ಎಲ್ಲಾ X ಬಳಕೆದಾರರಿಗಿಲ್ಲ ಈ ಫೀಚರ್, ಮತ್ತೊಂದು ನಿರ್ಬಂಧ ಹೇರಿದ ಎಲಾನ್ ಮಸ್ಕ್!
ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಹೆಸರು ಸೇರಿದಂತೆ ಬಳಿಕ ಹಲವು ಬದಲಾವಣೆಗಳಾಗಿದೆ. ಇದೀಗ X ಬಳಕೆದಾರರಿಗೆ ನಿರ್ಬಂಧ ಹೇರಲಾಗಿದೆ. ಎಲ್ಲಾ X ಬಳಕೆದಾರರಿಗೆ ಈ ಫೀಚರ್ ಲಭ್ಯವಿರುವುದಿಲ್ಲ. ಹಾಗಾದರೆ ಎಲಾನ್ ಮಸ್ಕ್ ಹೇರಿದ ನಿರ್ಬಂಧವೇನು?
ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿ ಇತ್ತೀಚೆಗೆ X ಎಂದು ನಾಮಕರಣ ಮಾಡಿದ್ದಾರೆ. ಹೆಸರಿನ ಜೊತೆಗೆ ಲೋಗೋ ಸೇರಿದಂತೆ ಹಲವು ಬದಲಾವಣೆಗಳಾಗಿದೆ.
ಇದಕ್ಕೂ ಮೊದಲು ವೆರಿಫೈಡ್ ಬ್ಲೂ ಟಿಕ್ ಚಂದಾದಾರಿಕೆ ಸೇರಿದಂತೆ ನಿಯಮದಲ್ಲೂ ಬದಲಾವಣೆ ಮಾಡಲಾಗಿತ್ತು. ಇದೀಗ ಎಲಾನ್ ಮಸ್ಕ್ ಹೊಸ ನಿಯಮ ಜಾರಿಗೆ ತಂದಿದ್ದಾರೆ.
Xನಲ್ಲಿನ ಮತಗಣನೆ, ಅಥವಾ ಯಾವುದೇ ರೀತಿಯ ಮತ ಚಲಾವಣೆಗೆ ನಿರ್ಬಂಧ ಹೇರಲಾಗಿದೆ. ಕೇವಲ ಬ್ಲೂಟಿಕ್ ವೆರಿಫೈಡ್ ಖಾತೆ ಹೊಂದಿದವರಿಗೆ ಮಾತ್ರ ಪೋಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಕಾರಣ X ಮೂಲಕ ಮತ ಹಾಕುವ ಪ್ರಕ್ರಿಯೆಯಲ್ಲಿ ಬಾಟ್ ಸ್ಪಾಮ್ ನಡೆಯುತ್ತಿದೆ. ಹೀಗಾಗಿ ಈ ಮತಗಳಲ್ಲಿ ಬರುವ ಅಂಕಿ ಅಂಶ ನೈಜವಾಗಿರುವುದಿಲ್ಲ. ಈ ಕಾರಣಕ್ಕೆ ವೆರಿಫೈಡ್ ಖಾತೆ ಹೊಂದಿದವರಿಗೆ ಮಾತ್ರ ಪೋಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಈ ಕುರಿತು ಎಲಾನ್ ಮಸ್ಕ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನಾವು ವೆರಿಫೈಡ್ ಖಾತೆ ಹೊಂದಿದವರಿಗೆ ಮಾತ್ರ X ನಲ್ಲಿನ ಮತ ಪ್ರಕ್ರಿಯೆಯ್ಲಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದ್ದೇವೆ ಎಂದಿದ್ದಾರೆ.
ಇತ್ತೀಚೆಗೆ ಮಸ್ಕ್ ಹೊಸ ಫೀಚರ್ ಪರಿಚಯಸಿದ್ದಾರೆ. ಎಕ್ಸ್ ಬಳಕೆದಾರರು ತಮ್ಮ ಖಾತೆಯಿಂದ ತಮ್ಮ ಟ್ವೀಟರ್ ಕ್ಯಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರುವ ವ್ಯಕ್ತಿಗಳಿಗೆ ಆಡಿಯೋ ಮತ್ತು ವಿಡಿಯೋ ಕರೆ ನೀಡುವ ಸೌಲಭ್ಯ ಘೋಷಿಸಿದ್ದರು.
ಐಒಎಸ್, ಆ್ಯಂಡ್ರಾಯ್ಡ್, ಮ್ಯಾಕ್ ಮತ್ತು ಕಂಪ್ಯೂಟರ್‌ಗಳಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ಫೋನ್ ನಂಬರ್‌ನ ಅಗತ್ಯವಿರುವುದಿಲ್ಲ.
ಈ ಸೇವೆ ನಿರ್ದಿಷ್ಟವಾಗಿ ಯಾವಾಗ ಆರಂಭ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ಆರಂಭಿಸುವ ಸೂಚನೆಯನ್ನು ಮಸ್ಕ್ ನೀಡಿದ್ದಾರೆ.