ಒಟಿಟಿಯಲ್ಲಿನ ಟಾಪ್ ಅಂಡರ್‌ರೇಟೆಡ್ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ, ನೋಡಬೇಕಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು!
ಇದು ಓಟಿಟಿ ಯುಗ. ಸಿನಿಮಾಗಳಿಗಿಂತ ಜನ ಹೆಚ್ಚು ವೆಬ್ ಸೀರಿಸ್‌ಗಳತ್ತ ಒಲವು ತೋರಿಸುತ್ತಿದ್ದಾರೆ. ಅದರೆ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಒಳ್ಳೆಯ ಸರಣಿಗಳು ಜನರ ಗಮನ ಸೆಳೆಯದೆ ಹೋಗಿವೆ, ಆ ರೀತಿ ಕೆಲವು ಅಂಡರ್‌ರೇಟೆಡ್ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಗಳು ಇಲ್ಲಿವೆ.
ಅನ್‌ದೇಖಿ:
ಸೋನಿ ಲೈವ್‌ನಲ್ಲಿ ಪ್ರಸಾರವಾಗುವ ಅನ್‌ದೇಖಿ ವೆಬ್ ಸೀರಿಸ್ ನೈಜ ಘಟನೆಯನ್ನು ಆಧರಿಸಿದ ಕ್ರೈಮ್ ಸರಣಿ. ನೋಡಲು ಭಯ ಹುಟ್ಟಿಸುವಂತಿದೆ.
ಅಪ್ಹರಣ್:
ಜಿಯೋ ಸಿನೆಮಾದಲ್ಲಿ ಪ್ರಸಾರವಾಗುತ್ತಿರುವ ಅಪ್ಹರಣ್ ವೆಬ್ ಸರಣಿಯು ಅಪರಾಧ, ನಾಟಕ, ಅಪಹರಣಗಳು ಮತ್ತು ರಹಸ್ಯಗಳಿಂದ ತುಂಬಿದೆ.
ನವೆಂಬರ್ ಸ್ಟೋರಿ:
ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸರವಾಗುತ್ತಿರುವ ನವೆಂಬರ್ ಸ್ಟೋರಿ ಕ್ರಿಮಿನಲ್ ಪ್ರಕರಣದಲ್ಲಿ ತನ್ನ ತಂದೆಯನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಮಗಳು ಹೋರಾಡುವ ಕಥೆಯನ್ನು ಹೊಂದಿದೆ.
crime thriller web series
ಕ್ರಿಮಿನಲ್ ಜಸ್ಟೀಸ್:
ಕ್ರಿಮಿನಲ್ ಜಸ್ಟೀಸ್ ವೆಬ್ ಸರಣಿಯು ಪ್ರತಿ ಋತುವಿನಲ್ಲಿ ವಿವಿಧ ಅಪರಾಧಗಳನ್ನು ಪರಿಹರಿಸುವ ವಕೀಲನ ಕಥೆ. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.
ಬ್ರೀತ್:
ಬ್ರೀತ್ ಅಮೆಜಾನ್ ಪ್ರೈಮ್ ವೀಡಿಯೋನಲ್ಲಿ ಸ್ಟ್ರೀಮ್ ಆಗುತ್ತಿರುವ ಆರ್ ಮಾಧವನ್ ಮತ್ತು ಅಮಿತ್ ಸಾಧ್ ಅಭಿನಯದ ಆಕರ್ಷಕ ಮತ್ತು ರಿವರ್ಟಿಂಗ್ ವೆಬ್ ಸರಣಿಯಾಗಿದೆ.
ಯೇ ಖಲಿ ಖಲಿ ಆಂಖೇ:
ಯೇ ಖಲಿ ಖಲಿ ಆಂಖೇ ವೆಚ್ ಸರಣಿಯ ಕಥೆಯು ರಾಜಕೀಯ ಬಲೆಗೆ ಬೀಳುವ ವ್ಯಕ್ತಿಯ ಸುತ್ತ ಸುತ್ತುತ್ತದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿದೆ.
ಹಸ್ಮುಖ್:
ನೆಟ್‌ಫ್ಲಿಕ್ಸ್‌ನಲ್ಲಿರುವ ಕ್ರೈಮ್ ಥ್ರಿಲ್ಲರ್ ಸೀರಿಸ್ ಹಸ್ಮುಖ್ ಹಾಸ್ಯನಟನ ಕೊಲೆಯ ಸುತ್ತ ಸುತ್ತುವ ಕಥೆಯಾಗಿದೆ.
ರಂಗಬಾಜ್:
Zee 5 ನಲ್ಲಿನ ಸ್ಟ್ರೀಮ್ ಆಗುತ್ತಿರುವ ರಂಗಬಾಜ್ ಸರಣಿಯು ಗ್ಯಾಂಗ್‌ಸ್ಟರ್ ರಾಜಕಾರಣಿಯಾಗುವ ಆಗುವ ಕಥೆಯಾಗಿದೆ
ಅಭಯ್:
ಭಯ್ ವೆಬ್ ಸರಣಿಯಲ್ಲಿ ಕುನಾಲ್ ಖೇಮು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇದು zee5 ನಲ್ಲಿ ಸ್ಟ್ರೀಮ್ ಆಗುತ್ತಿದೆ.
ರಾಯ್ಕರ್ ಕೇಸ್:
ರಾಯ್ಕರ್ ಕೇಸ್ ಸರಣಿಯು ರಾಜಕೀಯ ಕೊಲೆಯ ಸುತ್ತ ಸುತ್ತುವ ಕ್ರೈಮ್ ಥ್ರಿಲ್ಲರ್ ಆಗಿದೆ. ಇದು ಜಿಯೋ ಸಿನೆಮಾದಲ್ಲಿದೆ
ಹೋಸ್ಟೇಜಸ್:
ರೋನಿತ್ ರಾಯ್ ಮತ್ತು ಟಿಸ್ಕಾ ಚೋಪ್ರಾ ನಟಿಸಿರುವ ಅಪರಾಧ ಥ್ರಿಲ್ಲರ್ ವೆಬ್ ಸರಣಿ ಹೋಸ್ಟೇಜ್ .ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಶೀ:
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಶೀ ವೆಬ್ ಸೀರಿಸ್ ಅಂಡರ್ ಕವರ್ ಪ್ರಾಜೆಕ್ಟ್‌ನಲ್ಲಿರುವ ಮಹಿಳಾ ಕಾನ್‌ಸ್ಟೆಬಲ್ ಸುತ್ತ ಸುತ್ತುತ್ತದೆ