ಸ್ಪ್ಯಾಮ್ ಕಾಲ್, ಮೆಸೇಜ್‌ನಿಂದ ಕಿರಿಕಿರಿ ಆಗ್ತಿದೆಯಾ? ಸಿಂಪಲ್ ಆಗಿ ಬ್ಲಾಕ್ ಮಾಡೋದು ಹೇಗೆ?
ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಆಫರ್ ಸೇರಿದಂತೆ ಅನಗತ್ಯವಾಗಿ ಬರುವ ಸ್ಪ್ಯಾಮ್ ಕಾಲ್ ಮತ್ತು ಮೆಸೇಜ್‌ಗಳಿಂದ ಸಾಕಾಗಿದೆಯೇ? ಈ ಸಿಂಪಲ್ ಟ್ರಿಕ್ಸ್ ಬಳಸಿ ಬ್ಲಾಕ್ ಮಾಡಿ.
ಮೊಬೈಲ್ ಬಳಕೆದಾರನಿಗೆ ಸ್ಪ್ಯಾಮ್ ಕಾಲ್ , ಮೆಸೇಜ್ ಸಮಸ್ಯೆ ಇರಬಾರದು ಎಂದು ಟೆಲಿಕಾಂ ರೆಗ್ಯೂಲೇಟರಿ ಬಾಡಿ ಸ್ಪಷ್ಟವಾಗಿ ಹೇಳಿದರೂ, ಇದಕ್ಕಾಗಿ ಹಲವು ಪ್ರಯತ್ನಗಳು ನಡೆದಿರೂ ಖದೀಮರು ಹೊಸ ವಿಧಾನದ ಮೂಲಕ ಕರೆ ಮಾಡುತ್ತಾರೆ. ದಿನಾ ಬ್ಯಾಂಕ್, ಫೈನಾನ್ಸ್ ಕಂಪನಿಗಳಿಂದ ಲೋನ್, ಕ್ರೆಡಿಟ್ ಕಾರ್ಡ್ ಆಫರ್‌ಗಳ ಕಾಲ್, ಮೆಸೇಜ್ ಬರ್ತಾ ಇರುತ್ತೆ. ಬೇಡ ಅಂದ್ರೂ ಬಿಡೋದಿಲ್ಲ. ಕೆಲವೊಮ್ಮೆ ಕೋಪನೂ ಬರುತ್ತೆ.
ಕಂಪ್ಲೇಂಟ್ ಕೊಟ್ಟರೂ ಕೆಲವು ದಿನ ಮಾತ್ರ ಕಾಲ್, ಮೆಸೇಜ್ ನಿಲುತ್ತೆ. ಮತ್ತೆ ಕೆಲವೇ ದಿನಗಳಲ್ಲಿ ಶುರುವಾಗುತ್ತೆ. ಈ ರೀತಿಯ ಸ್ಪ್ಯಾಮ್ ಕಾಲ್‌ಗಳು ಮೆಸೇಜ್‌ಗಳಿಂದ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ಹಲವಿದೆ. ಅನಗತ್ಯ ಲಿಂಕ್, ಕ್ಲಿಕ್ ಮಾಡಿ, ಕರೆಗೆ ಸ್ಪಂದಿಸಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಸ್ಪ್ಯಾಮ್ ಬ್ಲಾಕ್ ಮಾಡೋದೇ ಪರಿಹಾರ.
ರಿಜಿಸ್ಟರ್ಡ್ ಮೊಬೈಲ್‌ನಿಂದ 1909ಕ್ಕೆ ‘FULLY BLOCK’ ಮೆಸೇಜ್ ಮಾಡಿ. 24 ಗಂಟೆಯಲ್ಲಿ ಸ್ಪ್ಯಾಮ್ ಕಾಲ್, ಮೆಸೇಜ್ ನಿಲ್ಲುತ್ತೆ. ಇದು ನೀವು ಸುಲಭವಾಗಿ ಮಾಡಬಹುದಾದ ವಿಧಾನ. ನಿಮಗೆ ಬರವು ಎಲ್ಲಾ ಸ್ಪ್ಯಾಮ್ ಕರೆಗಳು, ಮೆಸೇಜ್‌ಗಳು ಬ್ಲಾಕ್ ಆಗುತ್ತದೆ.
ಮತ್ತೊಂದು ಆಯ್ಕೆ ಎಂದರೆ ಸ್ಪ್ಯಾಮ್ ನಂಬರ್ ಮೇಲೆ ಲಾಂಗ್ ಪ್ರೆಸ್ ಮಾಡಿ Block/Report Spam ಆಯ್ಕೆ ಮಾಡಿ. ಅಥವಾ ಮೆಸೇಜ್ ಮೇಲೆ ಕ್ಲಿಕ್ ಮಾಡಿ, ಹೋಲ್ಡ್ ಮಾಡಿ ಬ್ಲಾಕ್ ಆಯ್ಕೆ ಮಾಡಿ. ಈ ಮೂಲಕ ಸ್ಪ್ಯಾಮ್ ಕಾಲ್ ಬ್ಲಾಕ್ ಮಾಡಬಹುದು. ಆದರೆ ಇದೇ ಸಂಸ್ಥೆ ಬೇರೆ ನಂಬರ್‌ನಿಂದ ಕರೆ ಮಾಡುವ ಸಾಧ್ಯತೆ ಇದೆ.
ಟ್ರೂಕಾಲರ್‌ನಂತಹ ಆ್ಯಪ್‌ಗಳು ಸ್ಪ್ಯಾಮ್ ಕಾಲ್, ಮೆಸೇಜ್ ಗುರುತಿಸಿ ಬ್ಲಾಕ್ ಮಾಡಲು ಸಹಾಯ ಮಾಡುತ್ತವೆ. ಟ್ರೂ ಕಾಲರ್‌ಗಳು ನಿಮಗೆ ಸ್ಪ್ಯಾಮ್ ಕಾಲ್ ಅನ್ನೋದು ಪತ್ತೆ ಹಚ್ಚಿ ಹೇಳುತ್ತದೆ. ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಅನಗತ್ಯ ಕರೆ, ಮೆಸೇಜ್‌ಗಳನ್ನು ಬ್ಲಾಕ್ ಮಾಡುವುದೇ ಉತ್ತಮ.