ಚಿತ್ರ ವಿಚಿತ್ರ ಫ್ಯಾಷನ್‌ನಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಮೇಕಪ್ ಇಲ್ಲದೇ ಕಾಣಿಸೋದು ಹೀಗೆ!
ಯಾವುದೇ ತೆರನಾದ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದನ್ನು ಪ್ರಸಿದ್ಧ ವ್ಯಕ್ತಿಗಳು ಒಪ್ಪಿಕೊಳ್ಳುವುದು ಅಪರೂಪ ಹಾಗೂ ಅದನ್ನು ಶಿಫಾರಸು ಮಾಡುವುದು ತುಂಬಾ ವಿರಳ. ಆದರೆ ಇದಕ್ಕೆ ಅಪವಾದ ಎಂಬಂತೆ ಉರ್ಫಿ ಜಾವೇದ್ (Uorfi Javed) ನಡೆದುಕೊಂಡಿದ್ದಾರೆ. ಅಂಡರ್ ಐ ಮತ್ತು ಲಿಪ್ ಫಿಲ್ಲರ್‌ಗಳನ್ನು ಪಡೆಯುವ ಕುರಿತು ಟಿಪ್ಪಣಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಬಾಡಿ ಇಮೇಜ್ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸರ್ಜರಿಯನ್ನು ಶಿಫಾರಸು ಮಾಡಿದ ಉರ್ಫಿ, ಜಾಗರೂಕರಾಗಿರಿ ಎಂದು ಸಲಹೆ ಸಹ ನೀಡಿದ್ದಾರೆ.
ಉರ್ಫಿ ಜಾವೇದ್ ಫ್ಯಾಷನ್ ಪ್ರಭಾವಿ ಇತ್ತೀಚೆಗೆ ಕಾಸ್ಮೇಟಿಕ್ ಸರ್ಜರಿಗಳ ಬಗ್ಗೆ ಪ್ರಾಮಾಣಿಕರಾಗಿ ತೆರೆದಿಕೊಂಡಿದ್ದಾರೆ. ಡಾರ್ಕ್ ಸರ್ಕಲ್‌ಗಳನ್ನು ಸರಿಪಡಿಸಲು ಕಣ್ಣಿನ ಕೆಳಗಿನ ಫಿಲ್ಲರ್‌ಗಳನ್ನು ಪಡೆಯುವ ಕುರಿತು ಅವರು Instagram ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.
'ಕಣ್ಣಿನ ಕಪ್ಪು ವರ್ತುಲಗಳ ಬಗ್ಗೆ ನಾನು ತುಂಬಾ ಜಾಗೃತನಾಗಿದ್ದೆ, ನಾನು ಬಾಲ್ಯದಿಂದಲೂ ಅವುಗಳನ್ನು ಹೊಂದಿದ್ದೇನೆ. ಹಾಗಾಗಿ ನಾನು ಕಣ್ಣಿನ ಕೆಳಗಿನ ಫಿಲ್ಲರ್‌ಗಳನ್ನು ಪಡೆದುಕೊಂಡಿದ್ದೇನೆ ಮತ್ತು ಇದು ಸರಿಯಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಉರ್ಫಿ.
'ಹೌದು ಇದು ನಾನು ಸಾನ್ಸ್ ಮೇಕಪ್ ಮಾಡುತ್ತೇನೆ. ನಾನು ಮೇಕಪ್ ಮಾಡದೆಯೇ ಫೋಟೋ ತೆಗೆಯಲು ಬಯಸುವುದಿಲ್ಲ. ಅದು ನನ್ನ ಆಸೆ" ಎಂದು ಅವರು ಬರೆದಿದ್ದಾರೆ.
ಎರಡನೇ ಪೋಸ್ಟ್‌ನಲ್ಲಿ, ತಮ್ಮ ಹಳೆಯ ಫೋಟೋಗಳ ಜೊತೆ ಉರ್ಫಿ ಲಿಪ್ ಫಿಲ್ಲರ್‌ಗಳ ಕುರಿತು ಸುದೀರ್ಘವಾದ ಟಿಪ್ಪಣಿ ಬರೆದಿದ್ದಾರೆ. ಅವಳು 18 ವರ್ಷ ವಯಸ್ಸಿನಿಂದಲೂ ಅವುಗಳನ್ನು ಪಡೆಯುತ್ತಿದ್ದಾರಂತೆ. ಯಾವಾಗಲೂ ಯಶಸ್ವಿಯಾಗಿಲ್ಲ. ಈ ಕೆಲವು ಫಲಿತಾಂಶಗಳ ಚಿತ್ರಗಳೊಂದಿಗೆ ಉರ್ಫಿ ಜಾವೇದ್ ಹೀಗೆ ಬರೆದಿದ್ದಾರೆ.
urfi javed
'ನನ್ನ ಎಲ್ಲಾ ಲಿಪ್ ಫಿಲ್ಲರ್ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು 18 ನೇ ವಯಸ್ಸಿನಿಂದ ಲಿಪ್ ಫಿಲ್ಲರ್‌ಗಳನ್ನು ಪಡೆಯುತ್ತಿದ್ದೇನೆ, ಆಗ ನನ್ನ ಬಳಿ ಅಷ್ಟು ಹಣ ಇರಲಿಲ್ಲ, ಆದರೆ ನನ್ನ ತುಟಿಗಳು ತುಂಬಾ ತೆಳ್ಳಗಿದ್ದವು ಮತ್ತು ನನಗೆ ದೊಡ್ಡ ತುಟಿಗಳು ಬೇಕಿತ್ತು. ಕಡಿಮೆ ದುಡ್ಡಿನಲ್ಲಿ ಮಾಡುವ ಡರ್ಮಟ್ ಡೆನಿಗೆ ನಾನು ಹೋಗಿದ್ದೆ. ಇವುಗಳು ಒಂದು ಸಾರಿಯ ಫಲಿತಾಂಶಗಳಾಗಿವೆ. ನಾನು ಅವನ್ನು ಬಿಡಬೇಕಿತ್ತು. ಇದು ಅತ್ಯಂತ ನೋವಿನ ಸಂಗತಿಯಾಗಿದೆ' ಎಂದು ಉರ್ಫಿ ಹಂಚಿಕೊಂಡಿದ್ದಾರೆ
ಸೆಲೆಬ್ರಿಟಿಗಳಿಗೆ ಅಥವಾ ತಮ್ಮ ಲುಕ್ ಬಗ್ಗೆ ಅಭದ್ರತೆ ಹೊಂದಿರುವ ಯಾರಿಗಾದರೂ ಫಿಲ್ಲರ್‌ಗಳನ್ನು ಉರ್ಫಿ ಶಿಫಾರಸು ಮಾಡುತ್ತಾರೆ. ಆದರೆ ಎಚ್ಚರಿಕೆ ಕೂಡ ನೀಡಿದ್ದಾರೆ.
'ನಾನು ಜನರಿಗೆ ಅವುಗಳನ್ನು ಮಾಡಿಸಿಕೊಳ್ಳಬೇಡಿ ಎಂದು ಹೇಳುತ್ತಿಲ್ಲ, ಆದರೆ ವಾಸ್ತವವಾಗಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಫಿಲ್ಲರ್‌ಗಳು ಅಥವಾ ಬೊಟೊಕ್ಸ್ ಅನ್ನು ಪಡೆಯುವಾಗ ಜಾಗರೂಕರಾಗಿರಿ. ಯಾವುದೇ ವೈದ್ಯರ ಬಳಿಗೆ ಹೋಗುವ ಮೊದಲು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅನಿವಾರ್ಯ. ಎಲ್ಲರಿಗೂ ಫಿಲ್ಲರ್ಸ್ ಶಿಫಾರಸು ಮಾಡುತ್ತೇನೆ, ನಿಮ್ಮ ಮುಖ ಅಥವಾ ದೇಹದ ಬಗ್ಗೆ ನೀವು ಕೆಲವು ಅಭದ್ರತೆ ಹೊಂದಿದ್ದರೆ ನಿಮ್ಮ ಅಥವಾ ನಿಮ್ಮ ಮುಖವನ್ನು ದ್ವೇಷಿಸುವ ಬದಲು ಫಿಲ್ಲರ್‌ಗಳು ಅಥವಾ ಶಸ್ತ್ರಚಿಕಿತ್ಸೆಗಳನ್ನು ಆರಿಸಿಕೊಳ್ಳುವುದು ಉತ್ತಮ ಆದರೆ ಆದರೆ ಉತ್ತಮ ವೈದ್ಯರಿಂದ ಮಾತ್ರ ' ಎಂದು ಉರ್ಫಿ ಜಾವೆದ್ ಹೇಳಿದ್ದಾರೆ.