6 ದಿನದ ಬಳಿಕ ಸಿಕ್ಕ ಮೊಸಳೆ, ಹೊಟ್ಟೆ ಸೀಳಿದಾಗ ಬಯಲಾಯ್ತು ಭಯಾನಕ ದೃಶ್ಯ!
ದುರಂತ ಎಂಬುವುದು ಇಂತಹುದೇ ಎಂಬ ನಿಗದಿತ ಸಮಯಕ್ಕೆ ಬರುವುದಿಲ್ಲ. ಕೆಲವೊಮ್ಮೆ ಮುಂದಿನ ಕ್ಷಣವೇ ತಮ್ಮ ಜೀವವನ್ನೇ ಕಸಿದುಕೊಳ್ಳುವ ಸ್ಥಿತಿ ಬರಬಹುದೆಂದು ಮನುಷ್ಯ ಊಹಿಸಿರುವುದಿಲ್ಲ. ಹೀಗೆಯೇ ಮಲೇಷ್ಯಾದ 14 ವರ್ಷದ ಹುಡುಗನಿಗೂ ರಾತ್ರಿ ಊಟಕ್ಕಾಗಿ ಬಸವನ ಹುಳು ಹಿಡಿಯಲು ಹೋಗುವುದೇ ತನ್ನ ಜೀವನದ ಕೊನೆಯ ತಪ್ಪು ನಿರ್ಧಾರವಾಗುತ್ತದೆ ಎಂದು ಆ ತ ಭಾವಿಸಿಯೂ ಇರಲಿಲ್ಲ. ಈ ಬಾಲಕ ಬರೋಬ್ಬರಿ ಆರು ದಿನ ನಾಪತ್ತೆಯಾಗಿದ್ದ. ಆದರೆ ಆರು ದಿನಗಳ ಬಳಿಕ ಆತನನ್ನು ಪತ್ತೆ ಹಚ್ಚಿದ್ದು, ಜನರು ಆತನನ್ನು 14 ಅಡಿ ಉದ್ದದ ಮೊಸಳೆ ಹೊಟ್ಟೆಯಿಂದ ಹೊರ ತೆಗೆದಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ

ಈ ಘಟನೆ ನಡೆದದ್ದು ಮಲೇಷ್ಯಾದಲ್ಲಿ. ಇಲ್ಲಿ 14 ವರ್ಷದ ಬಾಲಕನನ್ನು ಮೊಸಳೆಯೊಂದು ಜೀವಂತವಾಗಿ ನುಂಗಿದೆ. ಈ ಮೊಸಳೆ ಹೊಟ್ಟೆಯಿಂದ ಬಾಲಕನ ದೇಹದ ಅನೇಕ ಅಂಗಗಳು ಸಿಕ್ಕಿವೆ.

14 ವರ್ಷದ ಬಾಲಕನನ್ನು ರಿಕಿ ಗಾಂಯಾ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ರಿಕಿ ರಾತ್ರಿ ಊಟಕ್ಕೆಂದು ಬಸವನ ಹುಳು ಹಿಡಿಯಲು ತೆರಳಿದ್ದ. ಆಗಲೇ ಒಂದು ಮೊಸಳೆ ಆತನ ಕಾಲನ್ನು ಹಿಡಿದು ಎಳೆದೊಯ್ದಿದೆ.

ಮಲೇಷ್ಯಾದ ರೂಮಹ್‌ನ ರಿಕಿಗಾಗಿ ಕಳೆದ ಆರು ದಿನಗಳಿಂದ ಹುಡುಕಾಟ ನಡೆಯುತ್ತಿತ್ತು. ಆದರೆ ಕೊನೆಗೊಮ್ಮೆ ಕೋಳಿಯೊಂದನ್ನು ಹಿಡಿಯಲು ಮೊಸಳೆ ಆರು ದಿನಗಳ ಬಳಿಕ ನೀರಿನಿಂದ ಹೊರ ಬಂದಾಗ ರಿಕಿಯನ್ನು ಪತ್ತೆ ಹಚ್ಚಲಾಗಿದೆ.

ರಿಕಿಯನ್ನು ಮೊಸಳೆ ಜುಲೈ 26 ರಂದು ಎಳೆದೊಯ್ದಿತ್ತು. ಬಳಿಕ ಮೊಸಳೆ ಆತನನ್ನು ತಿಂದಿದೆ. ಆರು ದಿನದ ಬಳಿಕ ಆ ಮೊಸಳೆಗೆ ಮತ್ತೆ ಹಸಿವಾಗಿದ್ದು, ಅದು ಮತ್ತೆ ನದಿಯಿಂದ ಹೊರ ಬಂದಿತ್ತು.

ರಕ್ಷಣಾ ತಂಡ ಅದನ್ನು ಹೊಡೆದು, ಬಹಳ ಯತ್ನದ ಬಳಿಕ ನಿಯಂತ್ರಣಕ್ಕೆ ತಂದಿದೆ. ಅದೆಷ್ಟು ದೊಡ್ಡದಾಗಿತ್ತೆಂದರೆ ಅದನ್ನು ನಿಯಂತ್ರಿಸಲು ತಂಡ ಗ್ರಾಮಸ್ಥರ ಸಹಾಯ ಪಡೆದಿತ್ತು.

ಈ ತಂಡಕ್ಕೆ ಮೊಸಳೆ ಹೊಟ್ಟೆಯಿಂದ ಮನುಷ್ಯರ ಹಲವಾರು ದೇಹದ ಭಾಗಗಳು ಸಿಕ್ಕಿವೆ. ಮೊಸಳೆ ಹೊಟ್ಟೆ ಸೀಳಿ ಅನೇಕ ಅಂಗಗಗಳನ್ನು ಹೊರ ತೆಗೆಯಲಾಗಿದೆ. ಬಳಿಕ ಇವುಗಳನ್ನು ಹುಡುಗನ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಅವರು ರಿಕಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಇದೇ ಸ್ಥಳದಿಂದ ಮೊಸಳೆ ಬಾಲಕನನ್ನು ಎಳೆದೊಯ್ದಿತ್ತು. ಇದನ್ನು ಮಹಿಳೆಯೊಬ್ಬಳು ನೋಡಿದ್ದಳು. ಇದಾದ ಬಳಿಕ ಈ ಮೊಸಳೆ ಹೊರಬರಲು ಗ್ರಾಮಸ್ಥರು ಆರು ದಿನಗಳವರೆಗೆ ಕಾದಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ