Vastu: ವಾಸಕ್ಕೆ ಅತ್ಯಂತ ಶುಭ ಈ ದಿಕ್ಕು, ಇಲ್ಲಿ ಹಣವಿಟ್ಟರೆ ಹೆಚ್ಚುವುದು ಅಂತಸ್ತು
ವಾಸ್ತುವಿನಲ್ಲಿ ಎಲ್ಲ ದಿಕ್ಕುಗಳಿಗೂ ಅವುಗಳದೇ ಆದ ಪ್ರಾಶಸ್ತ್ಯವಿದೆ. ಆದರೆ, ವಿಶೇಷವಾಗಿ ಈ ಒಂದು ದಿಕ್ಕು ವಾಸಕ್ಕೆ ಅತ್ಯಂತ ಯೋಗ್ಯವಾದುದು ಎನಿಸಿಕೊಂಡಿದೆ. ಅದು ಯಾವ ದಿಕ್ಕು, ಕಾರಣವೇನು ನೋಡೋಣ.
ನಿವೇಶನದ ಈಶಾನ್ಯ ಭಾಗದಲ್ಲಿರುವ ಭೂಮಿಯು ಶಿವ(Lord Shiva)ನ ದಿಕ್ಕಾಗಿದೆ. ಎಲ್ಲ ದೇವಾನುದೇವತೆಗಳು ಭೂಮಿಯ ಈ ದಿಕ್ಕಿನಲ್ಲಿಯೇ ಇರುತ್ತಾರೆ. ಹಾಗಾಗಿಯೇ ಇದೊಂದು ಪವಿತ್ರ ದಿಕ್ಕೆನಿಸಿಕೊಂಡಿದೆ.
Vastu shastra tips
ಉತ್ತರ ಹಾಗೂ ಪೂರ್ವ ದಿಕ್ಕಿನ ನಡುವೆ ಬರುವ ಈ ದಿಕ್ಕಿಗೆ ಗುರುವು ಅಧಿಪತಿಯಾಗಿದ್ದಾನೆ. ಈ ದಿಕ್ಕಿನಲ್ಲಿ ಹೆಚ್ಚಾಗಿ ಹಳದಿ ಬಣ್ಣ ಬಳಸಬೇಕು. ಇದರಿಂದ ಮನೆಯಲ್ಲಿ ಶಾಂತಿ, ಸಂತೋಷ, ನೆಮ್ಮದಿ ನೆಲೆಸಿರುತ್ತದೆ.
ಮನೆಯಲ್ಲಿ ಈಶಾನ್ಯ ಭಾಗದಲ್ಲಿ ನೀರಿನ ವ್ಯವಸ್ಥೆ ಮಾಡಿದರೆ ಅತ್ಯಂತ ಶುಭವೆನಿಸಿಕೊಳ್ಳುತ್ತದೆ. ಈ ಭಾಗದಲ್ಲಿ ಬಾವಿ, ಬೋರ್‌ವೆಲ್ ಕೊರೆಸಬಹುದು. ಇಲ್ಲವೇ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಕೊಡ ನೀರಿಟ್ಟರೂ ಆದೀತು. ಈ ರೀತಿ ಮಾಡುವುದರಿಂದ ಅತ್ಯಂತ ಶುಭ ಫಲಗಳನ್ನು ಪಡೆಯಬಹುದಾಗಿದೆ.
ಮೊದಲೇ ಹೇಳಿದಂತೆ ಈಶಾನ್ಯ ದಿಕ್ಕಿನಲ್ಲಿ ಎಲ್ಲ ದೇವಾನುದೇವತೆಗಳು ನೆಲೆಸಿರುತ್ತಾರೆ. ಹಾಗಾಗಿ, ಮನೆಯ ದೇವರ ಕೋಣೆಯನ್ನು ಈ ದಿಕ್ಕಿನಲ್ಲಿ ಮಾಡುವುದು ಕೂಡಾ ಅತ್ಯುತ್ತಮವಾಗಿದೆ. ಇದರಿಂದ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ(positive energy) ಸುಳಿದಾಡುತ್ತದೆ.
ಮನೆಯ ಮುಖ್ಯ ದ್ವಾರ(main door) ಈಶಾನ್ಯ ದಿಕ್ಕಿನಲ್ಲಿರುವುದು ಕೂಡಾ ಅತ್ಯಂತ ಶುಭವಾಗಿದೆ. ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ ಎಂದು ವಾಸ್ತು ಹೇಳುತ್ತದೆ. ಈ ದಿಕ್ಕಲ್ಲಿ ಮುಖ್ಯ ದ್ವಾರ ಇದ್ದರೆ ನೆಗೆಟಿವ್ ಎನರ್ಜಿ ಒಳಬರದು.
Before buying a home, be sure to keep this in mind
ಮನೆಯ ಹಣಕಾಸು, ಆಸ್ತಿ ಸಂಬಂಧಿ ಪತ್ರ, ಆಭರಣಗಳನ್ನಿಡುವ ತಿಜೋರಿಯು ಈಶಾನ್ಯ ದಿಕ್ಕಿನಲ್ಲಿದ್ದರೆ ಆ ಮನೆಯ ಹುಡುಗಿ ಬುದ್ಧಿವಂತೆಯೂ, ಪ್ರಖ್ಯಾತಳೂ ಆಗುತ್ತಾಳೆ. ಪೂರ್ವದಲ್ಲಿದ್ದರೆ ಮನೆ ಮಗ ಬುದ್ದಿವಂತ ಹಾಗೂ ಪ್ರಖ್ಯಾತನಾಗುತ್ತಾನೆ. ಇದಲ್ಲದೆ ಈಶಾನ್ಯದಲ್ಲಿ ತಿಜೋರಿ ಇದ್ದರೆ ಅಂತಸ್ತು ವೃದ್ಧಿಸುತ್ತದೆ.
vastu tips
ಈಗ ಈಶಾನ್ಯ ದಿಕ್ಕಿನಲ್ಲಿ ಇರಲೇಬಾರದ್ದೇನು ನೋಡೋಣ. ಈಶಾನ್ಯ ದಿಕ್ಕಿನ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡಬಾರದು. ಚರಂಡಿ ಸೇರಿದಂತೆ ಕಶ್ಮಲಗಳನ್ನಿಡುವ ಯಾವುದೂ ಇಲ್ಲಿರಬಾರದು. .
Vastu shastra 2022- know about colors in your room that will bring positivity or negativity in your life
ಮೊದಲನೆಯದಾಗಿ ಬೆಡ್‌ರೂಂ ಈ ದಿಕ್ಕಿನಲ್ಲಿ ಇರಲೇಕೂಡದು. ಇದರಿಂದ ದಂಪತಿಯ ನಡುವೆ ಜಗಳ, ಅಂತರ ಹೆಚ್ಚುತ್ತದೆ ಎನ್ನಲಾಗುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಮನೆಯಲ್ಲಿ ಸಾಕಷ್ಟು ಒತ್ತಡ ಉಂಟಾಗುತ್ತದೆ. ಈಶಾನ್ಯ ದಿಕ್ಕಿಗೆ ತಲೆಯಿಟ್ಟು ಬಹಳ ಕಾಲ ಮಲಗಿದರೆ ಆರೋಗ್ಯ ಹದಗೆಡುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಬಾರದು. ಇದು ಅತ್ಯಂತ ಪವಿತ್ರ ದಿಕ್ಕಾಗಿರುವುದರಿಂದ ಇಲ್ಲಿ ಟಾಯ್ಲೆಟ್ ನಿರ್ಮಾಣ ಮಾಡಿದರೆ, ಇದರಿಂದ ವಾಸ್ತು ದೋಷದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.