ವ್ಯಾಟ್ಸ್ಆ್ಯಪ್ ಮೂಲಕ 4 ವಿಚಾರ ಹಂಚಿಕೊಳ್ಳಬೇಡಿ, ದೂರು ದಾಖಲಾಗುವುದು ಖಚಿತ!
ಮೆಸೇಜ್, ಫೋಟೋ, ವಿಡಿಯೋ, ಕಾಲ್, ಮೀಟಿಂಗ್ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಇದೀಗ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ಆದರೆ ಈ ನಾಲ್ಕು ವಿಚಾರ ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಂಡರೆ ದೂರು ದಾಖಲಾಗಲಿದೆ.
ವ್ಯಾಟ್ಸ್ಆ್ಯಪ್ ಅತ್ಯಂತ ಜನಪ್ರಿಯ ಆ್ಯಪ್. ಮೆಸೆಜ್, ವಿಡಿಯೋ, ಫೋಟೋ, ವಿಡಿಯೋ ಕಾಲ್, ವಾಯ್ಸ್ ಮೆಸೇಜ್ ಸೇರಿದಂತೆ ಹಲವು ಸೌಲಭ್ಯಗಳು ವ್ಯಾಟ್ಸ್ಆ್ಯಪ್ ನೀಡುತ್ತಿದೆ. ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರ ಪ್ರಮಾಣ ಅತೀ ಹೆಚ್ಚಿದೆ. ವ್ಯಾಟ್ಸ್ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳುವುದು, ವಿಡಿಯೋ ಫಾರ್ವರ್ಡ್, ಫೋಟೋ ಸೇರಿದಂತೆ ಹಲವು ವಿಚಾರಗಳನ್ನು ಪ್ರತಿನಿತ್ಯ ಬಳಕೆದಾರರು ಹಂಚಿಕೊಳ್ಳುತ್ತಾರೆ. ಆದರೆ ನಿಷೇಧಿತ ಈ ನಾಲ್ಕು ವಿಚಾರ ಹಂಚಿಕೊಂಡರೆ ದೂರು ದಾಖಲಾಗುವುದು ಮಾತ್ರವಲ್ಲ, ಸಂಕಷ್ಟ ತಪ್ಪಿದ್ದಲ್ಲ.
4 ಬಿಲಿಯನ್ ಬಳಕೆದಾರರು ವ್ಯಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ವ್ಯಾಟ್ಸ್ಆ್ಯಪ್ ಮೂಲಕ ಏನು ಹಂಚಿಕೊಳ್ಳಬಹುದು. ಯಾವುದು ಪಾರ್ವರ್ಡ್ ಮಾಡಬಾರದು ಅನ್ನೋದು ತಿಳಿದಿರುವುದು ಮುಖ್ಯ. ಅಪ್ಪಿ ತಪ್ಪಿ ನಿಯಮ ಉಲ್ಲಂಘಿಸಿದರೆ ದೂರು ದಾಖಲಾಗಲಿದೆ. ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಲಿದೆ. ಜೊತೆಗೆ ಈ ಪೈಕಿ ನಾಲ್ಕು ಪ್ರಮುಖ ಅಂಶ ಇಲ್ಲಿದೆ.
ಅಶ್ಲೀಲ ಫೋಟೋ, ವಿಡಿಯೋ ಹಂಚಿಕೊಳ್ಳಬೇಡಿ
ವ್ಯಾಟ್ಸ್ಆ್ಯಪ್ ಮೂಲಕ ಯಾವುದೇ ಅಶ್ಲೀ ವಿಡಿಯೋ, ಫೋಟೋ ಹಂಚಿಕೊಳ್ಳಬೇಡಿ. ಈ ರೀತಿ ಮಾಡಿದರೆ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಲಿದೆ. ಯಾವುದೇ ಫಾರ್ವರ್ಡ್ ಫೋಟೋ, ವಿಡಿಯೋ ಹಂಚುವ ಮುನ್ನ ಎರಡೆರಡು ಬಾರಿ ಪರಿಶೀಲಿಸಿ.
ದೇಶ ವಿರೋಧಿ ಸಂದೇಶ ಹಂಚಿಕೊಳ್ಳಬೇಡಿ
ದೇಶ ವಿರೋಧಿ ಸಂದೇಶ, ಫೋಟೋ, ವಿಡಿಯೋಗಳು, ಅಥವಾ ದೇಶದ ಐಕ್ಯತೆ ಹಾಗೂ ಸೌರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಇದು ನಿಯಮ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾತ್ರವಲ್ಲ, ದೂರು ದಾಖಲಾಗಿದೆ. ದೇಶ ವಿರೋಧಿ ಚಟುವಟಿಕೆ ದೂರ ದಾಖಲಾಗುವ ಕಾರಣ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.
ಮಕ್ಕಳ ಮೇಲಿನ ಕಿರುಕುಳ
ಮಕ್ಕಳ ಮೇಲಿನ ಕಿರುಕುಳ, ದೌರ್ಜನ್ಯ ಘಟನೆಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳಬಾರದು. ಅಪ್ಪಿ ತಪ್ಪಿಯೂ ಈ ಅಂಶಗಳನ್ನು ಶೇರ್ ಮಾಡಬಾರದು. ಈ ನಿಯಮ ಉಲ್ಲಂಘಿಸಿದರೆ ನೇರವಾಗಿ ಜೈಲು ಸೇರುವ ಸಾಧ್ಯತೆ ಇದೆ. ಹೀಗಾಗಿ ಅತೀವ ಎಚ್ಚರ ವಹಿಸಬೇಕು. ಫಾರ್ವರ್ಡ್ ಮಾಡಿರುವ ವಿಡಿಯೋ ಅಥವಾ ಫೋಟೋ ಅಥವಾ ಸಂದೇಶವಾಗಿದ್ದರೂ ಹಂಚಿಕೊಳ್ಳುವ ಸಾಹಸ ಮಾಡಬೇಡಿ.
ಮತ್ತೊಬ್ಬರ ಫೋಟೋ ವಿಡಿಯೋ ಹಂಚಿಕೊಳ್ಳುವಾಗ ಎಚ್ಚರವಿರಲಿ
ಮತ್ತೊಬ್ಬರ ಫೋಟೋ ವಿಡಿಯೋವನ್ನು ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳುವಾಗ ಎಚ್ಚರವಿರಲಿ. ಕಾರಣ ನೀವು ಹಂಚಿಕೊಳ್ಳುವ ಮಾಹಿತಿ ಅಥವಾ ಫೋಟೋ, ವಿಡಿಯೋ ಅವರ ಗೌರವಕ್ಕೆ ಧಕ್ಕೆ ತರಬಾರದು. ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಿದ್ದರೆ ಪ್ರಕರಣ ದಾಖಲಾದರೆ ಶಿಕ್ಷೆ ಖಚಿತಾಗಲಿದೆ.