- Home
- Entertainment
- TV Talk
- ಆಂಟಿ ಆಂಟಿ ಅನ್ನೋಕೆ ನಾಚಿಕೆ ಆಗಲ್ವಾ?; ಹುಡುಗರ ಡಬಲ್ ಮೀನಿಂಗ್ ಕಾಮೆಂಟ್‌ಗೆ ನಟಿ ಕಸ್ತೂರಿ ಕ್ಲಾಸ್
ಆಂಟಿ ಆಂಟಿ ಅನ್ನೋಕೆ ನಾಚಿಕೆ ಆಗಲ್ವಾ?; ಹುಡುಗರ ಡಬಲ್ ಮೀನಿಂಗ್ ಕಾಮೆಂಟ್‌ಗೆ ನಟಿ ಕಸ್ತೂರಿ ಕ್ಲಾಸ್
ಪದೇ ಪದೇ ಟ್ರೋಲ್‌ಗೆ ಗುರಿಯಾಗುವ ಅನಸೂಯ ಭಾರದ್ವಾಜ್ ಪರ ನಿಂತ ನಟಿ ಕಸ್ತೂರಿ. ಸ್ಟಾರ್ ನಟರನ್ನು ಯಾಕೆ ಅಂಕಲ್ ಅನ್ನೋಲ್ಲ?

ತೆಲುಗು ಜನಪ್ರಿಯ ನಿರೂಪಕಿ ಕಮ್ ನಟಿ ಅನಸೂಯ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಗುರಿಯಾಗುವ ವ್ಯಕ್ತಿ. ನೇರವಾಗಿ ಉತ್ತರಿಸುವ ಮೂಲಕ ಗಾಸಿಪ್‌ಗಳಿಗೆ ಬ್ರೇಕ್ ಹಾಕುತ್ತಾರೆ.
ಕೆಲವು ದಿನಗಳಿಂದ ಅನಸೂಯ ಭಾರದ್ವಾಜ್‌ನ ಕೆಲವು ಪುಂಡ ಪೋಕರಿಗಳು ಆಂಟಿ ಆಂಟಿ ಎಂದು ಕರೆಯುತ್ತಿದ್ದರು. ಇದೆಲ್ಲಾ ಕಾಮನ್ ಎಂದು ಅನಸೂಯ ಸುಮ್ಮನಿದ್ದರೂ ಕಸ್ತೂರಿ ಸುಮ್ಮನಿರಲಿಲ್ಲ.
ತೆಲುಗು ಧಾರಾವಾಹಿ ಲೋಕದಲ್ಲಿ ಹೆಸರು ಮಾಡಿರುವ ನಟಿ ಕಸ್ತೂರಿ ತಾಳ್ಮೆ ಕೆಟ್ಟು ಆಂಟಿ ಎನ್ನು ಪದೇ ಪದೇ ಹೇಳುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮೂಲಕ ಅನಸೂಯಗೆ ಬೆಂಬಲ ಹೆಚ್ಚಾಗಿದೆ.
'ಪುಟ್ಟ ಮಕ್ಕಳು ಆಂಟಿ ಎಂದು ಕರೆಯುವುದಕ್ಕೂ ದೊಡ್ಡವರು ಆಂಟಿ ಎಂದು ಕರೆಯುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ' ಎಂದು ಕಸ್ತೂರಿ ಇತ್ತೀಚಿಗೆ ನಡೆದ ಖಾಸಗಿ ಸಂದರ್ಶನದಲ್ಲಿ ರಿಯಾಕ್ಟ್ ಮಾಡಿದ್ದಾರೆ.
'ನೀವು ದೊಡ್ಡವರಾಗಿ ಹೆಣ್ಣುಮಕ್ಕಳನ್ನು ಆಂಟಿ ಎಂದು ಕರೆಯುವುದು ದೊಡ್ಡ ತಪ್ಪು. ಯಾಕೆ ಹುಡುಗರು ಅಂಕಲ್ ಆಗಲ್ವಾ? ಹೆಣ್ಣು ಮಕ್ಕಳು ಮಾತ್ರಾ ಆಂಟಿನಾ?'
'ಒಬ್ಬ ಕಲಾವಿದ ಅಥವಾ ಸ್ಟಾರ್ ನಟನ ಬಳಿ ಹೋಗಿ ನೀವು ಅಂಕಲ್ ಎಂದು ಕರೆಯಲು ಸಾಧ್ಯವೇ? ಅವರಿಗೆ ವಯಸ್ಸಾಗಿದ್ದರೂ ಅಂಕಲ್ ಎಂದು ಕರೆಯುವುದಿಲ್ಲ. ಆಂಟಿ ಅನ್ನೋ ಪದಕ್ಕೆ ಡಬಲ್ ಮೀನಿಂಗ್ ಇದೆ'
'ಅನಸೂಯಗಿಂತ ಎರಡರಷ್ಟು ವಯಸ್ಸಾಗಿರುವ ನಾಯಕರಿದ್ದಾರೆ ಅವರಿಗೆ ಯಾಕೆ ಅಂಕಲ್ ಎಂದು ಕರೆಯುವುದಿಲ್ಲ? ಅಂಕಲ್ ಎಂದು ಕರೆಯಲು ಧೈರ್ಯ ಇದ್ಯಾ?'
'ಆಂಟಿ ಎಂದು ಕರೆಯುವುದಕ್ಕೆ ಎರಡು ಕಾರಣವಿದೆ...ಒಂದು ಆಂಟಿ ಎನ್ನುತ್ತಿರುವವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಇರುತ್ತದೆ ಮತ್ತೊಂದು ಅವರಿಗೆ ನೋವು ಮಾಡುವುದು. ಈ ವಿಚಾರದಲ್ಲಿ ನಾನು ಅನಸೂಯ ಪರ' ಎಂದಿದ್ದಾರೆ ಕಸ್ತೂರಿ.