ಇನ್‌ಸ್ಟಾಗ್ರಾಂ ನಿಮಯದಲ್ಲಿ ಮಹತ್ವದ ಬದಲಾವಣೆ, ಈ ಬಳಕೆದಾರರಿಗೆ ಲೈವ್ ಅವಕಾಶವಿಲ್ಲ
ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಬಹುತೇಕರು ಬಳಸುತ್ತಾರೆ. ಇದೀಗ ಇನ್‌ಸ್ಟಾ ತನ್ನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ.ಎಲ್ಲರಿಗೂ ಲೈವ್ ಅವಕಾಶವಿಲ್ಲ. ಇದರ ಜೊತೆಗೆ ಬದಲಾವಣೆಯಾಗಿರುವ ನಿಯಮವೇನು?

ಸೋಶಿಯಲ್ ಮೀಡಿಯಾ ಪೈಕಿ ಇನ್‌ಸ್ಟಾಗ್ರಾಂ ಅತ್ಯಂತ ಜನಪ್ರಿಯ ತಾಣ. ಬಹುತೇಕರು ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಾರೆ. ಫೋಟೋ, ವಿಡಿಯೋ ಸೇರಿದಂತೆ ಇನ್‌ಸ್ಟಗ್ರಾಂ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿದೆ. ಇದೀಗ ಇನ್‌ಸ್ಟಾಗ್ರಾಂ ಕೆಲ ಬದಲಾವಣೆ ಮಾಡಿದೆ. ಪ್ರಮುಖವಾಗಿ ತನ್ನ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಇದುವರೆಗೆ ಇನ್‌ಸ್ಟಾಗ್ರಾಂ ಬಳಕೆದಾರರು ಎಲ್ಲರಿಗೂ ಲೈವ್ ಅವಕಾಶವಿತ್ತು. ಇನ್‌ಸ್ಟಾಗ್ರಾಂ ಖಾತೆ ಇದ್ದರೆ ಸಾಕು ಲೈವ್ ಹೋಗಲು ಅವಕಾಶವಿತ್ತು. ಬಳಕೆದಾರರ ಖಾತೆ ಪಬ್ಲಿಕ್ ಅಥವಾ ಪ್ರವೇಟ್, ಅವರ ಫಾಲೋವರ್ ಸಂಖ್ಯೆ ಎಷ್ಟಿದೆ ಯಾವುದು ಮುಖ್ಯವಲ್ಲ. ಎಲ್ಲರಿಗೂ ಲೈವ್ ಮಾಡಲು ಅವಕಾಶವಿತ್ತು. ಆದರೆ ಹೊಸ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
ಬದಲಾದ ನಿಯಮದಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರ ಖಾತೆಯಲ್ಲಿ ಕನಿಷ್ಠ 1000 ಫಾಲೋವರ್ಸ್ ಇರಬೇಕು. ಇದ್ದವರಿಗೆ ಮಾತ್ರ ಲೈವ್ ಅವಕಾಶವಿದೆ. 1000 ಫಾಲೋವರ್ಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಫಾಲೋವರ್ಸ್ ಇದ್ದವರಿಗೆ ಮಾತ್ರ ಲೈವ್ ಆಪ್ಶನ್ ಲಭ್ಯವಾಗಲಿದೆ. ಉಳಿದವರ ಲೈವ್ ನಿರ್ಬಂಧಿಸಲಾಗಿದೆ.
ಟಿಕ್‌ಟಾಕ್‌ನಲ್ಲಿ ಈ ನಿಯಮ ಜಾರಿಯಲ್ಲಿದೆ.ಇದೀಗ ಇನ್‌ಸ್ಟಾಗ್ರಾಂ ಕೂಡ ಇದೇ ನಿಯಮ ಜಾರಿಗೆ ತಂದಿದೆ. ಹೊಸ ನಿಯಮ ಜಾರಿಗೆ ತರಲು ಕಾರಣ ಸ್ಪಷ್ಟವಾಗಿಲ್ಲ. ಆಧರೆ ಲೈವ್ ಅರ್ಹತೆ ಪಡೆದ ಖಾತೆಗಳಿಗೆ ಲೈವ್‌ನಲ್ಲಿ ಒಂದಷ್ಟು ಫೀಚರ್ಸ್ ನೀಡಲು ಇನ್‌ಸ್ಟಾಗ್ರಾಂ ಮುಂದಾಗಿದೆ. ಆದರೆ ಹಲವು ಇನ್‌ಸ್ಟಾ ಬಳಕೆದಾರರು ಈ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ.
ಇದು ಇನ್‌ಸ್ಟಾಗ್ರಾಂ ಹಣ ಮಾಡುವ ವಿಧಾನ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ನಮ್ಮ ಫ್ರೆಂಡ್ಸ್, ಫ್ಯಾಮಿಲಿ ಸೇರಿದಂತ ನಮ್ಮ ಖಾಸಗಿ ವಿಚಾರಗಳ ಫೋಟೋ ವಿಡಿಯೋ, ಲೈವ್‌ನಲ್ಲೂ ಇನ್‌ಸ್ಟಾಗ್ರಾಂ ಮತ್ತಷ್ಟು ಹಣ ಮಾಡಲು ಬಯಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ ಹೊಸ ನಿಯಮ ಪರ ವಿರೋಧಗಳಿಗೆ ಕಾರಣವಾಗಿದೆ.