- Home
- Technology
- What's New
- ಎಷ್ಟು ಬೇಕಾದ್ರೂ ಸೇವ್ ಮಾಡಿ, ಗೂಗಲ್ ಸಹಯೋಗದಲ್ಲಿ ಏರ್‌ಟೆಲ್‌ನಿಂದ 100ಜಿಬಿ ಉಚಿತ ಕ್ಲೌಡ್ ಆಫರ್
ಎಷ್ಟು ಬೇಕಾದ್ರೂ ಸೇವ್ ಮಾಡಿ, ಗೂಗಲ್ ಸಹಯೋಗದಲ್ಲಿ ಏರ್‌ಟೆಲ್‌ನಿಂದ 100ಜಿಬಿ ಉಚಿತ ಕ್ಲೌಡ್ ಆಫರ್
ಗೂಗಲ್ ಫೋಟೋಸ್‌ನಲ್ಲಿ ಎಷ್ಟು ಬೇಕಾದರೂ ಫೋಟೋ, ವಿಡಿಯೋ ಸೇವ್ ಮಾಡಿ, ಜಿಮೇಲ್‌ನಿಂದ ಹಳೇ ಫೈಲ್, ಲಾರ್ಜ್ ಫೈನಲ್ ಡಿಲೀಟ್ ಮಾಡುವ ಅಗತ್ಯವಿಲ್ಲ. ಕಾರಣ ಇದೀಗ ಏರ್‌ಟೆಲ್ ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಭರ್ಜರಿ 100 ಜಿಬಿ ಕ್ಲೌಡ್ ಉಚಿತವಾಗಿ ನೀಡಲಿದೆ.

ಹಲವರು ಜಿಮೇಲ್ ಫುಲ್, ಕ್ಲೌಡ್ ಸ್ಟೋರೇಜ್ ಫುಲ್, ಗೂಗಲ್ ಡ್ರೈವ್ ಫುಲ್, ವ್ಯಾಟ್ಸಾಪ್ ಫುಲ್ ಸೇರಿದಂತೆ ಹಲವು ನೋಟಿಫಿಕೇಶನ್ ನಿಮ್ಮ ಮೊಬೈಲ್‌ಗೆ ಬರುತ್ತಲೇ ಇರಬಹುದು. ಇನ್ನು ಫೋನ್‌ನಲ್ಲಿ ತೆಗೆದ ಎಲ್ಲಾ ಫೋಟೋ, ವಿಡಿಯೋಗಳನ್ನು ಕ್ಲೌಡ್ ಮೂಲಕ ಸೇವ್ ಮಾಡಿಕೊಳ್ಳುವುದು ಅಸಾದ್ಯ ಕಾರಣ ಗೂಗಲ್ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಉಚಿತ ಸ್ಟೋರೇಜ್ ಕೇವಲ 15ಜಿಬಿ ಮಾತ್ರ. ಇದು ಜಿಮೇಲ್, ಗೂಗಲ್ ಫೋಟೋಸ್, ಡ್ರೈವ್ ಎಲ್ಲಾ ಸೇರಿದಂತೆ. ಹೀಗಾಗಿ ಪ್ರತಿ ಭಾರಿ ಅಮೂಲ್ಯ ಫೋಟೋಗಳನ್ನು ಕ್ಲೌಡ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗದೆ ಡಿಲೀಟ್ ಮಾಡಬೇಕಾಗುತ್ತದೆ. ಆದರೆ ಏರ್‌ಟೆಲ್ ಇದೀಗ ಭರ್ಜರಿ ಆಫರ್ ನೀಡಲು ಮಂದಾಗಿದೆ. ಗೂಗಲ್ ಸಹಯೋಗದೊಂದಿಗೆ ಏರ್‌ಟೆಲ್ ಇದೀಗ ಬರೋಬ್ಬರಿ 100 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ನೀಡಲಿದೆ.
ಏರ್‌ಟೆಲ್ ಪೋಸ್ಟ್ ಪೇಯ್ಡ್ ಹಾಗೂ ವೈಫೈ ಬಳಕೆದಾರರಿಗೆ ಈ 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ನೀಡಲಾಗುತ್ತಿದೆ. ಇದು 6 ತಿಂಗಳು ಸಂಪೂರ್ಣ ಉಚಿತವಾಗಿದೆ. ಬರೋಬ್ಬರಿ 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್‌ನ್ನು ನೀಡುತ್ತಿದೆ. ಇದರಿಂದ ಗ್ರಾಹಕರು ಡಾಕ್ಯುಮೆಂಟ್, ಫೋಟೋ, ವಿಡಿಯೋ, ವ್ಯಾಟ್ಸಾಪ್, ಜಿಮೇಲ್,ಡ್ರೈವ್ ಸೇರಿದಂತೆ ಯಾವುದೇ ಆ್ಯಪ್ ಹಾಗೂ ಸೇವೆ ಸ್ಟೋರೇಜ್ ಸಮಸ್ಯೆ ಇಲ್ಲದ ಬಳಕೆ ಮಾಡಲು ಸಾಧ್ಯವಿದೆ.
ಏರ್‌ಟೆಲ್ ಹಾಗೂ ಗೂಗಲ್ ಸಹಯೋಗದ 100 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್,ಆ್ಯಕ್ಟಿವೇಶನ್ ಮಾಡಿದ ದಿನದಿಂದ 6 ತಿಂಗಳವರೆಗೆ ಲಭ್ಯವಿದೆ. ಈ 6 ತಿಂಗಳು ಯಾವುದೇ ಚಾರ್ಜ್ ಇರುವುದಿಲ್ಲ. ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ ಲಾಗಿನ್ ಆಗಿ ಸುಲಭವಾಗಿ ಈ 100 ಜಿಬಿ ಕ್ಲೌಡ್ ಸ್ಟೋರೇಜ್ ಉಚಿತವಾಗಿ ಬಳಕೆ ಮಾಡಬಹುದು. ಲಾಗಿನ್ ಆದ ಬಳಿಕ ಒಂದೇ ಕ್ಲಿಕ್‌ನಲ್ಲಿ ಈ 100 ಜಿಬಿ ಕ್ಲೌಡ್ ಸ್ಟೋರೇಜ್ ಆಫರ್ ಸಕ್ರಿಯಗೊಳ್ಳಲಿದೆ.
6 ತಿಂಗಳ ಬಳಿಕ ಕ್ಲೌಡ್ ಸ್ಟೋರೇಜ್ ಬಳಕೆ ಮುಂದುವರಿಸು ಹೆಚ್ಚು ಪಾವತಿ ಮಾಡಬೇಕಿಲ್ಲ. ಕನಿಷ್ಠ ದರ ತಿಂಗಳಿಗೆ ಕೇವಲ 125 ರೂಪಾಯಿ ಮಾತ್ರ. ಇನ್ನು ಗ್ರಾಹಕರು ಉಚಿತ 6 ತಿಂಗಳ ಕ್ಲೌಡ್ ಸ್ಟೋರೇಜ್ ಬಳಕೆ ಮಾಡಿ ಮತ್ತೆ ಪಾವತಿ ಮಾಡಿ ಬಳಕೆ ಮಾಡಲು ಇಚ್ಚಿಸದೇ ಇದ್ದಲ್ಲಿ, ಪ್ಲಾನ್‌ನಿಂದ ಹಿಂದೆ ಸರಿಯುವ ಅವಕಾಶವಿದೆ. 100 ಜಿಬಿ ನಿಮಗೆ ಗೂಗಲ್‌ನ ಜಿಮೇಲ್, ಫೋಟೋಸ್, ಡ್ರೈವ್ ಸೇರಿದಂತೆ ಎಲ್ಲಾ ಪ್ಲಾಟ್‌ಫಾರ್ಮ್‌ಗೆ ಅನ್ವಯವಾಗಲಿದೆ.
ಕ್ಲೌಡ್ ಸ್ಟೋರೇಜ್‌ನಿಂದ ನೀವು ಫೋಟೋ, ಡಾಕ್ಯುಮೆಂಟ್, ವ್ಯಾಟ್ಸಾಪ್ ಚಾಟ್ಸ್, ವಿಡಿಯೋ ಸೇರಿದಂತೆ ಫೈಲ್‌ಗಳನ್ನು ಆಟೋಮ್ಯಾಟಿಕ್ ಆಗಿ ಕ್ಲೌಡ್‌ನಲ್ಲಿ ಸ್ಟೋರ್ ಮಾಡುವಂತೆ ಮಾಡಬಹುದು. ಇದರಿಂದ ನೀವು ಫೋನ್‌ನಲ್ಲಿ ಡಿಲೀಟ್ ಮಾಡಿದರೂ ಕ್ಲೌಡ್‌ನಲ್ಲಿ ಶಾಶ್ವತವಾಗಿ ಇರಲಿದೆ. ಇನ್ನು ಹೊಸ ಫೋನ್ ಖರೀದಿಸಿದಾಗಲೂ ನಿಮ್ಮ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಸೇರಿದಂತೆ ಚಾಟ್ಸ್ ಯಾವೂದು ನಷ್ಟವಾಗುವುದಿಲ್ಲ.
ಸದ್ಯ ಲಭ್ಯವಿರುವ ಕ್ಲೌಡ್ ಸ್ಟೋರೇಜ್ ಪೈಕಿ ಏರ್‌ಟೆಲ್ ಹಾಗೂ ಗೂಗಲ್ ಸಹಯೋಗದಲ್ಲಿ ನೀಡುತ್ತಿರುವ ಪ್ಲಾನ್ ಅತ್ಯಂತ ಕಡಿಮೆಯಾಗಿದೆ. ಕಾರಣ ಇತರ ಯಾವುದೇ ಮೂಲಗಳಿಂದ ಕ್ಲೌಡ್ ಸ್ಟೋರೇಜ್ ಖರೀದಿ ದುಬಾರಾಯಿಗುತ್ತದೆ. ಏರ್‌ಟೆಲ್-ಗೂಗಲ್ ಪಾರ್ಟ್ನಶಿಪ್ ಮೂಲಕ ಸುಲಭವಾಗಿ ಗ್ರಾಹಕರ ಕೈಸೇರಲಿದೆ.