'ನಿಂದ್ಯಾವಾಗ?' ದೀಪಿಕಾ ದಾಸ್ ಮದುವೆಯಾದ ಮೇಲೆ ಶೈನ್ ಶೆಟ್ಟಿಗೆ ಎದುರಾಗಿದೆ ಮರ್ಯಾದೆ ಪ್ರಶ್ನೆ!
ಶೈನ್ ಶೆಟ್ಟಿ ತಮಗೆ ಈಗ ಪದೇ ಪದೇ ಎದುರಾಗ್ತಿರುವ 'ಮರ್ಯಾದೆ ಪ್ರಶ್ನೆ'ಯ ಬಗ್ಗೆ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ದೀಪಿಕಾ ಮದುವೆಯಾಗಿದ್ದಕ್ಕೆ ಸಾಂತ್ವಾನ ಹೇಳ್ತಿದಾರೆ ಫ್ಯಾನ್ಸ್!
ಬಿಗ್ ಬಾಸ್ ಸೀಸನ್ 7 ಶುರುವಾದಾಗಲೇ ಶುರುವಾಗಿದ್ದು ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿಯ ಸ್ನೇಹ. ಈ ಸ್ನೇಹ ಸಂಬಂಧ ಅದಕ್ಕಿಂತ ಕೊಂಚ ಮುಂದೆಯೇ ಇದೆ ಎಂದು ನೋಡಿದ ವೀಕ್ಷಕರಾಗಲೇ ನಿರ್ಧರಿಸಿಬಿಟ್ಟಿದ್ದರು.
ಹಾಗಾಗಿ ಈ ಜೋಡಿಗೆ ಜನರೇ 'ಶಿನಿಕಾ' ಎಂದು ಹೆಸರಿಟ್ಟು, ತುಂಬಾ ಮುದ್ದಾದ ಜೋಡಿ ಎಂದು ಇವರಿಬ್ಬರನ್ನು ಒಟ್ಟಿಗೇ ನೋಡಿದಾಗೆಲ್ಲ ಸಂಭ್ರಮ ಪಡುತ್ತಿದ್ದರು.
ಇವರಿಬ್ಬರು ಕೂಡಾ ಬಿಗ್ ಬಾಸ್ ಮುಗಿದ ಮೇಲೂ ಉತ್ತಮ ಸ್ನೇಹ ಮುಂದುವರಿಸಿಕೊಂಡು ಬಂದಿದ್ದರು. ಇವರ ಮದುವೆ ಘೋಷಣೆ ಒಂದಲ್ಲ ಒಂದು ದಿನ ಬರುತ್ತೆ ಅಂತ ಫ್ಯಾನ್ಸ್ ಕಾಯುತ್ತಲೇ ಬಂದಿದ್ದರು.
ಆದರೆ, ಮಾರ್ಚ್ 1ರಂದು ಇದ್ದಕ್ಕಿದ್ದಂತೆ ದೀಪಿಕಾ, ದೀಪಕ್ ಎಂಬವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಆಯ್ತು ಎಂದು ಫೋಟೋ ಪೋಸ್ಟ್ ಮಾಡಿದಾಗ ಸಾಕಷ್ಟು ಜನ ಇದು ತಮಾಷೆ ಎಂದೇ ಎಣಿಸಿದರು.
ಆದರೆ, ನಂತರದಲ್ಲಿ ದೀಪಿಕಾ ಹೇಳಿದ್ದು ತಮಾಷೆಯಾಗಿರದೆ ನಿಜವಾದ ವಿವಾಹವಾಗಿತ್ತು. ಇದಾದ ಬಳಿಕ ಶೈನ್ ಶೆಟ್ಟಿಗೆ ದೊಡ್ಡದೊಂದು ಪ್ರಶ್ನೆ ಎಡೆಬಿಡದೆ ಎದುರಾಗುತ್ತಿದೆಯಂತೆ.
ಹೌದು, ಶೈನ್ ಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ 'ಅವರದ್ದು ಆಯ್ತಂತೆ, ನಿಂದ್ಯಾವಾಗ- ಮರ್ಯಾದೆ ಪ್ರಶ್ನೆ' ಎಂದು ಹಾಕಿಕೊಂಡಿದ್ದು, ಇದು ದೀಪಿಕಾ ದಾಸ್ ಮದುವೆಗೆ ಸಂಬಂಧಪಟ್ಟಿರುವುದೇ ಆಗಿದೆ ಎಂದು ಫ್ಯಾನ್ಸ್ ನಿಶ್ಚಯಿಸಿಬಿಟ್ಟಿದ್ದಾರೆ.
ಹಾಗಾಗೇ ಶೈನ್‌ಗೆ ವಿಧ ವಿಧ ರೀತಿಯಲ್ಲಿ ಸಮಾಧಾನ ಹೇಳುತ್ತಿದ್ದಾರೆ. ಜೊತೆಗೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಣ್ಣ ಎಂದು ವೇದಾಂತ ಮಾತಾಡುತ್ತಿದ್ದಾರೆ.
ಕೆಲವರು ಪ್ರೀತಿಯ ಪಾರಿವಾಳ ಹಾರಿ ಹೋಯ್ತೋ ಗೆಳೆಯ ಎಂದು ಹಾಡಿನ ಸಾಲನ್ನು ಮಾರ್ಮಿಕವಾಗಿ ಹಾಕುತ್ತಿದ್ದರೆ ಮತ್ತೆ ಕೆಲವರು, ಅದೇ ಯಾವಾಗ ಎಂದು ಮತ್ತದೇ ಪ್ರಶ್ನೆ ಕೇಳುತ್ತಾ ಕಾಲೆಳೆಯುತ್ತಿದ್ದಾರೆ.
ಮತ್ತೆ ಕೆಲ ಅಭಿಮಾನಿಗಳು, ಮರ್ಯಾದೆ ಪ್ರಶ್ನೆ ಎನ್ನೋದು ನೋಡಿದ್ರೆ ಶೈನ್ ತಮ್ಮ ಮದುವೆ ಬಗ್ಗೆ ಹಿಂಟ್ ಕೊಡ್ತಿದಾರೆ ಅನ್ಸುತ್ತೆ ಅಂತ ಪತ್ತೆದಾರಿ ಪಾಪಣ್ಣ ಹಾಗೆ ಮಾತಾಡ್ತಿದಾರೆ.
ಆದ್ರೆ 'ಮರ್ಯಾದೆ ಪ್ರಶ್ನೆ' ಎನ್ನೋದು ಯಾವುದಾದರೂ ಹೊಸ ಚಿತ್ರದ ಕುರಿತ ಹಿಂಟ್ ಕೂಡಾ ಆಗಿರ್ಬೋದು ಎಂದು ಕೆಲವರಷ್ಟೇ ಕಾಮೆಂಟ್ ಮಾಡಿದ್ದಾರೆ.