ವಿಡಿಯೋ ನೋಡುವಾಗ ಜಾಹೀರಾತಿನಿಂದ ಬೇಸತ್ತಿದ್ದೀರಾ? ಇದಕ್ಕಿದೆ ಉಚಿತ ಪರಿಹಾರ!
ವಿಡಿಯೋಗಳನ್ನು ಜಾಹೀರಾತುಗಳಿಲ್ಲದೆ ನೋಡಲು ಬಯಸುವಿರಾ? ಜಾಹೀರಾತು ಇಲ್ಲದೆ ವಿಡಿಯೋ ನೋಡಲು ಪಾವತಿಸಬೇಕಿಲ್ಲ. ಈ ವಿಧಾನದ ಮೂಲಕ ನಿಮಗೆ ಯಾವುದೇ ಜಾಹೀರಾತು ಇಲ್ಲದೆ, ಅಡತಡೆ ಇಲ್ಲದೆ ವಿಡಿಯೋ ವೀಕ್ಷಿಸಲು ಸಾಧ್ಯವಿದೆ. ಹೇಗೆ ಸಾಧ್ಯ?

ಎಲ್ಲರೂ ಗೂಗಲ್ ಮೇಲೆ ಅವಲಂಬಿತರಾಗಿದ್ದೇವೆ. ಇನ್ನು ವಿಡಿಯೋ ಕುರಿತ ಏನೇ ಇದ್ದರೂ ಇದೇ ಗೂಗಲ್‌ನ ಯೂಟ್ಯೂಬ್ ಮೊರೆ ಹೋಗುತ್ತೇವೆ. ಲಕ್ಷಾಂತರ ಜನರು ಯೂಟ್ಯೂಬ್ ಬಳಸುತ್ತಾರೆ. ಹೀಗಾಗಿ ಬಹುತೇಕ ಎಲ್ಲಾ ವಿಡಿಯೋಗಳಲ್ಲೂ ಜಾಹೀರಾತುಗಳಿವೆ. ಜಾಹೀರಾತಗಳನ್ನು ಸ್ಕಿಪ್ ಆಯ್ಕೆ ಇದ್ದರೂ, ಡಬಲ್ ಜಾಹೀರಾತುಗಳು ಸಾಮಾನ್ಯವಾಗಿದೆ.
ಜಾಹೀರಾತು-ರಹಿತ ಯೂಟ್ಯೂಬ್‌ಗೆ ಪ್ರೀಮಿಯಂ ಚಂದಾದಾರಿಕೆ ಬೇಕು, ಆದರೆ ಬೆಲೆಗಳು ಹೆಚ್ಚಿವೆ. ಜಾಹೀರಾತು ಕಿರಿಕಿರಿ ತಪ್ಪಿಸಲು ಪಾವತಿ ಮಾಡಿ ವಿಡಿಯೋ ನೋಡಬೇಕು. ಆದರೆ ಯಾವುದೇ ಪಾವತಿ ಮಾಡದೆ, ಪ್ರೀಮಿಯಂ ವೆಚ್ಚವಿಲ್ಲದೆ ಜಾಹೀರಾತು-ರಹಿತ ವೀಕ್ಷಣೆಗಾಗಿ ಒಂದು ಆ್ಯಪ್ ಲಭ್ಯವಿದೆ.
ಬ್ರೇವ್ ಫಾಸ್ಟ್ ಪ್ರೈವೇಟ್ ಬ್ರೌಸರ್ ಜಾಹೀರಾತು-ರಹಿತ ವಿಡಿಯೋ ವೀಕ್ಷಣೆಗೆ ಉತ್ತಮವಾಗಿದೆ. ಪಿಕ್ಚರ್-ಇನ್-ಪಿಕ್ಚರ್ ಮೋಡ್ ಮತ್ತು ಲಾಕ್ ಸ್ಕ್ರೀನ್ ಪ್ಲೇಬ್ಯಾಕ್ ನೀಡುತ್ತದೆ. ಇದು ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಹೀಗಾಗಿ ಬಳಕೆದಾರರು ಜಾಹೀರಾತು ಇಲ್ಲದೆ ವಿಡಿಯೋಗಳನ್ನು ವೀಕ್ಷಿಸಬಹುದು. ಇದಕ್ಕೆ ಪಾವತಿ ಇಲ್ಲ. ಕೇವಲ ಆ್ಯಪ್ ಡೌನ್ಲೋಡ್ ಮಾಡಿದರೆ ಸಾಕು.
ಜಾಹೀರಾತು-ರಹಿತ ವೀಡಿಯೊಗಳಿಗಾಗಿ ಬ್ರೇವ್ ಬ್ರೌಸರ್ ಬಳಸಲು: ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿದರೆ ಸಾಕು. ಸೆಟ್ಟಿಂಗ್‌ಗಳಲ್ಲಿ ಹಿನ್ನೆಲೆ ಪ್ಲೇ ಅನ್ನು ಸಕ್ರಿಯಗೊಳಿಸಿ. ಆ್ಯಪ್ ತೆರೆಯಿರಿ, ನಿಮ್ಮ ವೀಡಿಯೊವನ್ನು ಹುಡುಕಿ ಮತ್ತು ಜಾಹೀರಾತು-ರಹಿತ ವೀಕ್ಷಣೆಯನ್ನು ಆನಂದಿಸಿ. ಯಾವುದೇ ಆ್ಯಪ್ ಅನ್ನುಡೌನ್ಲೋಡ್ ಮಾಡಿ ಇನ್‌ಸ್ಟಾಲ್ ಮಾಡುವಾಗ ನಿಮ್ಮ ಡೇಟಾ ಸುರಕ್ಷತೆ ಮತ್ತು ಅನುಮತಿಗಳ ಬಗ್ಗೆ ಎಚ್ಚರವಿರಲಿ. ಷರತ್ತುಗಳ ಬಗ್ಗೆ ತಿಳಿದುಕೊಂಡು ಮುಂದೆ ಸಾಗಿ.