ಸಾವಿನ ಮನೆಯಲ್ಲಿ ಮೋಜು ಮಸ್ತಿ ; ಲಾಕ್‌ಡೌನ್ ವಿರುದ್ಧ ಡೌನ್ ಡೌನ್ ಅಂತಿದೆ ಅಮೇರಿಕ

First Published 24, Apr 2020, 2:17 PM

ಅಮೆರಿಕದಲ್ಲಿ ಆಗಲೇ 8.5 ಲಕ್ಷ ಮಂದಿ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಸೋಂಕು ಇಳಿಮುಖ ಆದಂತೆ ಕಂಡರೂ, ರೋಗವಿನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. 47 ಸಾವಿರಕ್ಕೂ ಅಧಿಕ ಮಂದಿ ರೋಗದಿಂದ ಕೊನೆಯುಸಿರೆಳೆದಿದ್ದಾರೆ. ಆದರೂ, ಜನರಿಗೆ ಮನೆಯಲ್ಲಿರಲು ಮನಸಿಲ್ವಂತೆ. ಪಾಕ್, ಬೀಚ್ ಅಂತ ರಸ್ತೆಗಿಳಿದಿದ್ದಾರೆ. ಅಷ್ಟೇ ಅಲ್ಲ ಲಾಕ್‌ಡೌನ್ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ. ಮನುಷ್ಯನ ಸಂಚಾರಕ್ಕೆ ಅನುವು ಮಾಡಿಕೊಡಲು ಆಗ್ರಹಿಸುತ್ತಿದ್ದಾರೆ.

ಕೈಯಲ್ಲಿ ಗನ್ ಹಿಡ್ಕೊಂಡು ಲಾಕ್‌ಡೌನ್ ತೆರವುಗೊಳಿಸಿ ಎಂದು ಅಮೆರಿಕದ ಕೆಲವು ಬೀದಿಗಳಲ್ಲಿ ಮಂದಿ ಪ್ರತಿಭಟಿಸುತ್ತಿದ್ದಾರೆ.

ಈ ರೀತಿ ಹಿಡಿತದಲ್ಲಿಟ್ಟರೆ, ಜನರು ಹಸಿವಿನಿಂದ ಸಾಯುತ್ತಾರೆ. ಆರ್ಥಿಕ ಕುಸಿತ ಕಾಣುತ್ತದೆ, ಎಂಬುವುದು ಜನರ ಅಭಿಪ್ರಾಯ.

ಸುಮಾರು 22 ದಶಲಕ್ಷ ಮಂದಿ ಇದೀಗ ಅಮೆರಿಕದಲ್ಲಿ ನಿರುದ್ಯೋಗಿಗಳಾಗಿದ್ದಾರೆ.

ಉದ್ಯೋಗ ಸೃಷ್ಟಿಸಲು ಅಮೆರಿಕ್ಕೆ ದಶಕಕ್ಕಿಂತಲೂ ಹೆಚ್ಚು ಕಾಲ ಬೇಕಾಗಬಹುದೆನ್ನುತ್ತಾರೆ ತಜ್ಞರು.

ಕೊಲರಾಡೋನಲ್ಲಿ ಕೆಲವು ಪ್ರತಿಭಟನಾಕಾರರನ್ನು ಆರೋಗ್ಯ ಕಾರ್ಯಕರ್ತರು ತಡೆ ಹಿಡಿದಿದ್ದು, ದೊಡ್ಡ ಸಂಘರ್ಷಕ್ಕೂ ನಾಂದಿ ಹಾಡಿತ್ತು.

undefined

ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಆಡಳಿತವಿರೋ ರಾಜ್ಯಗಳೂ ಇವುಗಳಲ್ಲಿವೆ.

ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಲು ಈಗಲೇ ಸಾಧ್ಯವಿಲ್ಲ. ಆದರೆ, ನಿಧಾನವಾಗಿ ಅಗತ್ಯ ವಸ್ತುಗಳ ಮಾರಾಟಕ್ಕೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎಂದು ಸರಕಾರ ಹೇಳಿದೆ.

ಅಮೆರಿಕದ 19 ರಾಜ್ಯಗಳಲ್ಲಿ ಪ್ರತಿಭಟನೆಯ ಕಾವೇ ತಾರಕಕ್ಕೇರಿದೆ.

ವರ್ಜೀನಿಯಾ ಮತ್ತು ಓರೆಗಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕೆಲವೇ ಕೆಲವು ಮಂದಿ ಪಾಲ್ಗೊಂಡರೆ, ಮಿಷಗನ್ ಮತ್ತು ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು.

ಒಲಿಂಪಿಯಾದಲ್ಲಂತೂ ಅತೀ ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಮಂದಿ ಸೇರಿದ್ದರು.

ಅಮೆರಿಕದಲ್ಲಿ ಕೋವಿಡ್ 19 ಪಸರಿಸಲು ವಾಷಿಂಗ್ಟನ್ ಕೇಂದ್ರ ಸ್ಥಾನವೆಂದೇ ಪರಿಗಣಿಸಲಾಗುತ್ತಿದೆ.

ನೂರಾರು ಮಂದಿ ಅರಿಜೋನಾದಲ್ಲಿ ಕಾರಲ್ಲಿ ರಸ್ತೆಗಿಳಿದು, ಟ್ರಾಫಿಕ್ ಜಾಮ್ ಆಗುವಂತೆ ಪ್ರತಿಭಟಿಸಿದರು.

ಇಂಥ ಅಮೆರಿಕದ ಪ್ರಜ್ಞಾವಂತ ಜನರೇ ಹೀಗೆ ಮಾಡಿದರೆ, ಈಗಾಗಲೇ ನಿಯಂತ್ರಣಕ್ಕೆ ಸಿಗದ ರೋಗ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲಿ ಡಿಸೆಂಬರ್ ವೇಳೆಗೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ, ಎನ್ನಲಾಗುತ್ತಿದ್ದು, ಪರಿಸ್ಥಿತಿ ಹೇಗೆ ನಿಯಂತ್ರಣಕ್ಕೆ ಬರುತ್ತೋ ಕಾದು ನೋಡಬೇಕು.

loader