ಕ್ರಿಮಿನಲ್ಸ್ ತಪ್ಪಿಸಿಕೊಳ್ಳಲು ಇನ್ನು ಸಾಧ್ಯವಿಲ್ಲ, ತಲೆ ಮರೆಸಿಕೊಂಡರೂ AI ಕ್ಯಾಮೆರಾದಲ್ಲಿ ಪತ್ತೆ!
ದುಷ್ಕರ್ಮಿಗಳು, ಕಿಡಿಗೇಡಿಗಳು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವುದನ್ನು ತಪ್ಪಿಸಲು, ಜನಸಂದಣಿ ಪ್ರದೇಶದಲ್ಲಿ ಮುಖ ಮರೆ ಮಾಚಿ, ಮಾಸ್ಕ್ ಧರಿಸಿ, ಗುರುತು ಬದಲಾಯಿಸಿ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಪೊಲೀಸರು ಇದೀಗ AI ಫೇಸ್ ರೆಕಗ್ನೀಶನ್ ಕ್ಯಾಮೆರಾ ಬಳಕೆ ಮಾಡಿದ್ದಾರೆ. ಮೊದಲ ಬಾರಿಗೆ ದೇವಸ್ಥಾನದಲ್ಲಿ ಈ ಕ್ಯಾಮೆರಾ ಪ್ರಯೋಗ ಮಾಡಿ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.
ತಂತ್ರಜ್ಞಾನ ಬದಲಾದಂತೆ ಅನುಕೂಲಗಳು ಹೆಚ್ಚಾಗಿದೆ. ಇದೀಗ ಪೊಲೀಸರು ಕಿಡಿಗೇಡಿಗಳು, ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ.
ಇದೀಗ ರಾಜಸ್ಥಾನ ಪೊಲೀಸರು ದುಷ್ಕರ್ಮಿಗಳು, ಕಿಡಿಗೇಡಿಗಳು ತಲೆಮರೆಸಿಕೊಂಡು ತಪ್ಪಿಸಿಕೊಳ್ಳುವುದು ತಪ್ಪಿಸಲು ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಕ್ಯಾಮೆರಾ ಬಳಕೆ ಮಾಡಿದ್ದಾರೆ.
ಜನಸಂದಣಿ ಇರುವ ಪ್ರದೇಶದಲ್ಲೂ ಮಾಸ್ಕ್ ಧರಿಸಿ, ಮುಖ ಮರೆ ಮಾಚಿ, ಗುರುತು ಬದಲಾಯಿಸಿ ಓಡಾಡಿದರೂ ಈ ಕ್ಯಾಮೆರಾ ಪತ್ತೆ ಹಚ್ಚಲಿದೆ. ಫೇಸ್ ರೆಕಗ್ನೀಶನ್ ಆ್ಯಪ್ ಆಧಾರಿತ ಈ ಎಐ ಕ್ಯಾಮೆರಾ ಭಾರಿ ಸಂಚಲನ ಸೃಷ್ಟಿಸಿದೆ.
ai camera
ಪ್ರಾಯೋಗಿಕವಾಗಿ ರಾಜಸ್ಥಾನ ಪೊಲೀಸರು ಜೈಪುರದ ಗೋವಿಂದ ದೇವಜಿ ದೇವಸ್ಥಾನದಲ್ಲಿ ಅಳವಡಿಸಲಾಗಿದೆ. ವಿಶೇಷ ಅಂದರೆ ಎಐ ಫೇಸ್ ಡಿಟೆಕ್ಟರ್ ಕ್ಯಾಮೆರಾ ಮೂಲಕ ರಾಜಸ್ಥಾನ ಪೊಲೀಸರು ಕುಳಿತಲ್ಲೇ 13 ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಂಡು ಕಣ್ಣರೆಯಾಗುವ ಅಥವಾ ಕೃತ್ಯ ಎಸಗಿ ಕಣ್ಮರೆಯಾಗುವ ಕಿಡಿಗೇಡಿಗಳ ಪತ್ತೆ ಹಚ್ಚಲು ಈ ಕ್ಯಾಮೆರಾ ಸಹಕಾರ ನೀಡಲಿದೆ. ಜನಸಂದಣಿ ಪ್ರದೇಶದಲ್ಲಿನ ಪ್ರತಿಯೊಬ್ಬರ ಮುಖವನ್ನು ಈ ಕ್ಯಾಮೆರಾ ಸ್ಕ್ಯಾನ್ ಮಾಡಲಿದೆ.
ಉದಾಹರಣೆಗೆ ಶಂಕಿತರ ಫೋಟೋ, ಅಥವಾ ಸಿಸಿಟಿವಿಯಲ್ಲಿನ ಫೋಟೋಗಳನ್ನು, ಆರೋಪಿಗಳ ಮುಖದ ಚಿತ್ರಗಳನ್ನು ಎಐ ಆ್ಯಪ್‌ಗೆ ಫೀಡ್ ಮಾಡಿದರೆ ಸಾಕು, ಅದೆಷ್ಟೇ ಜನಸಂದಣಿ ಪ್ರದೇಶದಲ್ಲಿ ಇದ್ದರೂ ಈ ಕ್ಯಾಮೆರಾ ಡಿಟೆಕ್ಟ್ ಮಾಡಲಿದೆ.
ಇದೀಗ ರಾಜಸ್ಥಾನ ಪೊಲೀಸರು ಜೈಪುರ ಸೇರಿದಂತೆ ಇತರ ನಗರಗಳಲ್ಲಿ ಈ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ. ಇದರಿಂದ ಸುಲಭವಾಗಿ ಆರೋಪಿಗಳ ಪತ್ತೆ ಹಚ್ಚಲು ಸಾಧ್ಯವಾಗಲಿದೆ.
ಶೀಘ್ರದಲ್ಲೇ ಇತರ ರಾಜ್ಯ ಪೊಲೀಸರು ಈ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇನ್ನುಮುಂದೆ ಕಿಡಿಗೇಡಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ