ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ರಿಲಯನ್ಸ್, ಭಾರತದಲ್ಲೇ ಮೊದಲ VoNR ಸರ್ವೀಸ್
ಏರ್ಟೆಲ್, ವಿಐ, ಬಿಎಸ್ಎನ್ಎಲ್ ಹೊಸ ಜಿಯೋ ಕೊಡುಗೆಗೆ ತತ್ತರಿಸಿದೆ. ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ VoNR ಕೊಡುಗೆ ನೀಡಿದೆ. ಏನಿದು VoNR? ಇದರಿಂದ ಗ್ರಾಹಕರಿಗೆ ಏನು ಲಾಭ?

ರಿಲಯನ್ಸ್ ಜಿಯೋ ಈಗಾಗಲೇ ಗ್ರಾಹಕರಿಗೆ ಹಲವು ಆಫರ್ ನೀಡಿದೆ. ಪ್ರತಿಸ್ಪರ್ಧಿಗಳಿಗೆ ಠಕ್ಕರ್ ನೀಡುತ್ತಾ ಡೇಟಾ, ಅನಿಯಮಿತ ಕರೆ, ಒಟಿಟಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದೆ. ಇದರ ನಡುವೆ ಭಾರತದ ಟೆಲಿಕಾಂ ಕ್ಷೇತ್ರದಲ್ಲೇ ಜಿಯೋ ಹೊಸ ಕ್ರಾಂತಿ ಮಾಡಿದೆ. ಇದೀಗ ಜಿಯೋ ಗ್ರಾಹಕರಿಗೆ ರಿಲಯನ್ಸ್ ಹೊಸ ಕೊಡುಗೆ ನೀಡಿದೆ. ಇದು VoNR ತಂತ್ರಜ್ಞಾನದ ಟೆಲಿಕಾಂ ಸರ್ವೀಸ್.
ಏನಿದು VoNR ಸರ್ವೀಸ್?
ರಿಲಯನ್ಸ್ ಜಿಯೋ ಕೋಟ್ಯಾಂತರ ಗ್ರಾಹಕರಿಗೆ ಈ ಸೇವೆಯಿಂದ ಲಾಭವಿದೆ. ಇದೇ ಕಾರಣದಿಂದ ಇತರ ಪ್ರತಿಸ್ಪರ್ಧಿಗಳಲ್ಲಿ ನಡುಕು ಶುರುವಾಗಿದೆ.VoNR ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಪ್ರಮುಖವಾಗಿ ಕರೆಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. ಜಿಯೋ 5ಜಿ ಬಳಕೆ ಮಾಡುತ್ತಿರುವ ಎಲ್ಲಾ ಗ್ರಾಹಕರಿಗೆ ಈ ಸೇವೆ ಲಭ್ಯವಿದೆ.
ಸದ್ಯ ದೇಶದಲ್ಲಿ ಎಲ್ಲಾ ಟೆಲಿಕಾಂ ಸರ್ವೀಸ್ ಪ್ರೊವೈಡರ್ ಬಳಕೆ ಮಾಡುತ್ತಿರುವುದು VoLTE (ವಾಯ್ಸ್ ಓವರ್ LTE) ತಂತ್ರಜ್ಞಾನ. ಈ VoLTE ಕುರಿತು ಬಹುತೇಕರು ಗಮನಿಸಿರುತ್ತಾರೆ. ಈ VoLTE ತಂತ್ರಜ್ಞಾನದ ಮೂಲಕ ಕರೆಗಳನ್ನು ಮಾಡಲಾಗುತ್ತದೆ. ಜಯೋ ಕೂಡ ಇದೇ ತಂತ್ರಜ್ಞಾನದಲ್ಲಿ ಸರ್ವೀಸ್ ನೀಡುತ್ತಿದೆ. ಆದರೆ ಇದೀಗ ಜಿಯೋ 5ಜಿ ಬಳಕೆದಾರರಿಗೆ VoNR ತಂತ್ರಜ್ಞಾನದ ಮೂಲಕ ಸರ್ವೀಸ್ ನೀಡಲಿದೆ.
VoLTE ಹೋಲಿಕೆ ಮಾಡಿದರೆ VoNR ಗುಣಮಟ್ಟ ಉತ್ತಮವಾಗಿದೆ. VoNR ತಂತ್ರಜ್ಞಾನದಲ್ಲಿ ನೀವು ಕರೆಗಳನ್ನು ಮಾಡುವಾಗ ಬ್ಯಾಕ್‌ಗ್ರೌಂಡ್ ಅನಗತ್ಯ ಶಬ್ದಗಳು ನಿಮಗೆ ಕೇಳಿಸುವುದಿಲ್ಲ. ಮಾತನಾಡುವ ವ್ಯಕ್ತಿಯ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಕಾರಣ ಆಡಿಯೋ ಹೆಚ್‌ಡಿ ಕ್ವಾಲಿಟಿಯಲ್ಲಿ ನೀಡಲಿದೆ.
ಇದರ ಜೊತೆ ಉತ್ತಮ ನೆಟ್‌ವರ್ಕ್, ಕಾಲ್ ಡ್ರಾಪ್, ವಾಯ್ಸ್ ಬ್ರೇಕ್ ಸಮಸ್ಯೆಗಳು ಆಗುವುದಿಲ್ಲ.ನೆಟ್‌ವರ್ಕ್ ವೀಕ್ ಇದ್ದರೂ ಕರೆಯಲ್ಲಿ ಯಾವುದೇ ಸಮಸ್ಸೆಗಳಾಗುವುದಿಲ್ಲ. ಇದು VoNR ಟೆಕ್ನಾಲಜಿಯ ವಿಶೇಷತೆ. ಇದೀಗ ಜಿಯೋ 5ಜಿ ಬಳಕೆದಾರರು VoNR ಟೆಕ್ ಮೂಲಕ ಕರೆಗಳನ್ನು ಮಾಡಬಹುದು.
ಜಿಯೋ ಹೊಸ ತಂತ್ರಜ್ಞಾನ ಇದೀಗ ಎರ್ಟೆಲ್, ವೋಡಾಫೋನ್ ಐಡಿಯಾ, ಬಿಎಸ್ಎನ್ಎಲ್ ಕಂಪನಿಗಳ ಮೇಲೆ ಹೊಡೆತ ನೀಡಿದೆ. ಇದೀಗ ಗ್ರಾಹಕರು ಅತ್ಯಾಧುನಿಕ VoNR ಟೆಕ್ನಾಲಜಿ ಸರ್ವೀಸ್ ಬಯಸುತ್ತಿದ್ದಾರೆ. ಸದ್ಯ ಜಿಯೋ ಮಾತ್ರ ಈ ಸೇವೆಯನ್ನು ಒದಗಿಸುತ್ತಿದೆ.