ಅಮೆರಿಕದಲ್ಲಿ ಮೋದಿಗೆ ಅದ್ದೂರಿ ಸ್ವಾಗತ, ಪ್ರತಿಯೊಬ್ಬ ಭಾರತೀಯನಿಗೂ ಆಗಿತ್ತು ಹೆಮ್ಮೆ!
ಜೋ ಬೈಡೆನ್(Joe Biden) ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ(Narendra Modi) ಮೊದಲ ಬಾರಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡೆನ್ ಜೊತೆ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ, ಪ್ರಧಾನಿ ಮೋದಿ ಅವರು 2019 ರ ಟ್ರಂಪ್(Donald Trump) ಅಧ್ಯಕ್ಷರಾಗಿದ್ದ ವೇಳೆ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು, ಬಳಿಕ ಹೂಸ್ಟನ್‌ನಲ್ಲಿ 50 ನಿಮಿಷಗಳ ಭಾಷಣವನ್ನೂ ಮಾಡಿದ್ದರು. ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಅಲ್ಲದೇ ಭಾಷಣದ ಬಳಿಕ, ಟ್ರಂಪ್ ಮತ್ತು ಮೋದಿ ಪರಸ್ಪರರ ಕೈ ಹಿಡಿದು ಇಡೀ ಕ್ರೀಡಾಂಗಣದಲ್ಲೆ ಹೆಜ್ಜೆ ಹಾಕಿದ್ದರು. ಹೂಸ್ಟನ್‌ನಲ್ಲಿ ಆಯೋಜಿಸಿದ್ದ ಆ ಕಾರ್ಯಕ್ರಮದ ಹೆಸರು ಹೌಡಿ ಮೋದಿ(Howdy Modi) ಎಂದಿಡಲಾಗಿತ್ತು. ಅಂದಿನ ಆ ಅವಿಸ್ಮರಣೀಯ ಕಾರ್ಯಕ್ರಮದ ಕೆಲ ಫೋಟೋಗಳು ಇಲ್ಲಿವೆ ನೋಡಿ.
ಹೂಸ್ಟನ್‌ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಇಂದು ನಾವು ಇಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದೇವೆ, ಇಲ್ಲಿ ಹೊಸ ಕೆಮಿಸ್ಟ್ರಿ ಕೂಡಾ ಕಂಡು ಬಂದಿದೆ. ಇಲ್ಲಿನ ವಾತಾವರಣ ಕಲ್ಪನೆಗೆ ಮೀರಿದ್ದು ಎಂದಿದ್ದರು.
ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ "Howdy Modi" ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸುಮಾರು 50,000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೂಸ್ಟನ್‌ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕದ ಪ್ರತಿನಿಧಿ ಶೀಲಾ ಜಾಕ್ಸನ್ ಲೀ ಅವರನ್ನು ಭೇಟಿ ಮಾಡಿದ್ದರು.
ಇಲ್ಲಿ ಇಂದು ಹೊಸ ಹಿಸ್ಟರಿ ಹಾಗೂ ಕೆಮಿಸ್ಟ್ರಿ ಬರೆಯಲಾಗುತ್ತದೆ ಎಂದು ಮೋದಿ ಹೇಳಿದ್ದರು. ಅದೆಷ್ಟು ಜನರು ಇಲ್ಲಿಗಾಗಮಿಸಿದ್ದಾರೆಂದರೆ, ಇಂದು ಇಲ್ಲಿ ಸ್ಥಳದ ಕೊರತೆ ಕಂಡು ಬಂದಿದೆ. ಇಲ್ಲಿಗೆ ಬರಲು ಸಾಧ್ಯವಾಗದವರಿಗೆ ನಾನು ಕ್ಷಮೆಯಾಚಿಸುತ್ತೇನೆ.
ಕಾರ್ಯಕ್ರಮದಲ್ಲಿ ಮೋದಿ 50 ನಿಮಿಷಗಳ ಭಾಷಣ ಮಾಡಿದ್ದರು. ಭಾಷಣ ಮುಗಿದ ನಂತರ, ಟ್ರಂಪ್ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು ಬರ ಮಾಡಿಕೊಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ತೆಗೆದ ಈ ಚಿತ್ರ ವಿಶ್ವಾದ್ಯಂತ ಚರ್ಚೆ ಸೃಷ್ಟಿಸಿತ್ತು ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಕ್ರೀಡಾಂಗಣದ ಸುತ್ತಲೂ ಪರಸ್ಪರ ಹೆಗಲ ಮೇಲೆ ಕೈಹಾಕಿ ನಡೆದಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ, ಪಿಎಂ ಮೋದಿ ಡೊನಾಲ್ಡ್ ಟ್ರಂಪ್ ಅವರ ಕೈ ಹಿಡಿದು ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದ್ದರು. ಅಲ್ಲದೇ ಅಲ್ಲ ಹಾಜರಿದ್ದ ಜನರಿಗೆ ಧನ್ಯವಾದ ತಿಳಿಸಿದ್ದರು.
Howdy Modiಯಲ್ಲಿ, ಇಡೀ ವಿಶ್ವವೇ ಪಿಎಂ ಮೋದಿಯ ಸ್ವಾಗತವನ್ನು ನೋಡುತ್ತಿತ್ತು. ಅಮೆರಿಕದಲ್ಲಿರುವ ಭಾರತೀಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ಮೋದಿಯವರ ಭಾಷಣವನ್ನು ಆಲಿಸಿದ್ದರು.
ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಹಾಜರಿದ್ದರು. ಈ ಸಮಯದಲ್ಲಿ, ಇಡೀ ಕ್ರೀಡಾಂಗಣದಲ್ಲಿ ಮೋದಿ-ಮೋದಿ ಎಂಬ ಧ್ವನಿಯಷ್ಟೇ ಕೇಳುತ್ತಿತ್ತು.