WhatsAppಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸುವುದು ಹೇಗೆ?
ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ಇರಲೇಬೇಕಾದ ಆ್ಯಪ್‌ಗಳಲ್ಲಿ WhatsApp ಕೂಡ ಒಂದು. ಜಗತ್ತಿನಾದ್ಯಂತ ಬಳಸುವ ಮೆಸೇಜಿಂಗ್ ಆ್ಯಪ್‌ಗಳಲ್ಲಿ WhatsApp ಮೊದಲ ಸ್ಥಾನದಲ್ಲಿದೆ. ವ್ಯಾಟ್ಸಾಪ್‌ನಲ್ಲಿ ಕೆಲ ರಹಸ್ಯ ಫೀಚರ್ಸ್ ಇವೆ. ಈ ಪೈಕಿ ನಿಮ್ಮನ್ನು ಬ್ಲಾಕ್ ಮಾಡಿದ್ದವರಿಗೆ ಮೆಸೇಜ್ ಕಳುಹಿಸುವುದು ಹೇಗೆ?

ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ WhatsApp ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ಹಾಗಾಗಿ ಹೊಸ ಮೆಸೇಜಿಂಗ್ ಆ್ಯಪ್‌ಗಳು ಬಂದರೂ WhatsApp ಗೆ ಕ್ರೇಜ್ ಕಡಿಮೆಯಾಗಿಲ್ಲ. WhatsApp ತಂದಿರುವ ವೈಶಿಷ್ಟ್ಯಗಳಲ್ಲಿ ಬ್ಲಾಕ್ ಆಯ್ಕೆ ಕೂಡ ಒಂದು. ಒಬ್ಬ ವ್ಯಕ್ತಿಯಿಂದ ಮೆಸೇಜ್ ಬರದಂತೆ ತಡೆಯಲು ಬ್ಲಾಕ್ ಮಾಡುವ ಆಯ್ಕೆ ಇದೆ. ಆದರೆ ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಎರಡು ವಿಧಾನಗಳಿವೆ. ಈಗ ಅವುಗಳನ್ನು ತಿಳಿದುಕೊಳ್ಳೋಣ.
ಬ್ಲಾಕ್ ಮಾಡಿದ್ದು ಹೇಗೆ ತಿಳಿಯುವುದು?
ಸಾಮಾನ್ಯವಾಗಿ ಯಾರಾದರೂ ನಮ್ಮನ್ನು ಬ್ಲಾಕ್ ಮಾಡಿದರೆ ಅವರ ಪ್ರೊಫೈಲ್ ಚಿತ್ರ ಕಾಣುವುದಿಲ್ಲ. ಅವರು ಹಾಕುವ ಸ್ಟೇಟಸ್‌ಗಳು ಕೂಡ ಕಾಣುವುದಿಲ್ಲ. ನೀವು ಅವರಿಗೆ ಮೆಸೇಜ್ ಕಳಿಸಿದರೆ ಬ್ಲೂ ಟಿಕ್ ಕಾಣುವುದಿಲ್ಲ. ನೀವು ಕರೆ ಮಾಡಿದರೂ ಅವರಿಗೆ ರಿಂಗ್ ಆಗುವುದಿಲ್ಲ. ಇವುಗಳ ಮೂಲಕ ಒಬ್ಬ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯಬಹುದು. ಹಾಗಾದರೆ ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸುವುದು ಹೇಗೆ?
ಖಾತೆಯನ್ನು ಅಳಿಸಿ
ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸಲು ಮೊದಲು ನಿಮ್ಮ WhatsApp ಖಾತೆಯನ್ನು ಅಳಿಸಬೇಕು. ನಂತರ ನಿಮ್ಮ ಫೋನ್ ಸಂಖ್ಯೆಯಿಂದ ಮತ್ತೆ WhatsApp ಖಾತೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನೀವು ಸ್ವಯಂಚಾಲಿತವಾಗಿ ಅನ್‌ಬ್ಲಾಕ್ ಆಗುತ್ತೀರಿ. ಆಗ ನೀವು ಕಳಿಸುವ ಮೆಸೇಜ್ ಅವರಿಗೆ ಹೋಗುತ್ತದೆ. ಅವರ ಡಿಪಿ, ಸ್ಟೇಟಸ್‌ಗಳು ಕಾಣುತ್ತವೆ. ಆದರೆ ಖಾತೆಯನ್ನು ಡೀಆಕ್ಟಿವೇಟ್ ಮಾಡಿದರೆ ನಿಮ್ಮ ಹಳೆಯ ಚಾಟ್‌ಗಳನ್ನು ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಖಾತೆಯನ್ನು ಅಳಿಸಬೇಕು. ಖಾತೆಯನ್ನು ಅಳಿಸಲು ಸೆಟ್ಟಿಂಗ್ಸ್‌ಗೆ ಹೋಗಿ 'ನನ್ನ ಖಾತೆಯನ್ನು ಅಳಿಸಿ' ಆಯ್ಕೆಯನ್ನು ಆರಿಸಿದರೆ ಸಾಕು.
ಗುಂಪು ರಚಿಸಿ
ನಿಮ್ಮನ್ನು ಬ್ಲಾಕ್ ಮಾಡಿದವರ ಜೊತೆ ಚಾಟ್ ಮಾಡಲು ಅವರನ್ನು ಗುಂಪಿಗೆ ಸೇರಿಸಬೇಕು. ಇದಕ್ಕೆ ಮೂರನೇ ವ್ಯಕ್ತಿಯ ಸಹಾಯ ಅಥವಾ ನಿಮಗೆ ಇನ್ನೊಂದು WhatsApp ಸಂಖ್ಯೆ ಇದ್ದರೆ ಸಾಕು. ನಿಮ್ಮ ಜೊತೆಗೆ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿ ಮತ್ತು ಮೂರನೇ ಸಂಖ್ಯೆಯನ್ನು ಸೇರಿಸಿ ಗುಂಪು ರಚಿಸಿ. ಹೀಗೆ ಮಾಡಿದರೆ ನಿಮ್ಮನ್ನು ಬ್ಲಾಕ್ ಮಾಡಿದವರು ಕೂಡ ಆ ಗುಂಪಿನಲ್ಲಿ ಇರುತ್ತಾರೆ. ಆಗ ನೀವು ಗುಂಪಿನಲ್ಲಿ ಕಳಿಸುವ ಮೆಸೇಜ್ ಅವರಿಗೆ ಕಾಣುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.