Bigg Boss OTT; ವಾಸುಕಿ ಜೊತೆ ಬಿಗ್ ಮನೆಗೆ ಕಿಚ್ಚನ ಎಂಟ್ರಿ, ದೇವರಬಳಿ ಕೇಳಿಕೊಂಡಿದ್ದೇನು ಸುದೀಪ್?
ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಆಗಸ್ಟ್ 6 ರಂದು ಅದ್ದೂರಿಯಾಗಿ ಆರಂಭವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯನ್ನು ಕಿಚ್ಚ ಸುದೀಪ್ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಕಿಚ್ಚನ ಜೊತೆ ಗಾಯಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಆಗಸ್ಟ್ 6 ರಂದು ಅದ್ದೂರಿಯಾಗಿ ಆರಂಭವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯನ್ನು ಕಿಚ್ಚ ಸುದೀಪ್ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಕಿಚ್ಚನ ಜೊತೆ ಗಾಯಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಕಿಚ್ಚನ ಜೊತೆ ಬಿಗ್ ಮನೆಗೆ ಎಂಟ್ರಿ ಕೊಟ್ಟ ವಾಸುಕಿ ಮನೆಯ ನೋಡಿ ಸಖತ್ ಥ್ರಿಲ್ ಆದರು. ಬಿಗ್ ಮನೆಯ ಹಳೆಯ ನನಪನ್ನು ಮತ್ತೆ ಬಿಚ್ಚಿಟ್ಟರು. ಮನೆಯೊಳಗೆ ಹೋಗುತ್ತಿದ್ದಂತೆ ಸುದೀಪ್ ಅವರು ವಾಸುಕಿ ಬಳಿ ಮನೆಯ ಬಗ್ಗೆ ಕೇಳಿದರು. ಇದಕ್ಕೆ ವಾಸುಕಿ ಅತಿ ಹೆಚ್ಚು ಯುದ್ಧಗಳಾದ ಜಾಗವಿದು ಎಂದು ಮನೆಯ ಅಂಗಳದ ಬಗ್ಗೆ ವಿವರಿಸಿದರು.ವಾಸುಕಿ ಮಾತಿಗೆ ಕಿಚ್ಚ ಜೋರಾಗಿ ನಕ್ಕಿದರು.
ಬಳಿಕ ಇಬ್ಬರು ಸಂಪೂರ್ಣ ಮನೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟರು.ಮೊದಲ ದೇವರ ಮನೆಗೆ ಎಂಟ್ರಿ ಕೊಟ್ಟ ಸುದೀಪ್ ಮತ್ತು ವಾಸುಕಿ ದೇವರಿಗೆ ನಮಸ್ಕಾರ ಮಾಡಿದರು. ಆಗ ಸುದೀಪ್ ದೇವರ ಬಳಿ ಸ್ಪರ್ಧಿಗಳಿಗೆ ಒಳ್ಳೆಯ ಬುದ್ಧಿ ಕೊಡು, ಅವರು ಸರಿಯಾಗಿ ಮಾತನಾಡುವಂತೆ ಮಾಡು ತಾಯಿ ಎಂದು ಕೇಳಿಕೊಂಡರು. ಸ್ಪರ್ಧಿಗಳು ಸರಿಯಾಗಿ ಮಾತನಾಡಿದರೆ ನನಗೆ ಕ್ಷೇಮ ಎಂದು ಕಿಚ್ಚ ಕೇಳಿಕೊಂಡರು. ಬಳಿಕ ವಾಸುಕಿ ದೇವರ ನಾಮ ಹಾಡಿದರು.
ಲಿವಿಂಗ್ ರೂಮ್ ಕಡೆ ಹೊರಟ ಕಿಚ್ಚನಿಗೆ ಅಲ್ಲಿ ಇಟ್ಟಿದ್ದ ವಿಗ್ರಹ ಗಮನಸೆಳೆದಿದೆ. ಕಪ್ಪು ಬಣ್ಣದ ಮೂರ್ತಿ ಕಣ್ಣು ಮುಚ್ಚಿಕೊಂಡಿದೆ. ಇದನ್ನು ನೋಡಿದ ಕಿಚ್ಚ ವಾಸುಕಿ ಬಳಿ ಕೇಳಿದರು. ಬಳಿಕ ಇದು ನಾನೆ ಅಂತ ಅನಿಸುತ್ತಿದೆ ಎಂದು ಸುದೀಪ್ ಹೇಳಿದರು. ಯಾಕೆ ಅಂತ ಸುದೀಪ್ ವಿವರಣೆ ಕೂಡ ನೀಡಿದರು.
bigg boss
'ಇಲ್ಲಿ ನಡೆಯೋದು ನನ್ನ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ, ಏನು ಗೊತ್ತಿಲ್ಲದ ಹಾಗೆ ನಾನು ಇರಬೇಕು. ಕುತ್ತಿಗೆಯ ಭಾಗದಲ್ಲಿ ಇರುವ ಕೈ ಜನರು ಹಾಗೂ ಒಳಗಿರುವ ಸ್ಪರ್ಧಿಗಳದ್ದು. ಅವರು ನನ್ನ ಕುತ್ತಿಗೆಗೆ ಕೈ ಹಾಕಿಕೊಂಡಿರುತ್ತಾರೆ. ಈ ಮೂರ್ತಿಗೆ ಕೂದಲು ಮೀಸೆ ಇದ್ದಿದ್ದರೆ ನನ್ನ ರೀತಿಯೇ ಕಾಣುತ್ತಿತ್ತು. ತುಂಬಾ ಸಿಂಬಾಲಿಕ್ ಆಗಿದೆ’ ಎಂದರು ಸುದೀಪ್.
ಗಾಯಕ ವಾಸುಕಿ ವೈಭವ್ ಬಿಗ್ ಬಾಸ್ ಒಟಿಟಿಗಾಗಿ ಹಾಡನ್ನು ಸಹ ಬರೆದಿದ್ದಾರೆ. ಬಿಗ್ ಬಾಸ್ ಒಟಿಟಿ ವೇದಿಕೆ ಮೇಲೆ ಬಂದ ವಾಸುಕಿ ಬಿಗ್ ಬಾಸ್ ಗಾಗಿ ಬರೆದಿದ್ದ ಹಾಡನ್ನು ಹಾಡಿದರು.
ಬಿಗ್ ಬಾಸ್ ಒಟಿಟಿ ಕನ್ನಡ ಶೋನಲ್ಲಿ 16 ಸ್ಪರ್ಧಿಗಳು ಇರುತ್ತಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭ ಆಗಿದೆ.ಕೆಲವರ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಯಾರೆಲ್ಲ ಇರಲಿದ್ದಾರೆ ಎನ್ನುವ ಅಂತಿಮ ಪಟ್ಟೆ ಆಗಸ್ಟ್ 6 ಸಂಜೆ ವೇಳೆಗೆ ಹೊರಬೀಳಲಿದೆ.