MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಅದೃಷ್ಟ ಲಕ್ಷ್ಮೀಯನ್ನು ಒಲಿಸಿ ಶ್ರೀಮಂತರಾಗಬೇಕಾ? ಹೀಗ್ ಮಾಡಿ ನೋಡಿ

ಅದೃಷ್ಟ ಲಕ್ಷ್ಮೀಯನ್ನು ಒಲಿಸಿ ಶ್ರೀಮಂತರಾಗಬೇಕಾ? ಹೀಗ್ ಮಾಡಿ ನೋಡಿ

ಆರ್ಥಿಕ ಶಕ್ತಿ ಇದ್ದರೆ, ಜೀವನದಲ್ಲಿ ಪ್ರತಿಯೊಂದು ಕೆಲಸವೂ ಸುಲಭವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮಗೆ ಅಪಾರ ಸಂಪತ್ತನ್ನು ನೀಡುವ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಕೆಲವು ಕ್ರಮಗಳನ್ನು ಪ್ರಯತ್ನಿಸಬೇಕು. ಬನ್ನಿ, ಹಣವನ್ನು ಪಡೆಯಲು ವಾಸ್ತು ಪರಿಹಾರಗಳನ್ನು ತಿಳಿದುಕೊಳ್ಳಿ. 

2 Min read
Pavna Das
Published : Jul 10 2024, 04:43 PM IST| Updated : Jul 10 2024, 04:51 PM IST
Share this Photo Gallery
  • FB
  • TW
  • Linkdin
  • Whatsapp
17

ಜೀವನದಲ್ಲಿ ಕಷ್ಟ ಸುಖ ಎಲ್ಲ ಇರುತ್ತೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿದ್ರೆ ಜೀವನವು ಸ್ವಲ್ಪ ಸುಲಭವಾಗುತ್ತದೆ. ಇದರರ್ಥ ಹಣ ಹೊಂದಿದ್ರೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಅಂತ. ಇನ್ನು ಹಣದ ಕೊರತೆಯಿಂದ, ಸಮಸ್ಯೆಗಳು ಇನ್ನಷ್ಟು ಹದಗೆಡಲು ಪ್ರಾರಂಭಿಸುತ್ತವೆ. ನೀವು ಸಹ ಹೆಚ್ಚು ಹಣ ಗಳಿಸಿ ಶ್ರೀಮಂತರಾಗಲು ಬಯಸಿದರೆ, ವಾಸ್ತು ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತೆ. ಬನ್ನಿ, ವಾಸ್ತು ಪ್ರಕಾರ ಲಕ್ಷ್ಮಿಯನ್ನು (Goddess Lakshmi) ಒಲಿಸಿಕೊಳ್ಳುವ ಮಾರ್ಗಗಳನ್ನು ತಿಳಿದುಕೊಳ್ಳಿ.
 

27

ಲವಂಗದ ಉಪಾಯ
ಮನೆಯಿಂದ ಹೊರಗೆ ಹೋಗುವಾಗ, ಕೈಯಲ್ಲಿ ಐದು ಲವಂಗಗಳನ್ನ(5 clove) ಹಿಡ್ಕೊಂಡು ಹೋಗಿ, ಇನ್ನು ಕೆಲಸಕ್ಕೆ ಹೋಗುವಾಗ ಲವಂಗಗಳನ್ನು ಕೆಂಪು ಬಟ್ಟೆಯಲ್ಲಿ ಇರಿಸಿ ಜೇಬಿನಲ್ಲಿ ಇಡಬೇಕು. ಮನೆಗೆ ಹಿಂತಿರುಗಿ ಬಂದ ನಂತರ ಅವುಗಳನ್ನು ಮನೆಯ ಪೂಜಾ ಮಂದಿರದಲ್ಲಿ ಇರಿಸಿ. 

37

ಗೀತೆಯ 11ನೇ ಅಧ್ಯಾಯವನ್ನು ಓದಿ
ಶ್ರೀಮದ್ ಭಗವದ್ಗೀತೆಯನ್ನು (Bhagavad Gita) ಓದೋದ್ರಿಂದ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅದರ 11 ನೇ ಅಧ್ಯಾಯ ಓದೋದ್ರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತೆ, ಇದಲ್ಲದೆ, ಯಾವಾಗಲೂ ನಿಮ್ಮ ದೇಶ ಮತ್ತು ಮಹಿಳೆಯರನ್ನು ಗೌರವಿಸಿ. ಮಹಿಳೆಯರನ್ನು ಕೀಳಾಗಿ ಕಾಣುವ ಮೂಲಕ ಅವರನ್ನು ಎಂದಿಗೂ ಅಗೌರವಗೊಳಿಸಬೇಡಿ.

47

ದೀಪ ಬೆಳಗಿಸಿ ಕನಕಧಾರ ಮೂಲವನ್ನು ಪಠಿಸಿ
ಪ್ರತಿದಿನ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪ ಬೆಳಗಿಸಿ, ಕನಕಧಾರ ಸ್ತೋತ್ರವನ್ನು ಪಠಿಸುವ ಜನರ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರೋದಿಲ್ಲ. ಕನಕಧಾರ ಸ್ತೋತ್ರವನ್ನು ಪಠಿಸಿದ್ರೆ ಮನೆ ಸಂಪತ್ತಿನಿಂದ ತುಂಬಿರುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯ ಮಳೆಯಾಗುತ್ತೆ. ಲಕ್ಷ್ಮೀ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ. 

57

ಸಂಪತ್ತು ಹೆಚ್ಚಿಸಲು ಸೂರ್ಯ ದೇವನನ್ನು ಸ್ತುತಿಸಿ
ಸೂರ್ಯನ ಮುಂದೆ ಗಾಯತ್ರಿ ಮಂತ್ರವನ್ನು (gayatri mantra) ಪಠಿಸುವ ವ್ಯಕ್ತಿಯ ಎಲ್ಲಾ ಗ್ರಹ ದೋಷಗಳು ದೂರವಾಗುತ್ತವೆ. ಗಾಯತ್ರಿ ಮಂತ್ರವನ್ನು ಪಠಿಸುವುದು ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಅವನ ನಡವಳಿಕೆಯನ್ನು ಸೌಮ್ಯಗೊಳಿಸುತ್ತದೆ ಮತ್ತು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಒದಗಿಸುತ್ತದೆ.

67

ಶನಿವಾರದಂದು ಲಕ್ಷ್ಮಿಯನ್ನು ಹೀಗೆ ಪೂಜಿಸಿ
ಶನಿವಾರ ಶನಿಯ ದಿನ. ಈ ದಿನ ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇದಲ್ಲದೇ ಈ ದಿನ ಕಪ್ಪು ಬಟ್ಟೆಗಳನ್ನು ಖರೀದಿಸುವುದು ಸಹ  ಸರಿಯಲ್ಲ. ಶನಿವಾರ ಸಂಜೆ ದೀಪವನ್ನು ಬೆಳಗಿಸಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ. ಲಕ್ಷ್ಮೀ ಒಲಿದು ಬರುತ್ತಾಳೆ.

77

ಲಕ್ಷ್ಮಿ ಪೂಜೆಯಲ್ಲಿ ಈ ಬಣ್ಣದ ಆಸನ ಹಚ್ಚಿ
ನಾವೆಲ್ಲರೂ ಮನೆಯಲ್ಲಿ ಪೂಜೆ ಮಾಡುವಾಗ ಕುಳಿತುಕೊಳ್ಳಲು ಆಸನಗಳನ್ನು ಬಳಸುತ್ತೇವೆ. ವಾಸ್ತು ಪ್ರಕಾರ, ಒಬ್ಬ ವ್ಯಕ್ತಿಯು ಲಕ್ಷ್ಮಿ ಮಂತ್ರವನ್ನು (Lakshmi Mantra) ಪಠಿಸುವಾಗ ಅವನು ಗುಲಾಬಿ ಬಣ್ಣದ ಆಸನ ಬಳಸಬೇಕು. ಅಂತೆಯೇ, ಯಾರಾದರೂ ಹನುಮಾನ್ ಮಂತ್ರವನ್ನು ಪಠಿಸೋದಾದರೆ ಅವರು ಕೆಂಪು ಬಣ್ಣದ ಆಸನ ಬಳಸಬೇಕು. ಪೂಜೆ ಮಾಡಿದಾಗಲೆಲ್ಲಾ, ಪೂಜೆಯ ನಂತರ ಆಸನಕ್ಕೆ ನಮಸ್ಕರಿಸಿ. ಹಾಗೆಯೇ ಆಸನವನ್ನು ಯಾವತ್ತೂ ಕಾಲಿನಿಂದ ಮೆಟ್ಟಬೇಡಿ. 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಣ (Hana)
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved