ಸರ್ವಾಧಿಕಾರಿ ನಾಡಲ್ಲಿ ಮಕ್ಕಳು ಬ್ಲೂ ಫಿಲಂ ನೋಡಿದ್ರೆ ತಂದೆ ತಾಯಿಗೆ ಜೈಲು!
ವಿಶ್ವವ್ಯಾಪಿ ಕೊರೋನಾ ಆತಂಕ ಮಿತಿ ಮೀರಿದೆ.ಆದರೆ ಈ ನಡುವೆ ಒಂದು ದೇಶ ಮಾತ್ರ ತನ್ನ ನೆಲದಲ್ಲಿ ಒಬ್ಬ ವ್ಯಕ್ತಿಗೂ ಕೊರೋನಾ ಅಂಟಿಲ್ಲ ಎಂದು ವಾದಿಸುತ್ತಿದೆ. ಇನ್ನು ಸೋಂಕು ತಗುಲಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿನ ಸರ್ವಾಧಿಕಾರಿ ಗುಂಡು ಹಾರಿಸಿ ಕೊಂದಿದ್ದಾರೆನ್ನಲಾಗಿದೆ. ಇದಾದ ಬಳಿಕ ಉತ್ತರ ಕೊರಿಯಾದಲ್ಲಿ ಕೊರೋನಾದ ಒಂದೂ ಪ್ರಕರಣ ವರದಿಯಾಗಿಲ್ಲ ಎನ್ನಲಾಗಿದೆ. ಹೀಗಿದ್ದರೂ ಇದು ಸುಳ್ಳು ಎಂಬುವುದು ಅನೇಕರ ಅಭಿಪ್ರಾಯವಾಗಿದೆ. ಕೊರೋನಾ ನಡುವೆ ಈ ದೇಶ ಇನ್ನೂ ಅನೇಕ ವಿಚಾರವಾಗಿ ಸದ್ದು ಮಾಡಿತ್ತು. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆಂಬ ವಿಚಾರ ಇದರಲಲ್ಲಿ ಒಂದು. ಆದರೆ ನಾಪತ್ತೆಯಾದ ಕೆಲ ದಿನಗಳಲ್ಲೇ ಮಾಧ್ಯಮದಲ್ಲಿ ಕಾಣಿಸಿಕೊಂಡ ಕಿಮ್ ತಾನು ಬದುಕಿದ್ದೇನೆಂದು ದೃಢಪಡಿಸಿದ್ದ. ಸದ್ಯ ಈ ದೇಶ ಹೊಸ ಕಾನೂನೊಂದನ್ನು ಜಾರಿಗೊಳಿಸಿ ಜನರ ಗಮನ ತನ್ನತ್ತ ಸೆಳೆದಿದೆ. ಉತ್ತರ ಕೊರಿಯಾ ಲೈಂಗಿಕ ಚಟುವಟಿಕೆ ಹತ್ತಿಕ್ಕಲು ಹಾಗೂ ಜಪಾನೀ ಪೋರ್ನ್ ಇಂಡಸ್ಟ್ರಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜಾರಿಗೊಳಿಸಿದೆ.
ಉತ್ತರ ಕೊರಿಯಾ ಅನೈತಿಕ ಲೈಂಗಿಕ ಚಟುವಟಿಕೆಗಳನ್ನು ಅಪರಾಧ ಎಂದು ಘೋಷಿಸಲಾಗಿದೆ. ಜೊತೆಗೆ ವಿದೇಶೀ ಫೋರ್ನ್ ತನ್ನ ದೇಶದ ಯುವಕರನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದೆ.
ದೇಶದ ರಾಜಧಾನಿ ಪ್ಯೋಂಗ್‌ಯೆಂಗ್‌ನಲ್ಲಿ ಜಾರಿಗೊಳಿಸಿದ ಆದೇಶದಲ್ಲಿ ದೇಶದ ಯುವಕರು ಇತ್ತೀಚೆಗೆ ಅನೈತಿಕ ಲೈಂಗಿಕ ಚಟುವಟಿಕೆಗಳಲ್ಇ ಹೆಚ್ಚು ತೊಡಗಿಕೊಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.
ಈ ಕಾರಣದಿಂದ ದೇಶದ ಹೆಸರು ಹಾಗೂ ಭವಿಷ್ಯ ಹಾಳಾಗುತ್ತಿದೆ ಎನ್ನಲಾಗಿದೆ ಅಲ್ಲದೇ ರೇಡಿಯೋ ಫ್ರೀ ಏಷ್ಯಾ ಮೂಲದನ್ವಯ ವಿದೇಶಿಗರು ಬೇಕೆಂದೇ ಯುವಕರನ್ನು ಹಾದಿ ತಪ್ಪಿಸುತ್ತಿದೆ ಎಂದು ಈ ಆದೇಶದಲ್ಲಿ ತಿಳಿಸಿದ್ದಾರೆಂದಿದೆ.
ಹೀಗಾಗೇ ಸದ್ಯ ವಿದ್ಯಾರ್ಥಿಗಳ ಫೋನ್ ಪರಿಶೀಲಿಸುವಂತೆ ಶಾಲೆಗಳಿಗೆ ಆದೇಶ ನೀಡಲಾಗಿದೆ. ಒಂದು ವೇಳೆ ಅದರಲ್ಲಿ ಪೋರ್ನ್ ಸಂಬಂಧ ಯಾವುದಾದರೂ ಮಾಹಿತಿ ಸಿಕ್ಕರೆ ಸರ್ಕಾರಕ್ಕೆ ಸೂಚಿಸುವಂತೆ ಆದೇಶಿಸಲಾಗಿದೆ.
ಒಂದು ವೇಳೆ ಮಕ್ಕಳ ಫೋನ್‌ನಲ್ಲಿ ಜಪಾನಿ ಪೋರ್ನ್ ಅಥವಾ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಪೋರ್ನ್ ಸಿಕ್ಕರೆ ಮಕ್ಕಳೊಂದಿಗೆ ಅವರ ತಂದೆ ತಾಯಿಗೂ ಜೈಲಾಗಲಿದೆ.
ಆದೇಶದಲ್ಲಿ ಈ ಪೋರ್ನ್ ಚೀನಾದಿಂದ ಬರುವ ಫೋನ್ ಹಾಗೂ ಯುಎಸ್‌ಬಿ ಕೇಬಲ್ ಮೂಕ ದೇಶದಲ್ಲಿ ಹಬ್ಬಿಕೊಳ್ಳುತ್ತಿದೆ ಎಂದಿದ್ದಾರೆ. ಇದರಿಂದ ಯುವಕರ ಸ್ಮಾರ್ಟ್‌ಫೋನ್ ಮಾನಿಟರ್ ಮಾಡಲಾಗುತ್ತಿದೆ ಎಂದಿದ್ದಾರೆ.
ಈ ನಿಯಮದ ಬಳಿಕ ವಿದ್ಯಾರ್ಥಿಗಳಲ್ಲಿ ಭಯ ಆವರಿಸಿದೆ. ಈ ದೇಶದಲ್ಲಿ ಜೈಲು ಶಿಕ್ಷೆಯಾದ ಬಳಿಕ ಬೇಲ್ ಸಿಗುವುದು ಬಹಳ ಕಷ್ಟ.
ಈ ಸಂಬಂಧ ಮಾಹಿತಿ ನೀಡಿರುವ ಕೇಂದ್ರ ಸಮಿತಿ ಇತ್ತೀಚೆಗೆ ದೇಶದಲ್ಲಿ ಫೋನ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಯುವಕರು ಅಪರಾಧ ಕೃತ್ಯಗಳಲ್ಲೂ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದೇಶ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಸದ್ಯ ಶಿಕ್ಷಕರು ಕೂಡಾ ವಿದ್ಯಾರ್ಥಿಗಳ ಕುರಿತು ಬಹಳ ಎಚ್ಚರದಿಂದಿದ್ದಾರೆ. ಎಲ್ಲರ ಮೊಬೈಲ್ ಫೋನ್ ಚೆಕ್ ಮಾಡಲಾಗುತ್ತಿದೆ. ಶಿಕ್ಷಕರು ಪತ್ತೆ ಹಚ್ಚುವಲ್ಲಿ ಎಡವಿದರೆ ಅವರಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಇನ್ನು ಉತ್ತರ ಕೊರಿಯಾದಲ್ಲಿ ಮಕ್ಕಳಿಗೆ ಸೆಕ್ಸ್ ಎಜುಕೇಶನ್ ನೀಡುವುದೇ ಇಲ್ಲ. ಹೀಗಾಗಿ ಮಕ್ಕಳು ದೊಡ್ಡವರಾಗಿ ಹಲವಾರು ರೀತಿಯ ರೋಗಕ್ಕೆ ತುತ್ತಾಗುವುದರೊಂದಿಗೆ ಕೆಟ್ಟ ಕೆಲಸದ್ಲಿ ತೊಡಗಿಕೊಳ್ಳುತ್ತಾರೆ.