ಜೂನ್ 1ರಿಂದ ಈ ಫೋನ್‌ಗಳಲ್ಲಿ ವ್ಯಾಟ್ಸಾಪ್ ವರ್ಕ್ ಆಗಲ್ಲ, ನಿಮ್ಮ ಸ್ಮಾರ್ಟ್‌ಫೋನ್ ಇದೆಯಾ?
ಜೂನ್ 1ರಿಂದ ಕೆಲ ಅಪ್‌ಡೇಟ್ ನಿಮಗೆ ಸಮಸ್ಯೆ ತಂದಿಡಬಹುದು. ಈ ಪೈಕಿ ವ್ಯಾಟ್ಸಾಪ್ ಅಪ್‌ಡೇಟ್ ಕೂಡ ಒಂದು. ಜೂನ್ 1 ರಿಂದ ಕೆಲ ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಯಾವೆಲ್ಲಾ ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.

ವ್ಯಾಟ್ಸಾಪ್ ಬಹುತೇಕರ ಜೀವನದಲ್ಲಿ ಅತ್ಯಂತ ಪ್ರಮುಖ ಮೇಸೇಜಿಗ್ ಪ್ಲಾಟ್‌ಫಾರ್ಮ್ ಆಗಿದೆ. ಕಚೇರಿ ಕೆಲಸವಿರಲಿ, ಉದ್ಯೋಗ, ಉದ್ದಿಮೆ, ವ್ಯಾಪಾರ, ಕುಟುಂಬ, ಸ್ನೇಹಿತರು, ಆಪ್ತರು ಎಲ್ಲರೂ ಇದೇ ವ್ಯಾಟ್ಸಾಪ್ ಮೂಲಕ ಕನೆಕ್ಟ್ ಆಗಿದ್ದಾರೆ. ತಮ್ಮ ದೈನಂದಿನ ಕೆಲಸಕಾರ್ಯಗಳಿಗೂ ವ್ಯಾಟ್ಸಾಪ್ ಬಳಸುತ್ತಿದ್ದಾರೆ. ಆದರೆ ಜೂನ್ 1 ರಿಂದ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಅಪ್‌ಡೇಟ್ ಆಗುತ್ತಿದೆ. ಇದರ ಪರಿಣಾಮ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಈ ಲಿಸ್ಟ್‌ನಲ್ಲಿ ನಿಮ್ಮ ಫೋನ್ ಇದ್ದರೆ ಏನು ಮಾಡಬೇಕು?
ಕೆಲ ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ಜೂನ್ 1 ರಿಂದ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಆ್ಯಂಡ್ರಾಯ್ಡ್ ಫೋನ್ ಫಕಿ ಸ್ಯಾಮಸಂಗ್ ಗ್ಯಾಲಕ್ಸಿ ಎಸ್4, ಸ್ಯಾಮ್‌ಸಂಹ್ ಗ್ಯಾಲಕ್ಸಿ ನೋಟ್ 3, ಸೋನಿ ಎಕ್ಸ್ಪೀರಿಯಾ ಝೆಡ್1, ಎಲ್‌ಜಿ ಜಿ2, ಹುವೈ ಆ್ಯಸೆಂಡ್ ಪಿ6, ಮೋಟೋ ಜಿ(ಫಸ್ಟ್ ಜನರೇಶನ್), ಮೊಟೋರೋಲಾ ರೇಜರ್ ಹೆಚ್‌ಡಿ, ಮೋಟೋ ಇ(2014) ಸೇರಿದಂತೆ ಕೆಲ ಸ್ಮಾರ್ಟ್‌ಫೋನ್‌ಗಳಲ್ಲಿ ನಾಳೆಯಿಂದ (ಜೂನ್ 1) ರಿಂದ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.
ಇನ್ನು ಆ್ಯಪಲ್ ಫೋನ್ ಪೈಕಿ ಐಫೋನ್ 5ಎಸ್, ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6ಎಸ್ ಪ್ಲಸ್, ಐಫೋನ್ ಎಸ್ಇ ಫಸ್ಟ್ ಜನರೇಶನ್ ಫೋನ್‌ಗಳಲ್ಲಿ ಜೂನ್ 1 ರಿಂದ ವ್ಯಾಟ್ಸಾಪ್ ವರ್ಕ್ ಆಗಲ್ಲ. ವ್ಯಾಟ್ಸಾಪ್ ಅಪ್‌ಡೇಟ್ ಆಗುವ ಕಾರಣ ಈ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್(ಒಎಸ್) ಸಪೋರ್ಟ್ ಮಾಡುವುದಿಲ್ಲ. ಹೀಗಾಗಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಬಳಕೆದಾರರಿಗೆ ಉತ್ತಮ ಆಪರೇಟಿಂಗ್ ಹಾಗೂ ಸೆಕ್ಯೂರಿಟಿ ಕಾರಣದಿಂದ ವ್ಯಾಟ್ಸಾಪ್ ಅಪ್‌ಡೇಟ್ ಆಗುತ್ತಿದೆ.
ಐಫೋನ್ iOS 15 ಅಥವಾ ಅದಕ್ಕಿಂತ ಹಿಂದಿನ ವರ್ಶನ್ ಹಾಗೂ ಆ್ಯಂಡ್ರಾಯ್ಡ್ 5.0 ಅಪರೇಟಿಂಗ್ ಸಿಸ್ಟಮ್ ಹೊಂದಿದ ಗ್ರಾಹಕರಿಗೆ ನಾಳೆಯಿಂದ ವ್ಯಾಟ್ಸಾಪ್ ಸಮಸ್ಯೆಯಾಗಲಿದೆ. ಈ ಬಳಕೆದಾರರು ತಮ್ಮ ಮೊಬೈಲ್ ಫೋನ್ ಆಪರೇಚಿಂಗ್ ಸಿಸ್ಟಮ್ ಅಪ್‌ಗ್ರೇಡ್ ಮಾಡಿಕೊಳ್ಳಬುಹುದು. ಆದರೆ ಈ ಫೋನ್‌ಗಳ ಬಹುತೇಕ ಫೋನ್‌ಗಳು ಅಪ್‌ಗ್ರೇಡ್ ಮಾಡಿದರೆ ಡೇಟಾ ಡಿಲೀಟ್ ಆಗಲಿದೆ. ಇತರ ಆ್ಯಪ್‌ಗಳು ಡಿಲೀಟ್ ಆಗಲಿದೆ. ಇಷ್ಟೇ ಅಪ್‌ಡೇಟ್ ಮಾಡಿದ ಬಳಿಕವೂ ವ್ಯಾಟ್ಸಾಪ್ ಸೇರಿದಂತೆ ಇತರ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತೆ ಅಥವಾ ಸಪೋರ್ಟ್ ಮಾಡುತ್ತೆ ಅನ್ನೋದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಈ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ವ್ಯಾಟ್ಸಾಪ್ ಅನಿವಾರ್ಯವಾಗಿದ್ದರೆ ಫೋನ್ ಬದಲಿಸುವುದು ಉತ್ತಮ. ಬೇರೆ ಆಯ್ಕೆಗಳಲ್ಲಿ ಅಪಾಯ ಹೆಚ್ಚು. ಒಎಸ್ ಅಪ್‌ಡೇಟ್ ಮಾಡಿದರೂ ಸೆಕ್ಯೂರಿಟಿ ಸಮಸ್ಯೆಗಳು ಹೆಚ್ಚು. ಹೀಗಾಗಿ ಹೊಸ ಫೋನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸೂಕ್ತ.
ಹೊಸ ಫೋನ್‌ಗೆ ಬದಲಾಯಿಸುವಾಗ ನೀವು ವ್ಯಾಟ್ಸಾಪ್ ಸೆಟ್ಟಿಂಗ್ ಟ್ಯಾಪ್ ಮಾಡಿ ಚಾಟ್ ಆಯ್ಕೆ ಮಾಡಿಕೊಳ್ಳಬೇಕು, ಬಳಿಕ ಚಾಟ್ ಬ್ಯಾಕ್ಅಪ್ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಹೋಸ ಫೋನ್‌ನಲ್ಲಿ ನೀವು ವ್ಯಾಟ್ಸಾಪ್ ಡೌನ್ಲೋಡ್ ಮಾಡಿದಾಗ ನಿಮ್ಮ ಎಲ್ಲಾ ಚಾಟ್ಸ್ ಸೇರಿದಂತೆ ಫೋಟೋ, ವಿಡಿಯೋಗಳು ಯಾವುದೇ ಸಮಸೆ ಇಲ್ಲದೆ ಇರಲಿದೆ.