ದೇಶದ ಎಲ್ಲಾ ಲ್ಯಾಂಡ್ ಫೋನ್ ನಂಬರ್‌ನಲ್ಲಿ ಬದಲಾವಣೆ, ಡಯಲ್‌ಗೂ ಮುನ್ನ ತಿಳಿದುಕೊಳ್ಳಿ
ದೇಶದ ಎಲ್ಲಾ ಲ್ಯಾಂಡ್‌ಲೈನ್ ನಂಬರ್ ಬದಲಾಗುತ್ತಿದೆ. ಮೊಬೈಲ್‌ನಿಂದ ಲ್ಯಾಂಡ್‌ಲೈನ್ ಫೋನ್ ಮಾಡಲು ಹಾಗೂ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಫೋನ್ ಮಾಡಲೂ ಕೆಲ ಬದಲಾವಣೆ ಮಾಡಲಾಗಿದೆ. TRAI ಸೂಚನೆ ಏನು?

ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿಟಿ ಆಫ್ ಇಂಡಿಯಾ(TRAI ) ಫೋನ್ ನಂಬರ್‌ಗಳಲ್ಲಿ ಮಹತ್ವದ ಬದಲಾವಣ ಮಾಡುತ್ತಿದೆ. ಪ್ರಮುಖವಾಗಿ ಲ್ಯಾಂಡ್ ಫೋನ್ ನಂಬರ್ ಬದಲಾಗುತ್ತಿದೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ಲ್ಯಾಂಡ್ ಫೋನ್ ನಂಬರ್ ಸ್ಥಿರವಾಗಿದೆ. ಆದರೆ ಇದೀಗ TRAI ಹೊಸ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಟೆಲಿಕಾಂ ಕಂಪನಿಗಳಿಗೆ ಡೆಟ್‌ಲೈನ್ ನೀಡಿದೆ.
ಲ್ಯಾಂಡ್ ಫೋನ್‌ಗಳನ್ನು ಹೆಚ್ಚು ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹ ಟೆಲಿಕಾಂ ಸರ್ವೀಸ್ ಆಗಿ ಮಾರ್ಪಾಡು ಮಾಡಲು ಟ್ರಾಯ್ ಈ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಲ್ಯಾಂಡ್ ಫೋನ್ ನಂಬರ್ ಕೂಡ ಮೊಬೈಲ್ ನಂಬರ್ ರೀತಿಯಲ್ಲೇ ಆಗಲಿದೆ. ಅದರೆ ಲ್ಯಾಂಡ್ ಫೋನ್ ನಂಬರ್ ಶೀಘ್ರದಲ್ಲೇ 10 ಸಂಖ್ಯೆ ಇರಲಿದೆ.
ದೇಶದ ಎಲ್ಲಾ ಲ್ಯಾಂಡ್ ಫೋನ್ ನಂಬರ್ 10 ಸಂಖ್ಯೆಯನ್ನು ಒಳಗೊಂಡಿರಲಿದೆ. ಸದ್ಯ ಲ್ಯಾಂಡ್ ಫೋನ್ ನಂಬರ್ ಕೋಡ್ ಮೂಲಕ ಆರಂಭಗೊಳ್ಳುತ್ತದೆ. ಬಳಿಕ ಫೋನ್ ನಂಬರ್ ಇರಲಿದೆ. ಒಟ್ಟು ಈ ಸಂಖ್ಯೆ 11. ಆದರೆ ದೇಶದ ಎಲ್ಲಾ ಲ್ಯಾಂಡ್ ಫೋನ್ ನಂಬರ್ ಮೊಬೈಲ್ ರೀತಿಯಲ್ಲಿ 10 ಸಂಖ್ಯೆ ಆಗುತ್ತಿದೆ. 2022ರಲ್ಲಿ ಈ ಬದಲಾವಣೆಗೆ ಡಿಪಾರ್ಟ್‌ಮೆಂಟ್ ಆಫ್ ಟೆಲಿಕಮ್ಯೂನಿಕೇಷನ್ (DoT) ಶಿಫಾರಸು ಮಾಡಿತ್ತು.
ನಂಬರ್ ಬದಲಾವಣೆ ಮಾತ್ರವಲ್ಲ ಫೋನ್ ಮಾಡುವಾಗಲು ಕೆಲ ಬದಲಾವಣೆ ಇದೆ. ಹೊಸ ನಂಬರ್ ಬಳಿಕ ಲ್ಯಾಂಡ್ ಫೋನ್‌ನಿಂದ ಲ್ಯಾಂಡ್ ಫೋನ್‌ಗೆ ಕರೆ ಮಾಡಲು 0 ಡಯಲ್ ಮಾಡಬೇಕು. ಆದರೆ ಮೊಬೈಲ್‌ನಿಂದ ಲ್ಯಾಂಡ್ ಫೋನ್‌ಗೆ ಕರೆ ಮಾಡಲು ಸದ್ಯ ಇರುವ ನಿಯಮವೇ ಇರಲಿದೆ. ಯಾವುದೇ ಬದಲಾವಣೆ ಇರುವುದಿಲ್ಲ.
ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಎಲ್ಲಾ ತುರ್ತು ಕರೆ ನಂಬರ್ ಉಚಿತವಾಗುತ್ತಿದೆ. ಪೊಲೀಸ್, ಆ್ಯಂಬುಲೆನ್ಸ್ ಸೇರಿದಂತೆ ಎಮರ್ಜೆನ್ಸಿ ಸೇವೆಗೆ ವಿಷೇಷ ಕೋಡ್ ಅಭಿವೃದ್ಧಿಡಿಸಲಾಗುತ್ತಿದೆ. ಇದರಿಂದ ತುರ್ತು ಕರೆ ನಂಬರ್ ಎಲ್ಲಿಂದಲೇ ಕರೆ ಮಾಡಿದರೂ ಉಚಿತವಾಗಲಿದೆ. ಈ ಮೂಲಕ ಸೂಕ್ತ ಸಮಯದಲ್ಲಿ ತುರ್ತು ಸೇವೆ ಸಿಗುವಂತೆ ಮಾಡಲು ಈ ಬದಲಾವಣೆ ಮಾಡಲಾಗುತ್ತಿದೆ.
ಲ್ಯಾಂಡ್ ಫೋನ್‌ಗಳಲ್ಲೂ ಕಾಲರ್ ಐಡಿ ಇರಲೇಬೇಕು ಎಂದು ಟ್ರಾಯ್ ಸೂಚಿಸಿದೆ. ವಂಚಕರ ಕರೆಗಳನ್ನು ಪತ್ತೆ ಹಚ್ಚಬೇಕು. ಕರೆ ಮಾಡುವ ಫೋನ್ ನಂಬರ್ ಯಾವ ಹೆಸರಿನಲ್ಲಿ ನೋಂದಣಿಯಾಗಿದೆ. ವ್ಯಕ್ತಿ, ಸಂಸ್ಥೆ ಅಥವಾ ಕಂಪನಿ ಯಾರ ಹೆಸರಲ್ಲಿ ನೋಂದಣಿಯಾಗಿದೆ, ಈ ಹೆಸರು ಕಾಲರ್ ಐಡಿಯಲ್ಲಿ ಸೂಚಿಸಬೇಕು ಎಂದು ಟ್ರಾಯ್ ಹೇಳಿದೆ.
ಈ ಎಲ್ಲಾ ಬದಲಾವಣೆಗಳನ್ನು ಮುಂದಿನ 6 ತಿಂಗಳಲ್ಲಿ ಮಾಡಿ ಮುಗಿಸಲು ಟೆಲಿಕಾಂ ಆಪರೇಟರ್ ಕಂಪನಿಗಳಿಗೆ ಸೂಚನೆ ನೀಡಿದೆ. ಇಷ್ಟೇ ಅಲ್ಲ ಈ ಬದಲಾವಣೆಗಳ ಬಳಿಕ ಲ್ಯಾಂಡ್ ಫೋನ್ ಪೋರ್ಟ್ ಬದಲಾವಣೆ ಕೂಡ ಜಾರಿಯಾಗಲಿದೆ. ಮೊಬೈಲ್ ರೀತಿ ಲ್ಯಾಂಡ್ ಫೋನ್ ಪೋರ್ಟ್ ಕೂಡ ಸಾಧ್ಯವಾಗಲಿದೆ ಎಂದು ಟ್ರಾಯ್ ಹೇಳಿದೆ.