- Home
- Viral News
- ಗೃಹಿಣಿಯರೇ ನೆಲ ಒರೆಸುವಾಗ ಎಚ್ಚರ: ಒದ್ದೆ ನೆಲದ ಮೇಲೆ ಜಾರಿ ಬಿದ್ದು ಮಗು, ತಲೆಗೆ ಪೆಟ್ಟು, ಶಾಕಿಂಗ್ ವಿಡಿಯೋ ನೋಡಿ!
ಗೃಹಿಣಿಯರೇ ನೆಲ ಒರೆಸುವಾಗ ಎಚ್ಚರ: ಒದ್ದೆ ನೆಲದ ಮೇಲೆ ಜಾರಿ ಬಿದ್ದು ಮಗು, ತಲೆಗೆ ಪೆಟ್ಟು, ಶಾಕಿಂಗ್ ವಿಡಿಯೋ ನೋಡಿ!
ವಿಯೆಟ್ನಾಂನಲ್ಲಿ ಮೂವರು ಮಕ್ಕಳು ಒದ್ದೆ ಟೈಲ್ಸ್ ಮೇಲೆ ಆಟವಾಡುತ್ತಿದ್ದರು. ಈ ವೇಳೆ, ಬಾಲಕಿಯೊಬ್ಬಳು ಬ್ಯಾಲೆನ್ಸ್ ತಪ್ಪಿ ಬಲವಾಗಿ ಕೆಳಗೆ ಬಿದ್ದಿದ್ದಾಳೆ. ತಲೆಗೆ ಪೆಟ್ಟಾದಂತೆ ಕಾಣುತ್ತಿದ್ದು, ಆಕೆ ಕೆಳಗೆ ಬಿದ್ದಿರುವುದನ್ನು ನೋಡಿ ಉಳಿದ ಮಕ್ಕಳು ಶಾಕ್ ಆಗಿದ್ದಾರೆ.

Girl slips while playing on wet floor
ವಿಯೆಟ್ನಾಂನ ಈ ವಿಡಿಯೋದಲ್ಲಿ ಮಕ್ಕಳು ಒದ್ದೆ ನೆಲದ ಮೇಲೆ ಆಟವಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್ 7ರಂದು ರೆಕಾರ್ಡ್ ಆದಂತೆ ಕಾಣುವ ಈ ಸಿಸಿಟಿವಿ ದೃಶ್ಯದಲ್ಲಿ, ಮೂವರು ಮಕ್ಕಳು ವಿಯೆಟ್ನಾಂನ ಸಾಂಪ್ರದಾಯಿಕ 'ನಾನ್ ಲಾ' ಟೋಪಿಗಳನ್ನು ಧರಿಸಿ, ತೆರೆದ ಮೆಟಲ್ ಗೇಟ್ ಪಕ್ಕದಲ್ಲಿ ಒದ್ದೆ ಟೈಲ್ಸ್‌ಗಳ ಮೇಲೆ ಆಟವಾಡುತ್ತಿದ್ದಾರೆ. ನೋಡಲು ಮುಗ್ಧ ಆಟದಂತೆ ಕಂಡರೂ, ಸ್ವಲ್ಪದರಲ್ಲೇ ಇದು ಭಯಾನಕವಾಗಿ ಬದಲಾಗುತ್ತದೆ.
Head injury reported
ವಿಡಿಯೋದಲ್ಲಿ ತೋರಿಸಿದಂತೆ ಮಕ್ಕಳು ಆಟವಾಡುತ್ತಿರುವಾಗ ಬಾಲಕಿಯೊಬ್ಬಳು ಜಾರಿ ಬಿಳುತ್ತಾಳೆ. ಒದ್ದೆ ನೆಲ ಬಂಡೆ ಮೇಲೆ ಬಿದ್ದ ಪರಿಣಾಮ ನೋವಿನಿಂದ ಚೀರುತ್ತೆ ಮಗು. ಆಗ ವಯಸ್ಕ ವ್ಯಕ್ತಿಯೊಬ್ಬರು ಸ್ಥಳಕ್ಕೆ ಬಂದು ಮಕ್ಕಳನ್ನು ನೋಡಿ ಶಾಕ್ ಆಗುತ್ತಾರೆ. ಬಾಲಕಿಯ ತಲೆಗೆ ಪೆಟ್ಟಾಗಿರಬಹುದೆಂದು ವಿಡಿಯೋದಲ್ಲಿ ಭಾರೀ ಚರ್ಚೆ ನಡೆದಿದೆ. ಕೆಲವರು ಆಕೆಗೆ 'ಕನ್ಕಶನ್' (ತಲೆಗೆ ಪೆಟ್ಟಾದಾಗ ಆಗುವ ಮೆದುಳಿನ ಗಾಯ) ಆಗಿದೆ ಎಂದೂ, ಇನ್ನು ಕೆಲವರು ಮೆದುಳಿಗೆ ಹಾನಿಯಾಗಿರಬಹುದು ಎಂದೂ ಹೇಳಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ದೃಢೀಕೃತ ಮಾಹಿತಿ ಇಲ್ಲ.
Social media users raise concern
ಈ ಘಟನೆಯ ನಂತರ ಬಾಲಕಿಗೆ ಏನಾಯಿತು ಎಂದು ಅನೇಕ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. 'ಅವಳು ಬದುಕುಳಿದಳೇ?', 'ಆಸ್ಪತ್ರೆಗೆ ಸೇರಿಸಲಾಯಿತೇ?' ಎಂಬಂತಹ ಕಾಮೆಂಟ್‌ಗಳು ಬಂದಿವೆ. ಕೆಲವರು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿದರೆ, ಇನ್ನು ಕೆಲವರು ಇದು ಕೇವಲ ಸಣ್ಣ ಮೆದುಳಿನ ಗಾಯ ಎಂದಿದ್ದಾರೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿ ವೈದ್ಯರು ಎಂಬ ದೃಢೀಕರಿಸದ ವದಂತಿಯೂ ಇದೆ. ಈ ಯಾವುದೇ ಹೇಳಿಕೆಗಳು ದೃಢಪಟ್ಟಿಲ್ಲ, ಹಾಗಾಗಿ ಇವನ್ನು ಸತ್ಯವೆಂದು ಪರಿಗಣಿಸಬಾರದು. ಕೆಲವರು ಈ ವಿಡಿಯೋ ಇಂಡೋನೇಷ್ಯಾದ್ದು ಎಂದು ಹೇಳಿದರೂ, ಲಭ್ಯವಿರುವ ಮಾಹಿತಿ ಪ್ರಕಾರ ಇದು ವಿಯೆಟ್ನಾಂನ ದೃಶ್ಯವಾಗಿದೆ.

