ನಗ್ನ ವೈದ್ಯರಿಂದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ: ಇದರ ಹಿಂದಿದೆ ನೋವಿನ ಕತೆ!

First Published 28, Apr 2020, 6:13 PM

ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡ ಮಾರಕ ಕೊರೋನಾ ವೈರಸ್ ನೋಡ ನೋಡುತ್ತಿದ್ದಂತೆಯೇ ಇಂದು ಇಡೀ ವಿಶ್ವವನ್ನು ಆವರಿಸಿ, ಆತಂಕ ಸೃಷ್ಟಿಸಿದೆ. ಈವರೆಗೂ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇನ್ನು ಮೃತರ ಸಂಖ್ಯೆ ಎರಡು ಲಕ್ಷ ಮೀರಿದೆ. ಈ ವೈರಸ್ ನಿವಾರಿಸಲು ಈವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಸದ್ಯ ಸೋಂಕಿತರಿಂದ ಅಂತರ ಕಾಪಾಡಿಕೊಳ್ಳುವುದಷ್ಟೇ ನಮ್ಮನ್ನು ನಾವು ರಕ್ಷಿಸಲು ಉಳಿದುಕೊಂಡಿರುವ ಮಾರ್ಗವಾಗಿದೆ. ಹೀಗಿರುವಾಗ ಹಲವಾರು ದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಎಲ್ಲರೂ ತಮ್ಮ ಮನೆಗಳಲ್ಲಿ ಕೈದಿಗಳಂತಿದ್ದಾರೆ. ಇನ್ನು ಕೊರೋನಾ ವಾರಿಯರ್ಸ್ ಎಂದು ಯಾರನ್ನು ಕರೆಯುತ್ತೇವೋ ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸೋಂಕಿತರ ಚಿಕಿತ್ಸೆ ಮಾಡುತ್ತಿದ್ದಾರೆ. ಆದರೆ ವೈದ್ಯ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯ ಸಿಗದ ಕಾರಣ ಪ್ರಾಣ ಕಳೆದುಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಅನೇಕ ದೇಶಗಳಲ್ಲಿ ಅನೇಕ ಕೊರೋನಾ ವಾರಿಯರ್ಸ್ ಸೋಂಕಿತರಾಗಿದ್ದಾರೆ. ಸದ್ಯ ಜರ್ಮನಿಯ ವೈದ್ಯಕೀಯ ಸಿಬ್ಬಂದಿ ಸರ್ಕಾರದ ಬಳಿ ಉಚಿತ ಪಿಪಿಇ ಕಿಟ್ ನೀಡುವಂತೆ ಮನವಿ ಮಾಡಿದ್ದು, ಇದಕ್ಕಾಗಿ ವಿಚಿತ್ರ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಿತ್ರ ಪ್ರತಿಭಟನೆ ಹೇಗೆ ಮಾಡುತ್ತಿದ್ದಾರೆ? ನೀವೇ ನೋಡಿ.

ಪಾಕಿಸ್ತಾನದಲ್ಲಿ ಹಲವಾರು ವೈದ್ಯರು ಕೊರೋನಾ ವಿರುದ್ಧ ಹೋರಾಡಲು ಉಚಿತ ಪಿಪಿಇ ಕಿಟ್ ಕೊಡಲಿಲ್ಲವೆಂದು ತಮ್ಮ ಕೆಲಸವನ್ನೇ ಬಿಟ್ಟಿದ್ದಾರೆ. ಆದರೀಗ ಜರ್ಮನ್‌ನಲ್ಲಿ ವೈದ್ಯರು ಈ ಸಮಸ್ಯೆ ನಿವಾರಿಸಲು ವಿಭಿನ್ನ ಹಾದಿ ಕಂಡುಕೊಂಡಿದ್ದಾರೆ.

ಜರ್ಮನಿಯ ಫ್ರಂಟ್‌ಲೈನರ್ಸ್‌ ತಮ್ಮ ನಗ್ನ ಸೆಲ್ಪೀಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾರಂಭಿಸಿದ್ದಾರೆ. ಪಿಪಿಇ ಕಿಟ್ ಇಲ್ಲದಾಗ ಇದೇ ಅನುಭವವಾಗುತ್ತದೆ ಎಂಬುವುದು ವೈದ್ಯರ ಮಾತಾಗಿದೆ.

ಜರ್ಮನಿಯಲ್ಲಿ ವೈದ್ಯರು ಪಿಪಿಇ ಸೂಟ್ ಹಾಗೂ ಇಕ್ವಿಪ್‌ಮೆಂಟ್‌ ಕೊರತೆ ಹಿನ್ನೆಲೆ ಇಂತಹ ಫೋಟೋಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದಾರೆ.

ವೈದ್ಯೆಯೊಬ್ಬರು ಟಾಯ್ಲೆಟ್ ಪೇಪರ್ ಹಿಂಬದಿಯಲ್ಲಿ ಕುಳಿತು, ಮಾಸ್ಕ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಇಲ್ಲಿ ಸರ್ಕಾರ ಪಿಪಿಇ ಕಿಟ್ ಉತ್ಪಾದನೆ ಹೆಚ್ಚಿಸಿದೆ. ಹೀಗಿದ್ದರೂ ವೈದ್ಯರು ಕೊರತೆ ಅನುಭವಿಸುತ್ತಿದ್ದಾರೆ.

ಈ ತಂಡದ ವೈದ್ಯೆಯೊಬ್ಬರು ಜನವರಿಯಲ್ಲಿ ಮೊದಲ ಪ್ರಕರಣ ದಾಖಲಾದಾಗಲೇ ಕಿಟ್‌ಗಳಿಗೆ ಬೇಡಿಕೆ ಇಡುತ್ತಾ ಬಂದಿದ್ದೇವೆ. ಆದರೆ ಇದನ್ನು ಈವರೆಗೂ ಪೂರೈಸಿಲ್ಲ. ಮೆಡಿಕಲ್ ತಂಡ ಫಿಲ್ಟರ್ ಮಾಸ್ಕ್, ಗಾಗಲ್ಸ್, ಗ್ಲೌವ್ಸ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.  ಆದರೆ ಬಹಳ ಕಡಿಮೆ ಪ್ರಮಾಣದಲ್ಲಿ ಇದನ್ನು ಪೂರೈಸಿದ್ದಾರೆ.

ಈ ಕಾರಣದಿಂದ ಸರ್ಕಾರದ ಗಮನ ಸೆಳೆಯಲು ವೈದ್ಯರು ಈ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಸಾಧನಗಳಿಲ್ಲದೇ ಕೊರೋನಾ ಸೋಂಕಿತರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ, ಬಟ್ಟೆ ಧರಿಸದೇ ಕೆಲಸ ಮಾಡಿದಂತೆಯೇ ಭಾಸವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಪಿಪಿಇ ಕಿಟ್ ಕೊರತೆಯಿಂದಾಗಿ ವೈದ್ಯರು ಕೇವಲ ಸ್ಟೆಥೋಸ್ಕೋಪ್‌ ಜೊತೆಗೆ ನಗ್ನರಾಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಪ್ರತಿಭಟನೆಯ ಈ ಪರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಇಷ್ಟಪಡಲಾಗಿದೆ.

ಇನ್ನು ಜರ್ಮನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವೇಗವಾಗಿ ಹರಡುತ್ತಿದೆ. ಮಾರ್ಚ್ 14 ಬಳಿಕ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ ಅಪಾಯ ನಿವಾರಣೆಯಾಗಿಲ್ಲ.

ಸದ್ಯ ಇಲ್ಲಿ ಸಾರ್ವಜನಿಕವಾಗಿ ಓಡಾಡುವವರಿಗೆ ಮಾಸ್ಕ್ ಧರಿಸುವುದು ಖಡ್ಡಾಯ ಮಾಡಲಾಗಿದೆ.

loader