MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • 7ನೇ ವರ್ಷ ಜಗತ್ತಿನ ಅತಿ ಸಂತೋಷಭರಿತ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಈ ದೇಶ.. ಭಾರತಕ್ಕೆಷ್ಟನೇ ಸ್ಥಾನ?

7ನೇ ವರ್ಷ ಜಗತ್ತಿನ ಅತಿ ಸಂತೋಷಭರಿತ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಈ ದೇಶ.. ಭಾರತಕ್ಕೆಷ್ಟನೇ ಸ್ಥಾನ?

ವಿಶ್ವದ ಅತಿ ಸಂತೋಷಕರ ದೇಶವಾಗಿ ಸತತ 7ನೇ ಬಾರಿಗೆ ಫಿನ್‌ಲ್ಯಾಂಡ್ ಗುರುತಿಸಿಕೊಂಡಿದೆ. ಶ್ರೇಯಾಂಕವು ಅಲ್ಲಿ ವಾಸಿಸುವ ಜನರ ಜೀವನ ತೃಪ್ತಿ ಮತ್ತು ಇತರ ಅಂಶಗಳನ್ನು ಒಳಗೊಂಡಿವೆ.  

2 Min read
Suvarna News
Published : Mar 20 2024, 01:02 PM IST
Share this Photo Gallery
  • FB
  • TW
  • Linkdin
  • Whatsapp
112

ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ವರದಿಯನ್ನು ಬುಧವಾರ ಯುಎನ್ ಬಿಡುಗಡೆ ಮಾಡಿದೆ. ಅದರಂತೆ ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್‌ನಲ್ಲಿ ಫಿನ್‌ಲ್ಯಾಂಡ್ ಸತತ ಏಳನೇ ವರ್ಷ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಉಳಿದಿದೆ.
 

212

ಶ್ರೇಯಾಂಕವು ಅಲ್ಲಿ ವಾಸಿಸುವ ಜನರ ಜೀವನ ತೃಪ್ತಿ ಮತ್ತು ಇತರ ಅಂಶಗಳನ್ನು ಒಳಗೊಂಡಿದ್ದು, ವಿಶ್ವದ ಯಾವುದೇ ದೊಡ್ಡ ದೇಶಗಳು ಸಂತೋಷಭರಿತ ದೇಶಗಳ ಟಾಪ್ 10 ಪಟ್ಟಿಯೊಳಗೆ ಬರದೆ ಇರುವುದು ವಿಪರ್ಯಾಸ. 

312

ನಾರ್ಡಿಕ್ ರಾಷ್ಟ್ರಗಳು ಅತ್ಯಂತ ಹರ್ಷಚಿತ್ತದಿಂದ ಅಗ್ರಸ್ಥಾನಗಳಲ್ಲಿ ತಮ್ಮ ಹಿಡಿತವನ್ನು ಉಳಿಸಿಕೊಂಡಿದ್ದರೆ, ಅಫ್ಘಾನಿಸ್ತಾನ್ ಮತ್ತು ಲೆಬನಾನ್ ಈ ಪಟ್ಟಿಯ ಸಂಪೂರ್ಣ ಕೆಳಭಾಗದಲ್ಲಿವೆ. 

412

ಫಿನ್‌ಲ್ಯಾಂಡ್ ಬಳಿಕದ ಸ್ಥಾನಗಳಲ್ಲಿ ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ಇವೆ. ಅಗ್ರ 10 ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಮಾತ್ರ 15 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಟಾಪ್ 20 ರಲ್ಲಿ, ಕೆನಡಾ ಮತ್ತು ಯುಕೆ ಮಾತ್ರ 30 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.
 

512

2020ರಲ್ಲಿ ತಾಲಿಬಾನ್ ನಿಯಂತ್ರಣವನ್ನು ಮರಳಿ ಪಡೆದ ನಂತರ ಭಯೋತ್ಪಾದನೆ ಪೀಡಿತವಾಗಿರುವ ಅಫ್ಘಾನಿಸ್ತಾನವು ಸಮೀಕ್ಷೆಗೆ ಒಳಪಟ್ಟ 143 ದೇಶಗಳಲ್ಲಿ 143ನೇ ಸ್ಥಾನದಲ್ಲಿ, ಕೆಳಭಾಗದಲ್ಲಿದೆ.

612

ಒಂದು ದಶಕದಿಂದ ಟಾಪ್ 20ರೊಳಗೆ ಸ್ಥಾನ ಕಾಯ್ದುಕೊಳ್ಳುತ್ತಿದ್ದ ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳು ಮೊದಲ ಬಾರಿಗೆ, ಮೊದಲ 20 ಸಂತೋಷದ ರಾಷ್ಟ್ರಗಳಲ್ಲಿ ಇರಲಿಲ್ಲ. ಅವು ಕ್ರಮವಾಗಿ 23 ಮತ್ತು 24ನೇ ಸ್ಥಾನದಲ್ಲಿವೆ. ಪ್ರತಿಯಾಗಿ, ಕೋಸ್ಟರಿಕಾ ಮತ್ತು ಕುವೈತ್ 12 ಮತ್ತು 13 ರಲ್ಲಿ ಅಗ್ರ 20 ರೊಳಗೆ ಪ್ರವೇಶಿಸಿವೆ.

712

ಇಲ್ಲಿ ಸಂತೋಷದ ತೀವ್ರ ಕುಸಿತ
2006ರಿಂದ ಸಂತೋಷದ ತೀವ್ರ ಕುಸಿತವನ್ನು ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್‌ನಲ್ಲಿ ಗುರುತಿಸಲಾಗಿದೆ. ಆದರೆ ಪೂರ್ವ ಯುರೋಪಿಯನ್ ದೇಶಗಳಾದ ಸೆರ್ಬಿಯಾ, ಬಲ್ಗೇರಿಯಾ ಮತ್ತು ಲಾಟ್ವಿಯಾವು  ಸಂತೋಷ ಮಟ್ಟದಲ್ಲಿ ಅತಿ ದೊಡ್ಡ ಹೆಚ್ಚಳವನ್ನು ವರದಿ ಮಾಡಿವೆ.

812

ಭಾರತಕ್ಕೆ ಎಷ್ಟನೇ ಸ್ಥಾನ?
2022ರಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 126ನೇ ಸ್ಥಾನಕ್ಕೆ ಏರಿದೆ. ಆದರೂ ಒಟ್ಟಾರೆ ಶ್ರೇಯಾಂಕದಲ್ಲಿ ದೇಶವು ಸಾಕಷ್ಟು ಹಿಂದಿದೆ. 

912

ಮೌಲ್ಯಮಾಪನ ಹೇಗೆ?
ಸಂತೋಷದ ಶ್ರೇಯಾಂಕವು ವ್ಯಕ್ತಿಗಳ ಜೀವನ ತೃಪ್ತಿಯ ಸ್ವಯಂ-ಮೌಲ್ಯಮಾಪನವನ್ನು ಆಧರಿಸಿದೆ. ಜೊತೆಗೆ GDP ತಲಾವಾರು, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರವನ್ನು ಆಧರಿಸಿದೆ.

1012

ಫಿನ್‌ಲ್ಯಾಂಡ್ ವಿಶೇಷತೆ
ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ಸಂತೋಷದ ಸಂಶೋಧಕ ಜೆನ್ನಿಫರ್ ಡಿ ಪಾವೊಲಾ, ಪ್ರಕೃತಿಯೊಂದಿಗೆ ಫಿನ್ಸ್‌ನ ನಿಕಟ ಸಂಪರ್ಕ ಮತ್ತು ಆರೋಗ್ಯಕರ ಕೆಲಸ-ಜೀವನದ ಸಮತೋಲನವು ಅವರ ಜೀವನ ತೃಪ್ತಿಗೆ ಪ್ರಮುಖ ಕೊಡುಗೆಯಾಗಿದೆ ಎಂದು ಹೇಳಿದರು.

1112

ಹೆಚ್ಚುವರಿಯಾಗಿ, ಫಿನ್ಸ್ ಯಶಸ್ವಿ ಜೀವನ ಎಂದರೇನು ಎಂಬುದರ ಕುರಿತು ಹೆಚ್ಚು ಸಾಧಿಸಬಹುದಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಫಿನ್ಸ್‌ನ ಬಲಿಷ್ಠ ಕಲ್ಯಾಣ ಸಮಾಜ, ರಾಜ್ಯ ಅಧಿಕಾರಿಗಳ ಮೇಲಿನ ನಂಬಿಕೆ, ಕಡಿಮೆ ಮಟ್ಟದ ಭ್ರಷ್ಟಾಚಾರ ಮತ್ತು ಉಚಿತ ಆರೋಗ್ಯ ಮತ್ತು ಶಿಕ್ಷಣ ಇವರ ಸಂತೋಷಕ್ಕೆ ಪ್ರಮುಖ ಕಾರಣಗಳಾಗಿವೆ. 

 

1212

ಕಿರಿ ತಲೆಮಾರಿನವರಲ್ಲೇ ಸಂತೋಷ ಹೆಚ್ಚು
ಈ ವರ್ಷದ ವರದಿಯು ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿ ಕಿರಿಯ ಪೀಳಿಗೆಗಳು ತಮ್ಮ ಹಳೆಯ ಗೆಳೆಯರಿಗಿಂತ ಹೆಚ್ಚು ಸಂತೋಷದಿಂದಿದ್ದಾರೆ ಎಂದು ಕಂಡುಹಿಡಿದಿದೆ. ಯುರೋಪ್ ಹೊರತುಪಡಿಸಿ ಬೇರೆ ದೇಶಗಳಲ್ಲಿ ಚಿಂತೆ ಮಾಡುವ ಪ್ರವೃತ್ತಿ ಹೆಚ್ಚಿದೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved