ಕನ್ಯತ್ವ ವಿಚಾರಕ್ಕಾಗಿ 16ರ ಬಾಲಕಿಯನ್ನು ಗಲ್ಲಿಗೇರಿಸಿದ ಇರಾನ್‌ಗೆ ಕರ್ಮ ಬಿಡೋದಿಲ್ಲ!
ಯಾರೇ ಆಗಲಿ ಕರ್ಮ ಅನುಭವಿಸಲೇಬೇಕು. ಇದು ಪುರಾಣಗಳಿಂದಲೂ ಕೇಳ್ತಾ ಇದ್ದೀವಿ. ಈಗ ಇರಾನ್ ಕೂಡ ತನ್ನ ತಪ್ಪಿಗೆ ಶಿಕ್ಷೆ ಅನುಭವಿಸ್ತಿದೆಯಾ? ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಇರಾನ್ ಪತನ ಆರಂಭವಾಗಿದೆಯಾ?
ಇರಾನ್ ಪತನ ಆರಂಭವಾಗಿದೆಯಾ? ಈಗಿನ ಪರಿಸ್ಥಿತಿ ನೋಡಿದ್ರೆ ಹೌದೇನೋ ಅನ್ನಿಸ್ತಿದೆ. ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನೀ ಅಂತ್ಯಕ್ಕೆ ಅಮೆರಿಕಾ ಜೊತೆ ಇಸ್ರೇಲ್ ಕೂಡ ಪ್ಲ್ಯಾನ್ ಮಾಡುತ್ತಿದೆ. ಹೀಗಾಗಿ ಇರಾನ್ ಅಂತ್ಯ ಶುರುವಾಗಿದೆ ಅಂತ ಎಲ್ಲರೂ ಮಾತಾಡ್ತಿದ್ದಾರೆ.
ಆದರೆ, 2004ರಲ್ಲಿ ಇರಾನ್ ಮಾಡಿದ ಒಂದು ಕ್ರೂರ ಕೃತ್ಯದಿಂದಲೇ ಈಗ ಶಿಕ್ಷೆ ಅನುಭವಿಸುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 16 ವರ್ಷದ ಅತೀಫ್ ರಜಬಿ ಸಹಾಲೆ ಸಾವು ಇರಾನ್‌ನ ಹಿಂಬಾಲಿಸುತ್ತಿದೆ ಅಂತ ಜನ ಹೇಳ್ತಿದ್ದಾರೆ.
ಯಾರಿವಳು ಅತೀಫ್ ರಜಬಿ ಸಹಾಲೆ?
ಇರಾನ್‌ನ 16ರ ಹುಡುಗಿ ಅತೀಫ್ ರಜಬಿ ಸಹಾಲೆಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಅದೂ ಎಲ್ಲರ ಮುಂದೆ ಸಾರ್ವಜನಿಕವಾಗಿ ಗಲ್ಲಿಗೆ ಹಾಕಲಾಗುತ್ತು. 2004ರ ಆಗಸ್ಟ್ 15ರಂದು ನೇಕಾ ಪಟ್ಟಣದಲ್ಲಿ ಪ್ರಜೆಗಳ ಮುಂದೆ ಗಲ್ಲಿಗೇರಿಸಿ ಬಾಲಕಿಯನ್ನು ಕೊಲೆ ಮಾಡಲಾಗಿತ್ತು.
ಆದರೆ, ಬಾಲಕಿ ಏನು ತಪ್ಪು ಮಾಡಿದ್ದಳು ಅಂತ ನಿಮ್ಮ ಪ್ರಶ್ನೆ ಸಹಜ. ಆಕೆ ಅಪರಾಧಿಯಲ್ಲ, ಸಂತ್ರಸ್ತ ಹುಡುಗಿಯಾಗಿದ್ದಳು. ತಂದೆ ತಾಯಿ ಇಲ್ಲದ ಆ ಹುಡುಗಿ ಮೇಲೆ ಒಬ್ಬ ವ್ಯಕ್ತಿ ಅತ್ಯಾ*ಚಾರ ಮಾಡಿದ. ಇರಾನ್ ಕಾನೂನು ಪ್ರಕಾರ ಇದು ಅಪರಾಧ. ಕನ್ಯತ್ವ ಕಳೆದುಕೊಂಡಿದ್ದೇ ಆಕೆ ಮಾಡಿದ ತಪ್ಪು ಅಂತ ಅಪರಾಧಿ ಅಂತ ತೀರ್ಮಾನಿಸಿದ್ದರು.
ಇದಕ್ಕೆಲ್ಲಾ ಗಲ್ಲು ಶಿಕ್ಷೆಯಾ?
ಅತೀಫ್‌ಗೆ ಗಲ್ಲು ಶಿಕ್ಷೆ ಆಗೋಕೆ ಇನ್ನೊಂದು ಕಾರಣ ಇದೆ. ತನಗೆ ಅನ್ಯಾಯ ಆಗಿದೆ ಅಂತ ಪೊಲೀಸರಿಗೆ ಹೇಳಿದರೆ, ತಪ್ಪು ನಿನ್ನದೇ ಅಂತ ಕೋರ್ಟ್ ಹೇಳಿದೆ. ಇದರಿಂದ ಆಕೆಗೆ ಸಿಟ್ಟು ಬಂತು. ಕೋರ್ಟ್ ಹಾಲ್‌ನಲ್ಲೇ ಹಿಜಾಬ್ ತೆಗೆದು ಪ್ರತಿಭಟಿಸಿದಳು.
ಇದನ್ನು ಗಂಭೀರ ಅಪರಾಧ ಅಂತ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದರು. ಆಕೆ ಕೋಪದಲ್ಲಿ ಜಡ್ಜ್ ಮೇಲೆ ಚಪ್ಪಲಿ ಎಸೆದಳು. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಬದಲಾಯಿಸಿದರು. ಆಕೆಯನ್ನು ಬಹಿರಂಗವಾಗಿ ಗಲ್ಲಿಗೇರಿಸಿದರು.
ಆಕೆ ವಯಸ್ಸನ್ನು 22 ಅಂತ ತೋರಿಸಿದರು
ಇರಾನ್ ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗಲ್ಲು ಶಿಕ್ಷೆ ಕೊಡಬಾರದು. ಆದರೆ ಆ ಹುಡುಗಿಯನ್ನು ಗಲ್ಲಿಗೇರಿಸಲೇಬೇಕು ಎನ್ನುವ ಉದ್ದೇಶದಿಂದ ಕೋರ್ಟ್ ಫೈಲ್‌ನಲ್ಲಿ ಆಕೆಯ ವಯಸ್ಸನ್ನು ತಪ್ಪಾಗಿ 22 ವರ್ಷವೆಂದು ತೋರಿಸಿ ಬಾಲಕಿ ಅತೀಫ್‌ಗೆ ಗಲ್ಲು ಶಿಕ್ಷೆ ಕೊಡಿಸಿದ್ದರು.
ಒಬ್ಬ ಅಮಾಯಕ ಹುಡುಗಿಯನ್ನು ಇರಾನ್ ಬಲಿ ತೆಗೆದುಕೊಂಡಿತು. ಆ ಹುಡುಗಿ ಶಾಪ ಇರಾನ್‌ಗೆ ತಟ್ಟಿದೆ. ಈಗ ಇರಾನ್‌ನಲ್ಲಿ ನಡೀತಿರೋದೆಲ್ಲಾ ಆ ಹುಡುಗಿ ಶಾಪ ಅಂತ ಕೆಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. @Brand_Netan ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಆ ಹುಡುಗಿಗೆ ಗಲ್ಲು ಶಿಕ್ಷೆ ಆದಮೇಲೆ ಇರಾನ್‌ನಲ್ಲಿ ಶಾಂತಿ ಇಲ್ಲ ಅಂತ ಬರೆದಿದ್ದಾರೆ.
ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಘಟನೆ
ಅತೀಫ್ ರಾಜಾಬಿ ಸಹಾಲೆ ಗಲ್ಲು ಶಿಕ್ಷೆ ಪ್ರಪಂಚವನ್ನೇ ಬೆಚ್ಚಿಬೀಳಿಸಿತು. ಇರಾನ್‌ನಲ್ಲಿ ನೈತಿಕ ಅಪರಾಧಗಳ ಹೆಸರಿನಲ್ಲಿ ಮಹಿಳೆಯರಿಗೆ ಗಲ್ಲು ಶಿಕ್ಷೆ, ಲಾಠಿ ಏಟು, ಬಂಧನಗಳು ಆಗುತ್ತಿವೆ. ಇದು ಪ್ರಪಂಚದ ಗಮನ ಸೆಳೆಯಿತು. ಇರಾನ್‌ನಲ್ಲಿ ಮಹಿಳೆಯರಿಗೆ ಹಕ್ಕುಗಳು ತುಂಬಾ ಕಡಿಮೆಯಾಗಿವೆ. ಅವರ ಉಡುಗೆ, ನಡವಳಿಕೆ ಎಲ್ಲದರ ಮೇಲೂ ಮೊರಾಲಿಟಿ ಪೊಲೀಸ್‌ಗಳು ಕಣ್ಣಿಟ್ಟಿರುತ್ತಾರೆ.
2022ರಲ್ಲಿ ಶುರುವಾದ ತಿರುಗುಬಾಣ
ಇರಾನ್‌ನಲ್ಲಿ ಮೊದಲ ಬಾರಿಗೆ 2022ರಲ್ಲಿ ತಿರುಗುಬಾಣ ಶುರುವಾಯಿತು. ಮಹ್ಸಾ ಅಮಿನಿ ಎಂಬ ಯುವತಿ ಮೊರಾಲಿಟಿ ಪೊಲೀಸ್‌ಗಳ ವಶದಲ್ಲಿ ಸತ್ತ ನಂತರ ‘ಜನ್, ಜಿಂದಗೀ, ಆಜಾದೀ’ (ಮಹಿಳೆ, ಜೀವನ, ಸ್ವಾತಂತ್ರ್ಯ) ಚಳುವಳಿ ಶುರುವಾಯಿತು. ಇದು ದೇಶಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ ದೊಡ್ಡ ಚಳುವಳಿಯಾಗಿ ಬೆಳೆಯಿತು. ಆದರೆ ಮತಾಂಧ ಇರಾನ್‌ನಲ್ಲಿ ಮಹಿಳೆಯರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಅನ್ನೋದು ಎಲ್ಲರಿಗೂ ಗೊತ್ತು.