- Home
- Technology
- What's New
- ಕೇವಲ ಒಂದು ಸಣ್ಣ ಸೆಟಿಂಗ್‌ನಿಂದ ಸ್ಮಾರ್ಟ್‌ಫೋನ್‌ನಲ್ಲಿ ಪಡೆದುಕೊಳ್ಳಿ ಸೂಪರ್‌ಫಾಸ್ಟ್ 5G ಇಂಟರ್‌ನೆಟ್
ಕೇವಲ ಒಂದು ಸಣ್ಣ ಸೆಟಿಂಗ್‌ನಿಂದ ಸ್ಮಾರ್ಟ್‌ಫೋನ್‌ನಲ್ಲಿ ಪಡೆದುಕೊಳ್ಳಿ ಸೂಪರ್‌ಫಾಸ್ಟ್ 5G ಇಂಟರ್‌ನೆಟ್
5G ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಕಡಿಮೆ ಇದ್ದರೆ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸೆಟ್ಟಿಂಗ್‌ಗಳಲ್ಲಿ 'Preferred Network Type'ನಲ್ಲಿ 5G ಎನೇಬಲ್ ಮಾಡಿಕೊಳ್ಳಬೇಕು. APN ಸೆಟ್ಟಿಂಗ್‌ನಲ್ಲಿ ಡಿಫಾಲ್ಟ್ APN ಆಯ್ಕೆ ಮಾಡಿ 5G ಗಾಗಿ ಪ್ರತ್ಯೇಕ APN ಸೆಟ್ಟಿಂಗ್ ಒದಗಿಸಿ.

ಇಂದು ಎಲ್ಲರೂ 5G ಇಂಟರ್‌ನೆಟ್‌ನತ್ತ ಮುಖ ಮಾಡುತ್ತಿದ್ದಾರೆ. ಅದಕ್ಕಾಗಿ 5G ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಯಾವುದೇ ಅಡೆತಡೆಯಿಲ್ಲದೇ ವೇಗವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ.
5G
ಕೆಲವೊಮ್ಮೆ ಸಣ್ಣ ಸೆಟ್ಟಿಂಗ್‌ನಲ್ಲಿ ಬದಲಾವಣೆಯಿಂದಾಗಿ 5G ಸ್ಮಾರ್ಟ್‌ಫೋನ್ ಇದ್ರೂ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗಿರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ವೇಗವಾಗಿ ಮತ್ತು ಉತ್ತಮ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳಲು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ನಿಮ್ಮದು 5G ಸ್ಮಾರ್ಟ್‌ಫೋನ್ ಆಗಿದ್ದರೂ ಇಂಟರ್‌ನೆಟ್ ಸ್ಪೀಡ್ ಕಡಿಮೆ ಇದೆ. ಇದಕ್ಕೆ ಕಾರಣ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಬದಲಾವಣೆ ಆಗಿರಬಹುದು. ಒಂದೇ ಒಂದು ಸೆಟಿಂಗ್ ಬದಲಾವಣೆಯಿಂದ ಸೂಪರ್‌ಫಾಸ್ಟ್ 5G ಇಂಟರ್‌ನೆಟ್ ಪಡೆದುಕೊಳ್ಳಬಹುದು. ಆ ಸೆಟಿಂಗ್ ಬದಲಾವಣೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಮೊದಲು ನಿಮ್ಮ ಸ್ಮಾರ್ಟ್‌ಫೋನ್ 5G ನೆಟ್‌ವರ್ಕ್ ಸಪೋರ್ಟ್ ಮಾಡುತ್ತಾ ಎಂದು ಖಚಿತಪಡಿಸಿಕೊಳ್ಳಿ. ಆನಂತರ ಮೊಬೈಲ್‌ನಲ್ಲಿರುವ ಸೆಟ್ಟಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನೆಟ್‌ವರ್ಕ್ ಆಂಡ್ ಇಂಟರ್‌ನೆಟ್ ಮೇಲೆ ಕ್ಲಿಕ್ಕಿಸಿ ಮೊಬೈಲ್ ನೆಟ್‌ವರ್ಕ್ ಪ್ರವೇಶಿಸಿ. ಆ ಬಳಿಕ 'Preferred Network Type'ಆಯ್ಕೆ ಮಾಡಬೇಕು. ಆ ಬಳಿಕ 5G ಎನೇಬಲ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್ 5G ಮೋಡ್‌ನಲ್ಲಿ ಇರದಿದ್ರೆ ಅದು 4G ಅಥವಾ 2G ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿರುತ್ತದೆ.
ಸ್ಮಾರ್ಟ್‌ಫೋನ್‌ನಲ್ಲಿಯ APN (Access Point Name) ಸೆಟಿಂಗ್ 5G ಇಂಟರ್‌ನೆಟ್ ಸ್ಪೀಡ್ ಹಚ್ಚು ಮಾಡುತ್ತದೆ. ಇದಕ್ಕಾಗಿ ಸೆಟ್ಟಿಂಗ್>ಮೊಬೈಲ್ ನೆಟ್‌ವರ್ಕ್>ಆಕ್ಸೆಸ್ ಪಾಯಿಂಟ್ ನೇಮ್ ಪ್ರವೇಶಿಸಬೇಕು. ಇಲ್ಲಿ ಡಿಫಾಲ್ಟ್ APN ಸೆಟ್ಟಿಂಗ್ ಆಯ್ಕೆ ಮಾಡಿ. ಈಗ ನೀವೇ 5G ಗಾಗಿ ಪ್ರತ್ಯೇಕ APN ಸೆಟ್ಟಿಂಗ್ ಒದಗಿಸಿ.
ಒಂದು ವೇಳೆ ನೀವು 5G ಸಿಗ್ನಲ್ ವೀಕ್ ಆಗಿರುವ ಸ್ಥಳದಲ್ಲಿದ್ದರೆ ನಿಮ್ಮ ಇಂಟರ್ನೆಟ್ ಸ್ಪೀಡ್ ಸ್ಲೋ ಆಗಿರಬಹುದು. ಈ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನನ್ನು ಏರೋಪ್ಲೇನ್ ಮೋಡ್‌ಗೆ ಹಾಕಿ ಕೆಲ ಸಮಯ ಬಿಡಬೇಕು. ನಂತರ ಸ್ವಿಚ್ಛ್ ಆಫ್ ಮಾಡಿ ಆನ್ ಮಾಡಿದ್ರೆ 5G ಇಂಟರ್‌ನೆಟ್ ಕನೆಕ್ಟ್ ಆಗುತ್ತದೆ. ಫೋನ್ ಆನ್ ಆದಾದ ಡೇಟಾ ಕ್ಲಿಯರ್ ಮಾಡೋದರಿಂದ ಇಂಟರ್‌ನೆಟ್ ಸ್ಪೀಡ್ ಅಧಿವಾಗುತ್ತದೆ.
ಸ್ಮಾರ್ಟ್‌ಫೋನ್‌ನಲ್ಲಿರುವ ಆಪ್‌ಗಳನ್ನು ಸಮಯಕ್ಕನುಸಾರವಾಗಿ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು. ಇದರಿಂದ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ವೇಗವಾಗುತ್ತದೆ. ಆಗಾಗ್ಗೆ ಮೊಬೈಲ್ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು.