ಸ್ನಾನ ಮಾಡುವಾಗ ಫೋನ್ ಬಳಸಿದ ಚೆಲುವೆ: ಅದೇ ಪ್ರಾಣಕ್ಕೇ ಕುತ್ತು ತಂತು ಗುರುವೇ!

First Published 19, Feb 2020, 2:50 PM

ಈವರೆಗೂ ನೀವು ಫೋನ್ ಚಾರ್ಜ್‌ ಮಾಡುತ್ತಲೇ ಬಳಸುವಾಗ ನಡೆಯುವ ದುರಂತಗಳ ಕುರಿತು ಕೇಳಿರಬಹುದು. ಹಲವಾರು ಬಾರಿ ನಿದ್ದೆಗೆ ಜಾರುವ ಮಂದಿ ಜಾರ್ಜ್‌ಗೆ ಹಾಕಿದ ಫೋನ್‌ನಿಂದ ಶಾಕ್ ತಗುಲಿಸಿಕೊಂಡು ಸಾವನ್ನಪ್ಪುತ್ತಾರೆ. ಆದರೆ ಸ್ನಾನ ಮಾಡುವಾಗ ಚಾರ್ಜ್‌ಗಿಟ್ಟ ಫೋನ್ ಬಳಸಿದರೆ ದುರಂತವಾಗುವ ಸಂಭವ ಹೆಚ್ಚು. ಸದ್ಯ ಫ್ರಾನ್ಸ್‌ನಲ್ಲಿ ಇಂತಹುದೇ ಘಟನೆ ಸಂಭವಿಸಿದ್ದು, ಚೆಲುವೆಯೊಬ್ಬಳು ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ

ಫ್ರಾನ್ಸ್‌ನ 15 ವರ್ಷದ ಬಾಲಕಿ ಸ್ನಾನ ಮಾಡುವಾಗ ಪೋನ್ ಬಳಸಿದ್ದಾಳೆ. ಈ ವೇಳೆ ಫೋನ್ ಕೂಡಾ ಚಾರ್ಜ್‌ನಲ್ಲಿತ್ತು.

ಬಾತ್‌ಟಬ್‌ನಲ್ಲಿ ಮಲಗಿ ಫೋನ್ ಬಳಸಿಕೊಂಡಿದ್ದ ವೇಳೆ ಅಚಾನಕ್ಕಾಗಿ ಮೊಬೈಲ್ ಆಕೆಯ ಕೈಯ್ಯಿಂದ ಜಾರಿ ಬಿದ್ದಿದೆ.

ಹೀಗೆ ಕೈ ಜಾರಿದ ಫೋನ್ ಮೊದಲು ತಲೆ ಮೇಲೆ ಬಿದ್ದು, ಬಳಿಕ ಆಕೆ ಇದ್ದ ನೀರಿನಿಂದ ತುಂಬಿದ್ದ ಬಾತ್ ಟಬ್‌ಗೆ ಬಿದ್ದಿದೆ.

ಆದರೆ ಪೋನ್ ಬಾತ್ ಟಬ್‌ಗೆ ಬೀಳುತ್ತಿದ್ದಂತೆ ಕರೆಂಟ್ ಶಾಕ್ ತಗುಲಿದೆ.

ಇತ್ತ ಮಗಳು ಬಹಳ ಹೊತ್ತಾದರೂ ಹೊರ ಬರದಿರುವುದನ್ನು ಗಮನಿಸಿದ ತಂದೆ ತಾಯಿ ಮಗಳಿಗೆ ಹೊರ ಬರುವಂತೆ ಕೂಗಿ ಹೇಳಿದ್ದಾರೆ.

ಅತ್ತ ಮಗಳು ಮೌನವಾಗಿರುವುದನ್ನು ಕಂಡು ಚಿಂತೆಗೀಡಾದ ಹೆತ್ತವರು ಬೇರೆ ಉಪಾಯವಿಲ್ಲದೇ ಚಿಲಕ ಮುರಿದು ಧಾವಿಸಿದ್ದಾರೆ.

ಮಗಳು ಬಾತ್ ಟಬ್‌ನಲ್ಲಿ ಸದ್ದಿಲ್ಲದೇ ಬಿದ್ದಿರುವುದನ್ನು ಕಂಡ ತಂದೆ, ಕೂಡಲೇ ಚಾರ್ಜಿಂಗ್ ಸ್ವಿಒಚ್ ಆಫ್ ಮಾಡಿ ಮಗಳನ್ನೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಮಗಳ ಕುರಿತು ಮಾತನಾಡಿದ ತಂದೆ, ಆಕೆಗೆ ಫೋನ್ ಸ್ನಾನದ ಕೋಣೆಗೊಯ್ಯುವ ಅಭ್ಯಾಸವಿತ್ತು. ಹಲವಾರು ಬಾರಿ ವಿರೊಧಿಸಿದ್ದರೂ ಮಾತು ಕೇಳುತ್ತಿರಲಿಲ್ಲ. ಆದರೀಗ ಅದೇ ಕಾರಣದಿಂದ ಆಕೆ ಸಾವನ್ನಪ್ಪುವಂತಾಯಿತು ಎಂದಿದ್ದಾರೆ.

loader