನನ್ನ ಮನಸ್ಸು ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿತ್ತು,' ಎಂದು ಹೇಳಿದ ಲೇಡಿ ಗಾಗಾ.

'ಆ ಅಪಘಾತವನ್ನು ಮರೆಯಲು ನನ್ನ ದೇಹ ಸಿದ್ಧವಾಗಿರಲಿಲ್ಲ. ಆಗ ನಾನು ನನ್ನನ್ನು ಬಲಪಡಿಸಿಕೊಂಡೆ. ಆ ಘಟನೆಯನ್ನು ಮೆರೆಯಲು ಹಲವು ಥೆರಪಿಗಳ ಸಹಾಯ ತೆಗೆದುಕೊಂಡೆ. ಎರಡೂವರೆ ವರ್ಷಗಳ ಕಾಲ ಚಿಕಿತ್ಸೆಯನ್ನು ತೆಗೆದುಕೊಂಡ ನಂತರ ನಾನು ನಾರ್ಮಲ್ ಆಗಲು ಸಾಧ್ಯವಾಯಿತು,' ಎಂದು ಹೇಳಿದ್ದಾರೆ.

ಗಾಗಾ ಈ ದಿನಗಳಲ್ಲಿ ಉದ್ಯಮಿ ಮೈಕೆಲ್ ಪೋಲನ್‌ಸ್ಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

ಫ್ಯಾಷನಿಸ್ಟ್ ಲೇಡಿ ಗಾಗಾ ಯಾವಾಗಲೂ ಅವರ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಹೆಡ್‌ಲೈನ್‌ಲ್ಲಿರುತ್ತಾರೆ.

ಶೀಘ್ರದಲ್ಲೇ ಹೌಸ್ ಆಫ್ ಗುಶಿ ಎಂಬ ಕ್ರೈಮ್ ಡ್ರಾಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಲೇಡಿ ಗಾಗಾ.

ಒಟ್ಟಿನಲ್ಲಿ ಅನೇಕ ಹೆಣ್ಣು ಮಕ್ಕಳಂತೆಯೇ ಈ ಖ್ಯಾತ ಗಾಯಕಿ ಜೀವನದಲ್ಲಿಯೂ ದುರಂತವೊಂದು ನಡೆದಿದ್ದು ಹೌದು. ಅದನ್ನು ಮೆಟ್ಟಿನಿಂತು ಮತ್ತೆ ಮೇಲೆ ಎದ್ದಿದ್ದು ಮಾತ್ರ ಎಲ್ಲಾ ಹೆಣ್ಣು ಮಕ್ಕಳಿಗೂ ಮಾದರಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ