ಫೋನ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಟೆನ್ಶನ್ ಬಿಡಿ ಈ ಟಿಪ್ಸ್ ಫಾಲೋ ಮಾಡಿ
ಮೊಬೈಲ್ ಕಳುವಾದರೆ ಅಥವಾ ಕಳೆದು ಹೋದರೆ ತಕ್ಷಣ ಏನು ಮಾಡಬೇಕು? ಭಯ, ಆತಂಕ ಪಡುವ ಅಗತ್ಯವಿಲ್ಲ. ಕೆಲ ಕ್ರಮಗಳನ್ನು ಕೈಗೊಂಡರೆ ಡೇಟಾ ಸೇರಿದಂತೆ ಎಲ್ಲವೂ ಸೇಫ್.

ಮೊಬೈಲ್ ಕಳೆದ್ರೆ ಈ ಟಿಪ್ಸ್ ಫಾಲೋ ಮಾಡಿ
ದಿನಾಲು ಎಷ್ಟೋ ಫೋನ್‌ಗಳು ಕಳ್ಳತನ ಆಗ್ತವೆ. ಹಲವು ಬಾರಿ ಫೋನ್ ಕಳೆದು ಹೋಗುತ್ತದೆ. ಒಮ್ಮೆ ಕಳೆದುಕೊಂಡ ಅಥವಾ ಕಳ್ಳತನವಾದ ಫೋನ್ ಮರಳಿ ಸಿಕ್ಕಿದ ಉದಾಹರಣೆ ಕಡಿಮೆ. ಆದರೆ ಈಗ ಫೋನ್ ಎಲ್ಲದರ ಕೀಲಿ ಕೈ. ಬ್ಯಾಂಕ್ ಖಾತೆ, ವೈಯುಕ್ತಿಕ ಮಾಹಿತಿ ಸೇರಿದಂತೆ ಎಲ್ವೂ ಫೋನ್‌ನಲ್ಲೇ ಇದೆ. ಹೀಗಾಗಿ ಡೇಟಾ, ಖಾತೆ, ದುಡ್ಡು ಸೇರಿದಂತೆ ಎಲ್ಲವನ್ನೂ ಸುರಕ್ಷಿತವಾಗಿಡುವುದು ಸವಾಲಿನ ಕೆಲಸ.
ಫೋನ್ ಕಳೆದ್ರೆ ಏನ್ಮಾಡ್ಬೇಕು?
ಪೊಲೀಸ್ ಸ್ಟೇಷನ್‌ಗೆ ದೂರು ನೀಡಿ.
ಫೋನ್ ಕಳೆದ ತಕ್ಷಣ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿ. IMEI ನಂಬರ್ (*#06# ಡಯಲ್ ಮಾಡಿದ್ರೆ ಸಿಗಲಿದೆ ಅಥವಾ ಫೋನ್ ಬಿಲ್‌ನಲ್ಲಿ ದಾಖಲಾಗಿರುತ್ತದೆ) ಹೇಳಿ FIR ತಗೊಳ್ಳಿ. ಇದು ಫೋನ್ ಟ್ರ್ಯಾಕ್ ಮಾಡಿ ಬ್ಲಾಕ್ ಮಾಡೋಕೆ ಸಹಾಯ ಆಗ್ತದೆ.
ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ.
ನಿಮ್ಮ ನೆಟ್‌ವರ್ಕ್ ಕಂಪನಿಗೆ (Jio, Airtel, Vi) ಕರೆ ಮಾಡಿ ಸಿಮ್ ಬ್ಲಾಕ್ ಮಾಡಿಸಿ. ಹೀಗೆ ಮಾಡಿದ್ರೆ ನಿಮ್ಮ ನಂಬರ್ ಯಾರೂ ಉಪಯೋಗಿಸ್ಲಿಕ್ಕೆ ಆಗಲ್ಲ. ಆಮೇಲೆ ಅದೇ ನಂಬರ್‌ನಲ್ಲಿ ಹೊಸ ಸಿಮ್ ತಗೋಬಹುದು.
CEIR ಪೋರ್ಟಲ್‌ನಲ್ಲಿ ಫೋನ್ ಬ್ಲಾಕ್ ಮಾಡಿ.
www.ceir.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಫೋನ್ ನಂಬರ್, IMEI ನಂಬರ್, ಫೋನ್ ಬಿಲ್, ಪೊಲೀಸ್ ದೂರಿನ ಪ್ರತಿ ನೀಡಿ ಫೋನ್ ಬ್ಲಾಕ್ ಮಾಡಿಸಿ. ಇದು ಫೋನ್ ಟ್ರ್ಯಾಕ್ ಮಾಡಿ ಬ್ಲಾಕ್ ಮಾಡೋಕೆ ಸಹಾಯ ಆಗ್ತದೆ.
Google Find My Device ಅಥವಾ Apple Find My iPhone
Android ಉಪಯೋಗಿಸುವವರು:
https://www.google.com/android/find ವೆಬ್‌ಸೈಟ್‌ನಲ್ಲಿ ನಿಮ್ಮ Google ಖಾತೆಯಿಂದ ಲಾಗಿನ್ ಆಗಿ ಫೋನ್ ಟ್ರ್ಯಾಕ್ ಮಾಡಬಹುದು, ಲಾಕ್ ಮಾಡಬಹುದು ಅಥವಾ ಡೇಟಾ ಡಿಲೀಟ್ ಮಾಡಬಹುದು.
iPhone ಉಪಯೋಗಿಸುವವರು:
www.icloud.com/find ವೆಬ್‌ಸೈಟ್‌ನಲ್ಲಿ ನಿಮ್ಮ Apple IDಯಿಂದ ಲಾಗಿನ್ ಆಗಿ ಫೋನ್ ಟ್ರ್ಯಾಕ್ ಮಾಡಬಹುದು ಅಥವಾ ಬ್ಲಾಕ್ ಮಾಡಬಹುದು.
ಬ್ಯಾಂಕ್, ಆನ್‌ಲೈನ್ ಖಾತೆಗಳನ್ನು ಸುರಕ್ಷಿತವಾಗಿಡಿ.
ನಿಮ್ಮ ಫೋನ್ ನಂಬರ್‌ಗೆ ಲಿಂಕ್ ಆಗಿರೋ ಬ್ಯಾಂಕ್ ಖಾತೆಗಳು, UPI ಆ್ಯಪ್‌ಗಳು (Paytm, Google Pay), ಇಮೇಲ್, ಸೋಶಿಯಲ್ ಮೀಡಿಯಾ ಖಾತೆಗಳ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸಿ. Paytm ಖಾತೆ ಬ್ಲಾಕ್ ಮಾಡೋಕೆ Paytm ಪೇಮೆಂಟ್ಸ್ ಬ್ಯಾಂಕ್ ಗ್ರಾಹಕ ಸೇವೆಗೆ (0120-4456456) ಕರೆ ಮಾಡಿ.
ಫೋನ್ ವಿಮೆ, ಟ್ರ್ಯಾಕಿಂಗ್ ಆ್ಯಪ್‌ಗಳನ್ನು ಮೊದಲೇ Google Find My Device ಅಥವಾ Cerberus ರೀತಿಯ ಟ್ರ್ಯಾಕಿಂಗ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ ಆ್ಯಕ್ಟಿವೇಟ್ ಮಾಡ್ಕೊಂಡ್ರೆ ಒಳ್ಳೆಯದು. ಫೋನ್‌ಗೆ ವಿಮೆ ಇದ್ರೆ, ವಿಮಾ ಕಂಪನಿಗೆ ಕರೆ ಮಾಡಿ ಕ್ಲೈಮ್ ಮಾಡಿ.
ಸಿಮ್ ಕಾರ್ಡ್ ಮೋಸಗಳು ಹೇಗೆ ಆಗುತ್ತವೆ?
ಸಿಮ್ ಸ್ವಾಪ್ ಮೋಸ
ಮೋಸಗಾರರು ನಿಮ್ಮ ಫೋನ್ ನಂಬರ್ ಅನ್ನು ಅವರ ಹತ್ತಿರ ಇರೋ ಹೊಸ ಸಿಮ್‌ಗೆ ಬದಲಾಯಿಸ್ತಾರೆ. ಇದಕ್ಕೆ ಅವರು ನಿಮ್ಮ ವೈಯಕ್ತಿಕ ಮಾಹಿತಿ (ಹುಟ್ಟಿದ ದಿನಾಂಕ, ಆಧಾರ್, ವಿಳಾಸ) ತಿಳ್ಕೊಳ್ತಾರೆ. ನೆಟ್‌ವರ್ಕ್ ಕಂಪನಿಗೆ "ಸಿಮ್ ಕಳೆದುಹೋಗಿದೆ" ಅಂತ ಸುಳ್ಳು ಹೇಳಿ ನಿಮ್ಮ ನಂಬರ್ ಅನ್ನು ಹೊಸ ಸಿಮ್‌ಗೆ ಬದಲಾಯಿಸ್ತಾರೆ. ಹೀಗೆ ನಿಮ್ಮ ನಂಬರ್‌ಗೆ ಬರೋ OTPಗಳು ಅವರಿಗೆ ಬರ್ತವೆ. ಇವುಗಳನ್ನು ಬಳಸಿ ಬ್ಯಾಂಕ್ ಖಾತೆಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು, ಆನ್‌ಲೈನ್ ಖಾತೆಗಳನ್ನು ದೋಚುತ್ತಾರೆ.
ಬಳಸದ ಸಿಮ್ ಕಾರ್ಡ್ ಮೋಸ
ಒಂದು ಸಿಮ್ 90 ದಿನಗಳಿಗಿಂತ ಹೆಚ್ಚು ಬಳಸದಿದ್ರೆ ಅದು ನಿಷ್ಕ್ರಿಯ ಆಗಿ ಹೊಸಬರಿಗೆ ನೀಡಲಾಗುತ್ತದೆ. TRAI ನಿಯಮಗಳ ಪ್ರಕಾರ ಮೊದಲು ಬಳಸಿದವರ ಡೇಟಾ ಎಲ್ಲವನ್ನೂ ಅಳಿಸಬೇಕು. ಆದ್ರೆ, ತಾಂತ್ರಿಕ ಸಮಸ್ಯೆಗಳಿಂದ ಕೆಲವೊಮ್ಮೆ ಹಳೆಯ ಸಂದೇಶಗಳು, ಸಂಪರ್ಕಗಳು ಹೊಸಬರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಗೌಪ್ಯತೆಗೆ ಅಪಾಯ.
ನಕಲಿ ದಾಖಲೆಗಳಿಂದ ಸಿಮ್ ಖರೀದಿ
ಮೋಸಗಾರರು ನಕಲಿ ಆಧಾರ್, ಪ್ಯಾನ್ ಕಾರ್ಡ್ ಬಳಸಿ ಹಲವು ಸಿಮ್ ಕಾರ್ಡ್‌ಗಳನ್ನು ಖರೀದಿಸಿ, OTPಗಳನ್ನು ರಚಿಸಲು ಅವುಗಳನ್ನು ಮಾರಾಟ ಮಾಡ್ತಾರೆ.
ಸಿಮ್ ಕಾರ್ಡ್ ಮೋಸಗಳಿಂದ ರಕ್ಷಣೆ ಹೇಗೆ?
ಸಿಮ್ ಬ್ಲಾಕ್ ಮಾಡಿಸಿ.
ಫೋನ್ ಕಳೆದ ತಕ್ಷಣ ನೆಟ್‌ವರ್ಕ್ ಕಂಪನಿಗೆ ಕರೆ ಮಾಡಿ ಸಿಮ್ ಬ್ಲಾಕ್ ಮಾಡಿಸಿ. ಹೊಸ ಸಿಮ್ ತಗೊಂಡಾಗ ಬ್ಯಾಂಕ್ ಖಾತೆಗಳು, UPI ಆ್ಯಪ್‌ಗಳನ್ನು ಹೊಸ ನಂಬರ್‌ಗೆ ಲಿಂಕ್ ಮಾಡಿ. ಬಯೋಮೆಟ್ರಿಕ್ ಪರಿಶೀಲನೆ DoT ಸಿಮ್ ಬದಲಾಯಿಸಲು ಬಯೋಮೆಟ್ರಿಕ್ ಪರಿಶೀಲನೆ, 24 ಗಂಟೆಗಳ SMS ನಿಷೇಧದಂತಹ ನಿಯಮಗಳನ್ನು ಹಾಕಿದೆ. ಇದು ಸಿಮ್ ಸ್ವಾಪ್ ಮೋಸಗಳನ್ನು ಕಡಿಮೆ ಮಾಡುತ್ತದೆ.
KYM, ASTR ಸೇವೆಗಳು
KYM: ನಿಮ್ಮ ಫೋನ್ IMEI ನಂಬರ್ ಪರಿಶೀಲಿಸಲು ಈ ಸೇವೆ ಬಳಸಿ.
ASTR: ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ತಿಳಿದುಕೊಳ್ಳಲು, ಮೋಸದ ಸಿಮ್‌ಗಳನ್ನು ಬ್ಲಾಕ್ ಮಾಡಲು ಇದು ಉಪಯುಕ್ತ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ : ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳು, OTPಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ. ಅನುಮಾನಾಸ್ಪದ ಕರೆಗಳು, ಸಂದೇಶಗಳನ್ನು ಸಂಚಾರ್ ಸಾಥಿ ವೆಬ್‌ಸೈಟ್ (www.sancharsaathi.gov.in) ನಲ್ಲಿ ವರದಿ ಮಾಡಿ.
ಸಂಚಾರ್ ಸಾಥಿ ಆ್ಯಪ್ ಉಪಯೋಗಗಳು
ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲು.
ತಿಳಿಯದೆ ನೋಂದಾಯಿತ ಮೋಸದ ಸಂಪರ್ಕಗಳನ್ನು ಗುರುತಿಸಿ ಬ್ಲಾಕ್ ಮಾಡಲು.
ಕಳೆದುಹೋದ ಫೋನ್‌ಗಳನ್ನು CEIR ಮೂಲಕ ಟ್ರ್ಯಾಕ್ ಮಾಡಲು ಅಥವಾ ಬ್ಲಾಕ್ ಮಾಡಲು.
ನಕಲಿ ಕರೆಗಳು, ಮೋಸಗಳನ್ನು ವರದಿ ಮಾಡಲು.
ಮುಖ್ಯ ಸಲಹೆಗಳು
IMEI ನಂಬರ್ ಜಾಗ್ರತೆಯಾಗಿ ಇಟ್ಟುಕೊಳ್ಳಿ. ಫೋನ್ ಬಿಲ್, IMEI ನಂಬರ್ ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಎಚ್ಚರಿಕೆಯಿಂದಿರಿ. ಫೋನ್‌ನಲ್ಲಿ अಚಾನಕ್ ನೆಟ್‌ವರ್ಕ್ ಹೋದ್ರೆ, ತಕ್ಷಣ ನೆಟ್‌ವರ್ಕ್ ಕಂಪನಿಗೆ ಕರೆ ಮಾಡಿ.
ಫೋನ್ ಕಳೆದ್ರೆ, ಮನೆಯವರಿಗೆ ತಿಳಿಸಿ.