ರಾಜಕೀಯಕ್ಕಾಗಿ ಡಾಕ್ಟರ್ ವೃತ್ತಿ ಬಿಟ್ಟಿದ್ದ ಈ ಪ್ರಧಾನಿ ಮತ್ತೆ ವೈದ್ಯಕೀಯ ಸೇವೆಗೆ ಹಾಜರ್!

First Published 7, Apr 2020, 4:54 PM

ದೇಶದಾದ್ಯಂತ ಇನ್ನೂರಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ವೈರಸ್ ಸೋಂಕಿನಿಂದ ಕಂಗಾಲಾಗಿವೆ. ಈವರೆಗೂ ಹದಿಮೂರು ಲಕ್ಷಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಹಾಗೂ 74 ಸಾವಿರಕ್ಕೂ ಅಧಿಕ ಮಂದಿ ಇದರಿಂದ ಮೃತಪಟ್ಟಿದ್ದಾರೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮದೇ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿವೆ. ಹೀಗಿರುವಾಗ ಇಲ್ಲೊಂದು ರಾಷ್ಟ್ರದ ಪಿಎಂ ಕೊರೋನಾ ಸಂಕಷ್ಟದ ಸಮಯದಲ್ಲಿ  ರಾಜಕೀಯಕ್ಕಾಗಿ ತಾನು ಬಿಟ್ಟಿದ್ದ ವೈದ್ಯ ವೃತತ್ತಿಗೆ ಮತ್ತೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಇದು ಐರ್ಲೆಂಡ್‌ನ ಕತೆ.

ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ತನ್ನ ದೇಶದ ಸಹಾಯಕ್ಕೆ ಐರ್ಲೆಂಡ್‌ ಪ್ರಧಾನಿ ವರಡ್ಕರ್ ಮತ್ತೆ ವೈದ್ಯಕೀಯ ಸೇವೆಗೆ ಮುಂದಾಗಿದ್ದಾರೆ. ಡಾಕ್ಟರ್ ಆಗಿ ಸೇವೆ ಮುಂದುವರೆಸಲು ನಿರ್ಧರಿಸಿದ್ದಾರೆ. ಬರೋಬ್ಬರಿ ಏಳು ವರ್ಷದ ಹಿಂದೆ ಅವರು ರಾಜಕೀಯಕ್ಕಾಗಿ ತಮ್ಮ ವೃತ್ತಿಯನ್ನು ಬಿಟ್ಟಿದ್ದರು.

ಆದರೀಗ ಇಂತಹ ಸಂಕಷ್ಟದ ಸಮಯದಲ್ಲಿ ಅವರು ಮತ್ತೆ ವೈದ್ಯರಾಗಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅವರು ಕೊರೋನಾ ಪೀಡಿತರಿಗಾಗಿ ವಾರದಲ್ಲಿ ಒಂದು ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಅಧಿಕಾರಿಗಳು ವರಡ್ಕರ್ ಕುಟುಂಬದ ಅನೇಕ ಸದಸ್ಯರು ಹಾಗೂ ಮಿತ್ರರು ವೈದ್ಯಕೀಯ ವೃತ್ತಿ ಮಾಡುತ್ತಿದ್ದಾರೆ. ಇದನ್ನು ನೋಡಿಯೇ ಪಿಎಂ ಈ ಸೇವೆಗೆ ಮುಂದಾಗಿದ್ದಾರೆಂದು ತಿಳಿಸಿದ್ದಾರೆ.

ಐರಿಶ್ ಮಾಧ್ಯಮಗಳನ್ವಯ ಪ್ರಧಾನಿಗೆ ಸೋಂಕಿತರಿಗೆ ಸಲಹೆ ನೀಡುವ ಕಾರ್ಯ ಕೆಲಸ ವಹಿಸಬಹುದು ಎನ್ನಲಾಗಿದೆ. ಇಲ್ಲಿ ಸೋಂಕಿತರಿಗೆ ಮೊದಲು ಫೋನ್ ಮೂಲಕ ಸಲಹೆ ನೀಡಲಾಗುತ್ತದೆ.

ವರಡ್ಕರ್ ಐರ್ಲೆಂಡ್‌ನ ಮೊಟ್ಟ ಮೊದಲ ಸಲಿಂಗಿ ಪ್ರಧಾನಿಯಾಗಿದ್ದಾರೆ. ಮಹಾಮಾರಿ ಕೊರೋನಾ ಅಟ್ಟಹಾಸ ಗಮನಿಸಿ ಅವರ ಸರ್ಕಾರ ಬಹುದೊಡ್ಡ ಸಂಖ್ಯೆಯಲಲ್ಲಿ ವೈದ್ಯರ ನೇಮಕ ಆರಂಭಿಸಿದೆ. ಅವರ ತಂದೆ ಭಾರತೀಯ ವೈದ್ಯರಾಗಿದ್ದರೆ, ತಾಯಿ ಐರ್ಲೆಂಡ್‌ನಲ್ಲಿ ನರ್ಸ್ ಆಗಿದ್ದರು.

ಭಾರತೀಯ ಮೂಲಕ ವರಡ್ಕರ್ 2017ರಲ್ಲಿ ಐರ್ಲೆಂಡ್‌ನ ಅತ್ಯಂತ ಯುವ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಭಾರತದೊಂದಿಗಿನ ತನ್ನ ಸಂಬಂಧವನ್ನು ಈಗಲೂ ಮುಂದುವರೆಸಿದ್ದಾರೆ.

ಡಾಕ್ಟರ್ ಆಗುವುದಕ್ಕೂ ಮುನ್ನ ಅವರು ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಕೂಡಾ ಮಾಡಿದ್ದರು.

ಇತರ ದೇಶಗಳಂತೆ ಐರ್ಲೆಂಡ್‌ನಲ್ಲೂ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿವೆ. ಇಲ್ಲಿ ಈವರೆಗೂ ಒಟ್ಟು ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ 174 ಜನರು ಮೃತಪಟ್ಟಿದ್ದಾರೆ.

loader