- Home
- Technology
- What's New
- ಯುಟ್ಯೂಬ್‌ನಲ್ಲಿ ಲೈಕ್ಸ್, ವ್ಯೂವ್, ಸಬ್‌ಸ್ಕ್ರೈಬರ್ ಸಂಖ್ಯೆ ಹೆಚ್ಚಳ ಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಯುಟ್ಯೂಬ್‌ನಲ್ಲಿ ಲೈಕ್ಸ್, ವ್ಯೂವ್, ಸಬ್‌ಸ್ಕ್ರೈಬರ್ ಸಂಖ್ಯೆ ಹೆಚ್ಚಳ ಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
YouTube ನಲ್ಲಿ ಚಾನೆಲ್ ಬೆಳೆಸಲು ಗುಣಮಟ್ಟದ ಕಂಟೆಂಟ್, SEO, ನಿರಂತರ ಪೋಸ್ಟಿಂಗ್ ಮತ್ತು ಪ್ರೇಕ್ಷಕರ ಜೊತೆ ಸಂವಹನ ಪ್ರಮುಖ. Collaborations ಮೂಲಕ ಹೊಸ ಪ್ರೇಕ್ಷಕರನ್ನು ಸೆಳೆಯಬಹುದು.

2.6 ಬಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ YouTube ಜಾಗತಿಕವಾಗಿ ಅತಿದೊಡ್ಡ ವೀಡಿಯೊ ಮಾರ್ಕೆಟಿಂಗ್ ವೇದಿಕೆಯಾಗಿ ಬೆಳೆದಿದೆ. ಇಂದು ಯುಟ್ಯೂಬ್ ಮೂಲಕವೇ ಜನರು ಹಣ ಸಂಪಾದನೆ ಮಾಡುತ್ತಿದ್ದಾರೆ. ಯುಟ್ಯುಬ್ ವೇದಿಕೆಯಲ್ಲಿ ಹೇಗೆ ಬೆಳವಣಿಗೆ ಆಗಬೇಕು ಎಂಬುದರ ಮಾಹಿತಿ ಇಲ್ಲಿದೆ.
ಉತ್ತಮ ಗುಣಮಟ್ಟದ ಕಂಟೆಂಟ್ ರಚನೆ ಮಾಡೋದು ನಿಮ್ಮ ಚಾನಲ್ ಯಶಸ್ಸಿನಲ್ಲಿ ಪ್ರಮಖ ಪಾತ್ರವಹಿಸುತ್ತದೆ. ನಿಮ್ಮ ಪ್ರೇಕ್ಷಕರು ಇಷ್ಟಪಡುವ ವಿಷಯವನ್ನು ನೀವು ನೀಡುತ್ತಿರಬೇಕು. ವೀಕ್ಷಕರ ಅಗತ್ಯತೆ ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಂಡು ನಿಮ್ಮನ್ನು ಆ ಮಾರ್ಗದಲ್ಲಿ ತೊಡಗಿಸಿಕೊಳ್ಳಬೇಕು. ಕಾಲಾನಂತರ ಇದು ನಿಮ್ಮ ಚಾನೆಲ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.
YouTube ನಲ್ಲಿ ನಿಮ್ಮ ಚಾನೆಲ್ ಕಾಣಿಸಲು ಕೆಲ ವಿಡಿಯೋಗಳನ್ನು ಆಪ್ಟಿಮೈಜ್ ಮಾಡುವುದು ಅತ್ಯಗತ್ಯ.. ಪ್ಲಾಟ್‌ಫಾರ್ಮ್ ಹುಡುಕಾಟ ಎಂಜಿನ್‌ನಂತೆ ಕಾರ್ಯನಿರ್ವಹಿಸುವುದರಿಂದ, ಶೀರ್ಷಿಕೆಗಳು, ವಿವರಣೆಗಳು ಮತ್ತು ಟ್ಯಾಗ್‌ಗಳಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸುವುದರಿಂದ ನಿಮ್ಮ ವಿಡಿಯೋಗಳು ಸರ್ಚ್ ಎಂಜಿನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದಿರಂದ ನಿಮ್ಮ ವಿಡಿಯೋ ನೋಡುಗರರ ಸಂಖ್ಯೆ ಏರಿಕೆಯಾಗುತ್ತದೆ.
YouTube ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹ ಸವಾಲಿನ ಕೆಲಸವಾಗಿರುತ್ತದೆ. ನಿಯಮಿತ ಸಮಯದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುವುದರಿಂದ ನಿಮ್ಮ ಚಾನಲ್ ಅನ್ನು ಸಕ್ರಿಯವಾಗಿರಿಸುತ್ತದೆ. ಇದರಿಂದ ಪ್ರೇಕ್ಷಕರು ಪದೇ ಪದೇ ನಿಮ್ಮ ಚಾನೆಲ್‌ಗೆ ಬರುವಂತಾಗುತ್ತದೆ. ವಿಡಿಯೋ ಅಪ್ಲೋಡ್ ಮಾಡುವ ನಿಮ್ಮ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು YouTube ನ ಅಲ್ಗಾರಿದಮ್ ಅನ್ನು ರಚಿಸುತ್ತದೆ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತದೆ.
ನಿಮ್ಮ ವಿಡಿಯೋಗಳಿಗೆ ಬರುವ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸೋದು ನಿಮ್ಮ ಚಾನೆಲ್ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರವಾಗಿದೆ. ಇದು ನಿಮ್ಮ ಚಾನೆಲ್ ದೀರ್ಘಾವಧಿ ಬೆಳವಣಿಗೆಗೆ ಸಹಾಯವಾಗುತ್ತದೆ. ಈ ವಿಧಾನದಿಂದ ನಿಮ್ಮ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತದೆ.
ಇತರ ಯೂಟ್ಯೂಬರ್‌ಗಳು ಅಥವಾ ಪ್ರಭಾವಿಗಳೊಂದಿಗಿನ Collaborations ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಮೂಲಕ ನಿಮ್ಮ ಚಾನೆಲ್‌ಗೆ ಹೊಸ ವೀಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತದೆ.