ಐದು ತಿಂಗಳಿಗೇ ಹುಟ್ಟಿದ ಮಗು, ಅಪ್ಪ-ಅಮ್ಮನ ಮಡಿಲಲ್ಲಿ ಕೊನೆಯುಸಿರೆಳೆಯಿತು!
ತಾಯಿಯ ಗರ್ಭದಲ್ಲಿ ಪುಟ್ಟ ಮಗುವೊಂದು ಒಂಭತ್ತು ತಿಂಗಳ ಅವಧಿ ಕಳೆಯುತ್ತದೆ. ಈ ನಡುವೆ ವೀರ್ಯವೊಂದು ಆರೋಗ್ಯಯುತ ಮಗುವಾಗಿ ಬದಲಾಗುತ್ತದೆ. ಒಂಭತ್ತು ತಿಂಗಳಲ್ಲಿ ಶಿಶುವಿಗೆ ಕಣ್ಣು, ಕಿವಿ ಸೇರಿದಂತೆ ದೇಹದ ಭಾಗಗಳೆಲ್ಲವೂ ಬೆಳೆಯುತ್ತವೆ. ಆದರೆ ಒಂದು ವೇಳೆ ಯಾವುದಾದರೂ ಕಾರಣದಿಂದ ಶಿಶು ಗರ್ಭದಲ್ಲೇ ಮೃತಪಟ್ಟರೆ ಇದು ತಾಯಿಯನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಇನ್ನು ಅಮೆರಿಕದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಮಹಿಳೆಯರಿಗೆ ಅಬಾರ್ಷನ್ ಆಗುತ್ತದೆ. ಹೀಗಿರುವಾಗ ಅನೇಕ ಮಂದಿ ಮಹಿಳೆಯರು ಸೊಶಿಯಲ್ ಮೀಡಿಯಾದಲ್ಲಿ ತಾವು ತನ್ನ ಮಗುವನ್ನು ಕಳೆದುಕೊಂಡ ನೋವಿನ ಕತೆಯನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಪೆಂನ್ಸಿಲ್ವೇನಿಯಾದ ದಂಪತಿಯೊಂದು ತಮ್ಮ ಕಂದನನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದರು. ಈ ದಂಪತಿಯ ಶಿಶು ಕೇವಲ 19 ವಾರಗಳಲ್ಲಿ ಗರ್ಭದಿಂದ ಹೊರ ಬಂದಿತ್ತು. ದಂಪತಿ ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿತ್ತು. ಗರ್ಭದಿಂದ ಐದು ತಿಂಗಳ ಮೊದಲೇ ಹೊರ ಬಂದ ಈ ಭ್ರೂಣವನ್ನು ನೋಡಿದವರೆಲ್ಲರೂ ಬೆಚ್ಚಿ ಬಿದ್ದಿದ್ದರು. ಈ ಫೋಟೋಗಳು ಶಾಕಿಂಗ್ ಆಗಿದ್ದರೂ ಇದರಲ್ಲಿ ದಂಪತಿಯ ನೋವೂ ಕಾಣಿಸಿಕೊಂಡಿತ್ತು. ಇಲ್ಲಿವೆ ನೋಡಿ ಆ ಚಿತ್ರಗಳು.
ಪೆಂನ್ಸಿಲ್ವೇನಿಯಾ ನಿವಾಸಿ 36 ವರ್ಷದ ಎಲೆಕ್ಸಿಸ್ ಫ್ರಿಟ್ಸ್ ಆರು ವರ್ಷಗಳ ಹಿಂದೆ ತನ್ನ ಶಿಶುವನ್ನು ಕಳೆದುಕೊಂಡಿದ್ದರು. ಅವರು ತಮ್ಮ ಬ್ಲಾಗ್‌ನಲ್ಲಿ ತಮ್ಮ ಕಂದನನ್ನು ಕಳೆದುಕೊಂಡ ನೋವನ್ನು ಸೇರ್ ಮಾಡಿಕೊಂಡಿದ್ದರು. ಅವರು ತಮ್ಮ ಅಬಾರ್ಟ್ ಆದ ಶಿಶುವಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.
ಕೇವಲ 19 ವಾರದಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದಾದ ಬಳಿಕ ಅವರು ವಾಲ್ಟೆರ್‌ಗೆ ಜನ್ಮ ನೀಡಿದ್ದರು. ಆದರೆ ಆ ಶಿಶು ಕೆಲವೇ ಕ್ಷಣಗಳಲ್ಲಿ ಆಕೆಯ ಮಡಿಲಲ್ಲಿ ಪ್ರಾಣ ಬಿಟ್ಟಿತ್ತು.
ಈ ಶಿಶು ಜನಿಸಿದಾಗ ಅವರ ಹೃದಯ ಬಡಿದುಕೊಳ್ಳುತ್ತಿತ್ತು. ಕೆಲ ಸಮಯ ಅದು ತನ್ನ ತಾಯಿ ಮಡಿಲಲ್ಲಿ ಕಳೆದಿತ್ತು, ಜೊತೆಗೆ ತಂದೆಯೂ ಆ ಶಿಶುವಿನೊಂದಿಗೆ ಕೆಲ ಸಮಯ ಕಳೆದಿದ್ದರು. ಆದರೆ ಇದಾಧ ಕೆಲ ಹೊತ್ತಿನ ಬಳಿಕ ವಾಲ್ಟೆರ್ ಪ್ರಾಣ ಬಿಟ್ಟಿದ್ದ.
ತನ್ನ ಮಗುವಿಗೆ ವಿದಾಯ ಹೇಳುತ್ತಿರುವಾಗ ತೆಗೆದ ಫೋಟೋದಲ್ಲಿ ತಂದೆ ಜೋಶ್ವಾ ಫ್ರಿಟ್ಸ್. ಇನ್ನು ಯಾವ ದಿನ ವಾಲ್ಟೆರ್ ಜನಿಸಿದ್ದನೋ ಆವತ್ತು ಎಲಿಕ್ಸಿಸ್ ಕೇವಲ ಸಾಮಾನ್ಯ ತಪಾಸಣೆಗೆ ಬಂದಿದ್ದರು. ಆದರೆ ನೋಡ ನೋಡುತ್ತಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಜೋಶ್ವಾ ಹಾಗೂ ಎಲಿಕ್ಸಿಸ್‌ಗೆ ಮೊದಲೇ ಎರಡು ಮಕ್ಕಳಿದ್ದರು. ಈ ಇಬ್ಬರೂ ಮಕ್ಕಳು ತಮ್ಮ ಕಿರಿಯ ತಮ್ಮನಿಗೆ ವಿದಾಯ ಹೇಳಿದ್ದರು.
ಈ ಘಟನೆ ಬಳಿಕ ತಂದೆ, ತಾಯಿ ಇಬ್ಬರೂ ಕುಗ್ಗಿದ್ದರು.
ಜೋಶ್ವಾ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆಯುತ್ತಾ ಮಹಿಳೆಯರಿಗೆ ತಮ್ಮ ಮಗುವನ್ನು ಕಳೆದುಕೊಂಡ ನೋವು ವ್ಯಕ್ತಪಡಿಸಲು ಹಾಗೂ ಅಳಲು ಕೂಡಾ ಸಮಯ ಇರುವುದಿಲ್ಲ ಎಂದಿದ್ದಾರೆ.
ಇಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಗರ್ಭಪಾತವಾದಾಗ ಸಿಬ್ಬಂದಿ ಆ ಶಿಶು/ ಭ್ರೂಣವನ್ನು ಮೆಡಿಕಲ್ ವೇಸ್ಟ್ ಎಂದು ಘೋಷಿಸುತ್ತಾರೆ. ಅನೇಕ ಬಾರಿ ತಂದೆ ತಾಯಿಗೆ ಅವದನ್ನು ನೋಡಲು, ಮುಟ್ಟಲಲೂ ಅವಕಾಶ ನೀಡುವುದಿಲ್ಲ ಎಂದೂ ಬಹಿರಂಗಪಡಿಸಿದ್ದಾರೆ.