MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಶಾರ್ಕ್ ದಾಳಿಯಿಂದ ಪಾರಾದ ಜನಪ್ರಿಯ ಕಂಟೆಂಟ್ ಕ್ರಿಯೆಟರ್! ಆಸ್ಪತ್ರೆಯಿಂದಲೇ ಹಂಚಿಕೊಂಡ ಫೋಟೋಗಳು ವೈರಲ್

ಶಾರ್ಕ್ ದಾಳಿಯಿಂದ ಪಾರಾದ ಜನಪ್ರಿಯ ಕಂಟೆಂಟ್ ಕ್ರಿಯೆಟರ್! ಆಸ್ಪತ್ರೆಯಿಂದಲೇ ಹಂಚಿಕೊಂಡ ಫೋಟೋಗಳು ವೈರಲ್

ಶಾರ್ಕ್ ದಾಳಿಯಿಂದ ಪಾರಾದ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ಹೆನ್ರಿ ಗಿಬ್ಸ್ ಆಸ್ಪತ್ರೆಯಿಂದಲೇ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ. ಇಷ್ತೊಂಡು ಅಪಾಯಕಾರಿ ದಾಳಿ ಮಾಡಿದ್ರೂ ಗಿಬ್ಸ್ ಶಾರ್ಕ್ ಮೇಲೆ ನನಗೆ ದ್ವೇಷವಿಲ್ಲ ಎಂದಿದ್ದಾರೆ. ಅವರು ಏನು ಹೇಳಿದ್ದಾರೆ ಪೂರ್ತಿ ಓದಿ

2 Min read
Author : Ravi Janekal
Published : Jul 25 2026, 02:03 PM IST
Share this Photo Gallery
  • FB
  • TW
  • Linkdin
  • Whatsapp
18
ಹೆನ್ರಿ ಗಿಬ್ಸ್ ಶಾರ್ಕ್ ದಾಳಿ!
Image Credit : Asianet News

ಹೆನ್ರಿ ಗಿಬ್ಸ್ ಶಾರ್ಕ್ ದಾಳಿ!

ನ್ಯೂಜಿಲೆಂಡ್‌ನ ಮೀನುಗಾರಿಕೆ ಕ್ಷೇತ್ರದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿರುವ ಹೆನ್ರಿ ಗಿಬ್ಸ್ ಅವರು ಇತ್ತೀಚೆಗೆ ಫಿಜಿಯಲ್ಲಿ ಡೈವಿಂಗ್ ಮಾಡುವ ವೇಳೆ ಹಠಾತ್ ಶಾರ್ಕ್ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಶಾರ್ಕ್ ದಾಳಿ ಎಷ್ಟು ಭೀಕರವಾಗಿತ್ತು ಎಂದರೆ ನಾಲ್ಕು ಸರ್ಜರಿ ಬಳಿಕ ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದಲೇ ತಮ್ಮ ಆರೋಗ್ಯದ ಬಗ್ಗೆ Instagram ನಲ್ಲಿ ಅಪ್ಡೇಟ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಹೆನ್ರಿ ಗಿಬ್ಸ್ ಹಂಚಿಕೊಂಡ ಫೋಟೋಗಳು
Image Credit : Asianet News

ಹೆನ್ರಿ ಗಿಬ್ಸ್ ಹಂಚಿಕೊಂಡ ಫೋಟೋಗಳು

ಇದೇ ಜುಲೈ 24ರಂದು ಹೆನ್ರಿ ಗಿಬ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ವಾರಗಳ ಬಳಿಕ ಮೊದಲ ಪೋಸ್ಟ್ ಮಾಡಿದ್ದು ಅದರಲ್ಲಿ ಫಿಜಿ ದ್ವೀಪಗಳಲ್ಲಿ ಮೊದಲ ಬಾರಿಗೆ ಡೈವ್ ಮಾಡಿದ ವೇಳೆ ಈ ದುರ್ಘಟನೆ ಬಗ್ಗೆ ವಿವರಿಸಿದ್ದಾರೆ. ಆಸ್ಪತ್ರೆಯಿಂದಲೇ ಐದು ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

Related Articles

Related image1
ಸಮುದ್ರದಾಳದಲ್ಲಿ ಈಜುತ್ತಿದ್ದ ಟ್ರಾವೆಲ್ ವ್ಲಾಗರ್ ಕೈ ಬೆರಳು ಕಚ್ಚಿದ ಶಾರ್ಕ್: ವೀಡಿಯೋ
Related image2
ಶಾರ್ಕ್ ಟ್ಯಾಂಕ್ ಇಂಡಿಯಾ ಶೋನ ಉದ್ಯಮಿಗಳನ್ನ ಟೀಕಿಸಿ ಸಂಕಷ್ಟಕ್ಕೆ ಸಿಲುಕಿದ ಯುಟ್ಯೂಬರ್!
38
ಸ್ನೇಹಿತರ ಸಮಯಪ್ರಜ್ಞೆಯಿಂದ ಜೀವ ಉಳೀತು!
Image Credit : Asianet News

ಸ್ನೇಹಿತರ ಸಮಯಪ್ರಜ್ಞೆಯಿಂದ ಜೀವ ಉಳೀತು!

ಶಾರ್ಕ್ ದಾಳಿ ನಡೆದ ತಕ್ಷಣ ಹೆನ್ರಿ ಗಿಬ್ಸ್‌ನ ಇಬ್ಬರು ಸ್ನೇಹಿತರು ತಕ್ಷಣವೇ ನೀರಿನಿಂದ ಅವರನ್ನ ಸುರಕ್ಷಿತವಾಗಿ ಹೊರತಂದು ತಡ ಮಾಡದೆ ಆಸ್ಪತ್ರೆಗೆ ಕರೆದೊಯ್ದರು. ಅವರ ಸಮಯಪ್ರಜ್ಞೆಯಿಂದಲೇ ತಮ್ಮ ಜೀವ ಉಳಿಯಿತು ಎಂದು ಗಿಬ್ಸ್ ಹೇಳಿದ್ದಾರೆ.

48
ನಾಲ್ಕು ಶಸ್ತ್ರಚಿಕಿತ್ಸೆ, ಕಾಲಿಗೆ ಚರ್ಮ ಕಸಿ!
Image Credit : Asianet News

ನಾಲ್ಕು ಶಸ್ತ್ರಚಿಕಿತ್ಸೆ, ಕಾಲಿಗೆ ಚರ್ಮ ಕಸಿ!

ಆಸ್ಪತ್ರೆಯಲ್ಲಿ ಗಿಬ್ಸ್ ಅವರಿಗೆ ನಾಲ್ಕು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಶಾರ್ಕ್ ದಾಳಿ ಎಷ್ಟು ಭೀಕರವಾಗಿತ್ತು ಎಂಬುದನ್ನ ಊಹಿಸಬಹುದು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಬಲಗಾಲಿಗೆ ವೈದ್ಯರು ಚರ್ಮ ಕಸಿ (Skin Grafting) ಕೂಡ ಮಾಡಿದ್ದಾರೆ. ಚಿಕಿತ್ಸೆ ಉತ್ತಮವಾಗಿ ನಡೆಯುತ್ತಿದ್ದು ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

58
ವ
Image Credit : Asianet News

ವ

ಪ್ರಾಣಕ್ಕೆ ಸಂಚಕಾರ ತಂದರೂ, ದೊಡ್ಡ ಮಟ್ಟದಲ್ಲಿ ಶಾರ್ಕ್ ಅಟ್ಯಾಕ್ ಮಾಡಿದ್ರೂ ಕೂಡ ಹೆನ್ರಿ ಗಿಬ್ಸ್'ನನಗೆ ಶಾರ್ಕ್ ಮೇಲೆ ಯಾವುದೇ ದ್ವೇಷ ಇಲ್ಲ' ಎಂದು ಹೇಳಿದ್ದಾರೆ. ವಾಸ್ತವವಾಗಿ ನಾನು ಶಾರ್ಕ್‌ಗಳು ಇರುವ ಸ್ಥಳದಲ್ಲೇ ಡೈವಿಂಗ್ ಮಾಡಿದ್ದೆ. ಅದು ತನ್ನ ಆಹಾರಕ್ಕಾಗಿ ಸಹಜವಾಗಿ ಅಟ್ಯಾಕ್ ಮಾಡಿತ್ತು. ಇದರಲ್ಲಿ ಶಾರ್ಕ್ ತಪ್ಪು ಇಲ್ಲ. ರಾಂಗ್ ಟೈಂ, ರಾಂಗ್ ಪ್ಲೇಸ್‌ನಲ್ಲಿ ನಾನು ಡೈವ್ ಮಾಡಿದ್ದೇ ಈ ಘಟನೆಗೆ ಕಾರಣ ಎಂದು ಅವರು ವಿವರಿಸಿದ್ದಾರೆ.

68
ಈ ಅನುಭವದಿಂದ ಪಾಠ ಕಲಿಯಿರಿ
Image Credit : Asianet News

ಈ ಅನುಭವದಿಂದ ಪಾಠ ಕಲಿಯಿರಿ

ಘಟನೆಯ ವಿಡಿಯೊವನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ಹೇಳಿರುವ ಗಿಬ್ಸ್, ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಮತ್ತು ಯಾವ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

78
ಬೆಂಬಲಕ್ಕೆ ಧನ್ಯವಾದ
Image Credit : Asianet News

ಬೆಂಬಲಕ್ಕೆ ಧನ್ಯವಾದ

ಘಟನೆ ನಡೆದ ಬಳಿಕ ಫಿಜಿ ಮತ್ತು ನ್ಯೂಜಿಲೆಂಡ್‌ನಿಂದ ಕರೆ, ಸಂದೇಶಗಳು ತುಂಬಾ ಬಂದಿವೆ. ಬರುತ್ತಲಿವೆ. ಇದರೊಂದಿಗೆ ಆರೋಗ್ಯದ ಕುರಿತು ಪ್ರಾರ್ಥನೆಗಳ ಮೂಲಕ ಧೈರ್ಯ ತುಂಬಿದ ಎಲ್ಲರಿಗೂ ಹೆನ್ರಿ ಬಿಗ್ಸ್ ಧನ್ಯವಾದಗಳು ತಿಳಿಸಿದ್ದಾರೆ.

88
ಈ ಘಟನೆ ಜೀವನದ ಮಹತ್ವ ತಿಳಿಸಿದೆ
Image Credit : Asianet News

ಈ ಘಟನೆ ಜೀವನದ ಮಹತ್ವ ತಿಳಿಸಿದೆ

'ನಾನು ಬದುಕುಳಿದಿರುವುದು ನನ್ನ ಅದೃಷ್ಟ. ಈ ಘಟನೆ ಜೀವನದ ಮಹತ್ವ ಇನ್ನಷ್ಟು ಅರ್ಥ ಮಾಡಿಸಿದೆ ಎಂದು ಗಿಬ್ಸ್ ಭಾವುಕರಾಗಿ ಬರೆದುಕೊಂಡಿದ್ದಾರೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ನ್ಯೂಜಿಲೆಂಡ್
ವಿಷಯ ಸೃಷ್ಟಿಕರ್ತರು
ವೈರಲ್ ಸುದ್ದಿ

Latest Videos
Recommended Stories
Recommended image1
ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಕೆಲಸ ಮಾಡಿದ್ರೂ ಬೆಲೆ ಇಲ್ಲ! 'ವರ್ಕ್ ಫ್ರಮ್ ಹೋಮ್' ನೌಕರರ ಗೋಳು ಕೇಳೋರ್ಯಾರು?
Recommended image2
ಮಾನವನ ಬೇಜವಾಬ್ದಾರಿಗೆ ಬಲಿಯಾದ ಮೂಕಪ್ರಾಣಿ: ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ಕಪ್ಪು ಕರಡಿ!
Recommended image3
ಆಫೀಸ್‌ನಲ್ಲಿ ಹೊಸ ಕ್ರಾಂತಿ ಮಾಡಿದ Gen Z ಉದ್ಯೋಗಿ; ಓವರ್ ಟೈಮ್ ಕೆಲಸಕ್ಕೆ ಸಿಕ್ತು ದುಡ್ಡು
Related Stories
Recommended image1
ಸಮುದ್ರದಾಳದಲ್ಲಿ ಈಜುತ್ತಿದ್ದ ಟ್ರಾವೆಲ್ ವ್ಲಾಗರ್ ಕೈ ಬೆರಳು ಕಚ್ಚಿದ ಶಾರ್ಕ್: ವೀಡಿಯೋ
Recommended image2
ಶಾರ್ಕ್ ಟ್ಯಾಂಕ್ ಇಂಡಿಯಾ ಶೋನ ಉದ್ಯಮಿಗಳನ್ನ ಟೀಕಿಸಿ ಸಂಕಷ್ಟಕ್ಕೆ ಸಿಲುಕಿದ ಯುಟ್ಯೂಬರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved